ವಿಟ್ಲದಲ್ಲಿ ಎಂ.ಜಿ.ಆರ್. ಕಾರ್ಪೋರೇಶನ್, ಇಂದಿರಾ ಜನಸೇವಾ ಕೇಂದ್ರದ ಉದ್ಘಾಟನೆ

0

*ಜನರ, ಜನಪ್ರತಿನಿಧಿಗಳ, ಸರಕಾರದ ನಡುವಿನ ಕೊಂಡಿಯಾಗಿದೆ ಇಂದಿರಾ ಜನಸೇವಾ ಕೇಂದ್ರ: ಯು.ಟಿ.ಖಾದರ್
*ಸಂಸ್ಥೆಗಳು ಸಮಾಜಮುಖಿಯಾದಾಗ ಬೆಳವಣಿಗೆ ಹೆಚ್ಚು: ಒಡಿಯೂರು‌ ಶ್ರೀ ಸ್ವಾಮೀಜಿ
*ಇದೊಂದು ಜನೋಪಯೋಗಿ ಅತ್ಯದ್ಭುತ ಯೋಜನೆ: ಎಂ.ಎಸ್.ಮಹಮ್ಮದ್

ವಿಟ್ಲ: ಬಹುಮುಖ ಜನರಿಗೆ ಪ್ರಯೋಜನವಾಗುವ ವಾಣಿಜ್ಯ ಕಚೇರಿ ವಿಟ್ಲದಲ್ಲಿ ಆರಂಭಿಸಲಾಗಿದ್ದು, ಇಂದಿಲ್ಲಿ‌ ಅದು ಉದ್ಘಾಟನೆ ಗೊಳಿಸಲಾಗಿದೆ‌. ಜನರ, ಜನಪ್ರತಿನಿಧಿಗಳ ಹಾಗೂ ಸರಕಾರದ ನಡುವಿನ ಕೊಂಡಿಯಾಗಿ ಇಂದಿರಾ ಜನಸೇವಾ ಕೇಂದ್ರ ಕಾರ್ಯನಿರ್ವಹಿಸಲಿದೆ. ಇಂದಿರಾ ಜನಸೇವಾ ಕೇಂದ್ರದ ಶಾಖೆಗಳನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ಪ್ರತೀ ಗ್ರಾಮೀಣ ಭಾಗದಲ್ಲಿ ತೆರೆಯುವ ಇರಾದೆಯನ್ನು ಇದರ ಆಡಳಿತ ಮಂಡಳಿ ಹೊಂದಿದೆ. ಬಹು ವ್ಯಕ್ತಿತ್ವ ಹೊಂದಿರುವ ಯುವಕರಿಂದ ಆರಂಭವಾದ ಸಂಸ್ಥೆ‌ಗೆ ಯಶಸ್ಸಾಗಲಿ ಎಂದು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್ ರವರು ಹೇಳಿದರು.

ಅವರು ವಿಟ್ಲ – ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿರುವ ಎಂ.ಜಿ.ಆ‌ರ್ ಕಾರ್ಪೋರೇಶನ್ ಮತ್ತು ಇಂದಿರಾ ಜನಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಈ ಒಂದು ಯೋಜನೆಗಳನ್ನು ಕೇಳಿದರೆ ತುಂಬಾ ಸಂತೋಷವಾಗುತ್ತದೆ. ಮುಂದಿನ ದಿನಗಳಲ್ಲಿ ತನ್ನ ಕ್ಷೇತ್ರಕ್ಕೂ ಇದನ್ನು ವಿಸ್ತರಿಸುವ ಬಗ್ಗೆ ಮಾತುಕತೆ ನಡೆದಿದ್ದು, ಇದಕ್ಕೆ ಆಡಳಿತ ಮಂಡಳಿಯವರು ಒಪ್ಪಿಗೆ ಸೂಚಿಸಿದ್ದಾರೆ. ದೇಶದ ಜನಸಾಮಾನ್ಯರಿಗೆ ಸ್ವಾಭೀಮಾನದ ಬದುಕು ಕೊಡುವ ಕೆಲಸ ಈ ಸಂಸ್ಥೆಯಿಂದ ಆಗಲಿ ಎಂದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಗಮಿಸಿ ಸಂಸ್ಥೆಯಲ್ಲಿ ಆರಂಭಿಸಲಿರುವ ನೂತನ ಚಾನಲ್ ನ ಸ್ಟುಡಿಯೋವನ್ನು ಉದ್ಘಾಟಿಸಿ ಮಾತನಾಡಿ ಧನಬಲ ಒಂದು ಭಾಗವಾದರೆ ಜನಬಲ ಇನ್ನೊಂದು ಭಾಗ. ಜನಬಲವೇ ದೊಡ್ಡ ಬಲ. ಜನಬಲವಿದ್ದರೆ ಧನಬಲ ತನ್ನಿಂತಾನೆ ಬರುತ್ತದೆ. ಸಮಾಜ ಮುಖಿ‌ ವಿಚಾರಕ್ಕೆ ಒತ್ತುಕೊಡುವುದು ಉತ್ತಮ. ಸಂಸ್ಥೆಗಳು ಸಮಾಜಮುಖಿಯಾದಾಗ ಬೆಳವಣಿಗೆ ಹೆಚ್ಚು. ಪ್ರಾಮಾಣಿಕತೆ ಇಲ್ಲದೆ ಯಶಸ್ಸಿಲ್ಲ. ಪರಿಶ್ರಮ ಹಾಗೂ ಯಶಸ್ಸು ಜೊತೆಗಿದ್ದಾಗ ಯಶಸ್ಸು ಖಂಡಿತ ಎಂದರು.

ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ ಇದೊಂದು ಅದ್ಭುತವಾದ ಯೋಜನೆ, ಜನೋಪಯೋಗಿ ಯೋಜನೆ ಇದಾಗಿದೆ‌. ಬೆಳೆಯುತ್ತಿರುವ ವಿಟ್ಲ ಪೇಟೆಗೆ ಇಂತಹ ಸಂಸ್ಥೆಯ ಅವಶ್ಯಕತೆ ಬಹಳಷ್ಟಿದೆ. ಸಮಾಜದಲ್ಲಿ ಸಹೋದರತೆಯನ್ನು ಸಾರುವ ಕೆಲಸ ಈ ಕಾರ್ಯಕ್ರಮದಿಂದ ಆಗಿದೆ ಎಂದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಮಾಹಲಿಂಗ ನಾಯ್ಕ್ ಅಮೈ ಹಾಗೂ ಚಂದ್ರಶೇಖರ ಗಿರಿನಿವಾಸ‌ರವರನ್ನು ಸನ್ಮಾನಿಸಲಾಯಿತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬಂಗಾರು ಅರಸರು ವಿಟ್ಲ ಅರಮನೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕದ ಅಶೋಕ್ ಕುಮಾರ್ ರೈ, ಮಾಜಿ ಸಚಿವ ರಮಾನಾಥ ರೈ, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷರಾಗಿರುವ ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ವಿ.ಕೆ.ಎಂ.ಅಶ್ರಫ್, ಅಶೋಕ್ ಕುಮಾರ್ ಶೆಟ್ಟಿ,ಬಿಲ್ಡರ್ ಅಬ್ದುಲ್ ಹಮೀದ್ ಪಾವೂರು, ನಿವೃತ್ತ ಉಪತಹಶೀಲ್ದಾರ್ ಡಿ.ಬಿ. ಅಬೂಬಕ್ಕರ್ ಒಕ್ಕೆತ್ತೂರು, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೊಪ್ಪಳ, ವಿಟ್ಲ ಡಿಗ್ರೂಪ್ ನ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಉದ್ಯಮಿ ಅಬ್ದುಲ್ ಹಾಜಿ ಬೈರಿಕಟ್ಟೆ, ವಿಟ್ಲ ಜೆ.ಸಿ.ಐ ಅಧ್ಯಕ್ಷ ಸಂತೋಷ್ ಕುಮಾರ್ ಪೆಲ್ತಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮದುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಪಾಲುದಾರರಾದ ಮಹಮ್ಮದ್ ರಾಫೀ ಸ್ವಾಗತಿಸಿದರು. ಮಹಮ್ಮದ್ ಗೌಸ್ ಹಾಗೂ ಅಬ್ದುಲ್ ಮಜೀದ್ ಸಹಕರಿಸಿದರು.

ಎಂ.ಜಿ.ಆರ್ ಕಾರ್ಪರೇಶನ್ ಅಂದರೆ…
ಎಂ.ಜಿ.ಆರ್ ಕಾರ್ಪರೇಶನ್ ಎಂದರೆ ಒಂದೇ ಸೂರಿನಡಿ‌ ಹಲವಾರು ಉದ್ಯಮಗಳನ್ನು ಮಾಡುವಂತಹ ಸಂಸ್ಥೆ. ಇದರಡಿಯಲ್ಲಿ ಮುಖ್ಯವಾಗಿ ರಿಯಲ್ ಎಸ್ಟೇಟ್ ಮತ್ತು ಕನ್ಸ್ ಸ್ಟ್ರೆಕ್ಷನ್. ವಿಶೇಷವಾಗಿ ಮಧ್ಯಮ ವರ್ಗದವರಿಗೆ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಕೈಗೆಟಕುವ ರೀತಿಯಲ್ಲಿ ಅಪಾರ್ಟ್ ಮೆಂಟ್ ಮತ್ತು ಮನೆ ನಿರ್ಮಾಣದ ಉದ್ದೇಶ ಸಂಸ್ಥೆಯದ್ದಾಗಿದೆ. ಜೊತೆಗೆ ಮ್ಯಾನ್ ಪವರ್, ದೇಶ ಹಾಗೂ ವಿದೇಶಗಳಲ್ಲಿ ಉದ್ಯೋಗಾವಕಾಶ, ಉನ್ನತ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ. ಇದರೊಂದಿಗೆ ಹೋಟೆಲ್ & ಟೂರಿಸಂ ನಡೆಸುವ ಇರಾದೆಯನ್ನು ಹೊಂದಿದೆ. ದೃಶ್ಯ ಮಾಧ್ಯಮಗಳಲ್ಲಿ ಇದೀಗಾಗಲೇ ಬ್ರ್ಯಾಂಡ್ ಕನ್ನಡ, ಕನ್ನಡ ಡೈರಿ ಹಾಗೂ ಡ್ರೀಂ ಫ್ಲ್ಯಾನ್ ಎನ್ನುವ ಮೂರು ಯೂಟುಬ್ ಚಾನಲ್ ಗಳ ಜೊತೆಗೆ ವೆಬ್ ಪೋರ್ಟಲ್ ಗಳನ್ನು ಹೊಂದಿದೆ. ಸೇವೆ ಭಾಗವಾಗಿ ಈ ಭಾಗದ ಜನರಿಗೆ ಸಹಕಾರಿಯಾಗಲೆಂದು ಇಂದಿರಾ ಜನಸೇವಾ ಕೇಂದ್ರವನ್ನು ಆರಂಭಿಸಲಾಗಿದೆ. ಇದೊಂದು ಖಾಸಾಗಿ ಕೇಂದ್ರವಾಗಿದ್ದು, ಇದು ಜನರ ಕಷ್ಟ ನೋವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದೆ. ಜನರ ಸಮಸ್ಯೆಯನ್ನು ಸರಕಾರ ಮತ್ತು ಸಂಬಂಧಪಟ್ಟವರಿಗೆ ತಲುಪಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಈ ಭಾಗದ ಜನರಿಗೆ ಹೊರೆಯಾಗದ ರೀತಿಯಲ್ಲಿ ಇತರ ಆನ್ ಲೈನ್ ಸೇವೆಗಳನ್ನು ಸಂಸ್ಥೆ ನೀಡಲಿದೆ. ಎಲ್ಲರ ಸಹಕಾರ ಅಗತ್ಯ.

-ಮಹಮ್ಮದ್ ರಫೀ, ಆಡಳಿತ ಪಾಲುದಾರರು

LEAVE A REPLY

Please enter your comment!
Please enter your name here