ಪುತ್ತೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಶ್ರೀ ರಾಮಲಲ್ಲನ ಪ್ರತಿಷ್ಠಾಪನ ಪ್ರಯುಕ್ತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀ ರಾಮನ ದಿಗ್ವಿಜಯದ ಸಂಕೇತವಾಗಿ ಸೀಮೆಗೆ ಸಂಬಂಧಿಸಿ ಮೂರು ದಿವಸ ಪುತ್ತೂರು ತಾಲೂಕಿನ ದೇವಸ್ಥಾನಗಳಿಗೆ ಭೇಟಿ ನೀಡಲಿರುವ ಶ್ರೀ ರಾಮಶ್ವ ಯಾತ್ರೆಗೆ ಜ.19ರಂದು ದೇವಳದ ರಥ ಬೀದಿಯಲ್ಲಿ ಚಾಲನೆ ನೀಡಲಾಯಿತು.
ಆಯೋಧ್ಯೆಯಲ್ಲಿ ಕರಸೇವಕರಾಗಿ ಪಾಲ್ಗೊಂಡವರು ತೆಂಗಿನ ಕಾಯಿ ಒಡೆಯುವ ಮೂಲಕ ಶ್ರೀ ರಾಮಶ್ವ ಯಾತ್ರೆಗೆ ಚಾಲನೆ ನೀಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ್ ಗೌಡ, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಡಾ,ಸುಧಾ ಎಸ್ ರಾವ್, ಬಿ.ಕೆ.ವೀಣಾ, ಆಯೋದ್ಯೆ ಕರಸೇವಕರಾದ ಶೇಖರ್ ನಾರಾವಿ, ರಾಜೇಶ್ ಬನ್ನೂರು, ಸುರೇಂದ್ರ ಆಚಾರ್ಯ, ಪಿ.ಜಿ ಚಂದ್ರಶೇಖರ್, ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ಜೊತೆಗಿದ್ದ ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರವೀಂದ್ರ, ಜನಾರ್ದನ ಬೆಟ್ಟ, ರಾಧಾಕೃಷ್ಣ ನಂದಿಲ, ಸುದರ್ಶನ್, ಜಯರಾಜ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ವಿಶಾಖ್ ರೈ ಕಾರ್ಯಕ್ರಮ ನಿರ್ವಹಿಸಿದರು.