ದಿಲ್ಲಿ ಗಣರಾಜ್ಯೋತ್ಸವಕ್ಕೆ ಆಯ್ಕೆಯಾಗಿದ್ದ 22 ಪೌರ ಕಾರ್ಮಿಕರ ನಾಮನಿರ್ದೇಶನ ರದ್ದುಗೊಳಿಸಿದ ಪೌರಾಡಳಿತ ನಿರ್ದೇಶನಾಲಯ

0

ಪುತ್ತೂರು:2024ರ ಜ.26ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲು ಕರ್ನಾಟಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಗೊಂಡಿರುವ 22 ಮಹಿಳಾ ಪೌರ ಕಾರ್ಮಿಕರ ನಾಮ ನಿರ್ದೇಶನಗಳನ್ನು ಆಡಳಿತಾತ್ಮಕ ಕಾರಣಗಳಿಂದ ರದ್ದುಗೊಳಿಸಿ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದೆ.


ಗಣರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿಯಾಗಿ ರಾಜ್ಯದ 22 ಪೌರ ಕಾರ್ಮಿಕ ಮಹಿಳೆಯರನ್ನ ಆಯ್ಕೆ ಮಾಡಲಾಗಿತ್ತು.ದಕ್ಷಿಣ ಕನ್ನಡ ಜಿಲ್ಲೆಯಿಂದ ಏಕೈಕ ಪೌರಕಾರ್ಮಿಕ ಮಹಿಳೆಯಾಗಿ ಪುತ್ತೂರು ನಗರಭೆಯ ಪೌರಕಾರ್ಮಿಕೆ ಗುಲಾಬಿ ಅವರು ಆಯ್ಕೆಗೊಂಡಿದ್ದರು.ಇದೀಗ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಈ ಆದೇಶ ರದ್ದುಗೊಳಿಸಿದೆ.ನವದೆಹಲಿಯ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲು ರಾಜ್ಯದ 22 ನಗರ ಸ್ಥಳೀಯ ಸಂಸ್ಥೆಗಳಿಂದ 22 ಮಹಿಳಾ ಪೌರ ಕಾರ್ಮಿಕರು ಮತ್ತು ಅವರ ಸಂಗಾತಿಗಳ ನಾಮ ನಿರ್ದೇಶನಗಳನ್ನು ಕೇಂದ್ರ ಸರಕಾರವು ಅಂತಿಮಗೊಳಿಸಿ ಆಯ್ಕೆ ಮಾಡಲಾಗಿತ್ತು.ಆದರೆ,ಕರ್ನಾಟಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಽಗಳು ಆಯ್ಕೆಯಾಗದೇ ಇರುವ ಕುರಿತು ಈಗಾಗಲೇ ಆಯ್ಕೆಗೊಂಡಿರುವ ಎಲ್ಲಾ ನಾಮ ನಿರ್ದೇಶನಗಳನ್ನು ಆಡಳಿತಾತ್ಮಕ ಕಾರಣಗಳಿಂದ ರದ್ದುಗೊಳಿಸಿ, ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದೆ.ಉಲ್ಲೇಖಿತ ಕೇಂದ್ರ ಸರಕಾರದ ಪರಿಷ್ಕೃತ ಆದೇಶದ ಪ್ರತಿಯನ್ನು ಅಡಕವಿರಿಸಿ ಅಗತ್ಯ ಕ್ರಮಕ್ಕಾಗಿ ರವಾನಿಸಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಮತ್ತು ಆಯ್ಕೆಗೊಂಡಿರುವ ಪೌರಕಾರ್ಮಿಕರಿರುವ ಸ್ಥಳಿಯಾಡಳಿತಕ್ಕೆ ಆದೇಶ ಪ್ರತಿಯನ್ನು ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here