ಪುತ್ತೂರು: ಕೊಡಿಪ್ಪಾಡಿ ಗ್ರಾಮದ ವಿದ್ಯಾರ್ಥಿನಿಯೋರ್ವಳಿಗೆ ಪುತ್ತೂರು ಶಾಸಕರು ಆರ್ಥಿಕ ನೆರವು ನೀಡಿದರು. ಈಕೆಯ ತಂದೆ ಇತ್ತೀಚೆಗೆ ನಿಧನರಾಗಿದ್ದು ಆರ್ಥಿಕ ಸಂಕಷ್ಟಕ್ಕೆ ಓಳಗಾಗಿದ್ದರು.ಅದರಿಂದ ಆಕೆಯ ಶಿಕ್ಷಣಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಕುಟುಂಬ ನೆರವು ನೀಡುವಂತೆ ಶಾಸಕರಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂಧಿಸಿದ ಶಾಸಕರು ವಿದ್ಯಾರ್ಥಿನಿಯ ಶಾಲೆಯ ಶುಲ್ಕವನ್ನು ಪೂರ್ತಿಯಾಗಿ ಪಾವತಿಸುವ ಮೂಲಕ ಕುಟುಂಬಕ್ಕೆ ಶಾಸಕರು ಆಸರೆಯಾಗಿದ್ದಾರೆ.