ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಪರಿಸರದಲ್ಲಿ ಏರ್ಟೆಲ್ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು ಮೊಬೈಲ್ ಬಳಕೆದಾರರು ತೊಂದರೆಗೆ ಸಿಲುಕಿದ್ದಾರೆ. ಕೌಡಿಚ್ಚಾರು ಜಂಕ್ಷನ್ನಲ್ಲಿ ಏರ್ಟೆಲ್ ಟವರ್ ಇದ್ದರೂ ಟವರ್ನಡಿಯಲ್ಲೇ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ಹಗಲು ಹೊತ್ತಿನಲ್ಲಿ ಸರಿಯಾಗಿ ನೆಟ್ವರ್ಕ್ ಇದ್ದರೂ ರಾತ್ರಿ ವೇಳೆ ನೆಟ್ವರ್ಕ್ ಕಡಿತಗೊಳ್ಳುತ್ತಿದ್ದು ಮೊಬೈಲ್ ಬಳಕೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮೊಬೈಲ್ ಬಳಕೆದಾರರಿಗೆ ತೊಂದರೆ
ಅರಿಯಡ್ಕ ಗ್ರಾಮದ ಕೌಡಿಚ್ಚಾರು ಪರಿಸರದಲ್ಲಿ ಸುಮಾರು 300 ಕ್ಕೂ ಅಧಿಕ ಏರ್ಟೆಲ್ ಸಿಮ್ ಬಳಕೆದಾರರಿದ್ದು ನೆಟ್ವರ್ಕ್ ಸಮಸ್ಯೆಯಿಂದಾಗಿ ತೊಂದರೆಗೀಡಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸವೂ ಇಂಟರ್ನೆಟ್ ಮೂಲಕವೇ ಆಗುವುದರಿಂದ ನೆಟ್ವರ್ಕ್ ಬಹಳ ಅಗತ್ಯವಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ನೆಟ್ವರ್ಕ್ ಸಮಸ್ಯೆಯಿಂದ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.
ಗ್ರಾಹಕರಿಗೆ, ವ್ಯಾಪಾರಸ್ಥರಿಗೂ ತೊಂದರೆ
ಇಂದಿನ ದಿನಗಳಲ್ಲಿ ಗೂಗಲ್ಪೇ, ಫೋನ್ಪೇ ಇತ್ಯಾದಿಗಳ ಮೂಲಕವೇ ಹಣದ ವ್ಯವಹಾರ ಹೆಚ್ಚಾಗಿ ನಡೆಯುತ್ತಿರುವುದರಿಂದ ನೆಟ್ವರ್ಕ್ ಇಲ್ಲದೇ ಇರುವುದರಿಂದ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ತೊಂದರೆಯಾಗಿದೆ. ಅಂಗಡಿಗಳಿಗೆ ವಸ್ತುಗಳನ್ನು ಖರೀದಿಸಿದರೆ ಹಣ ಪಾವತಿಸಲು ನೆಟ್ವರ್ಕ್ ಸಮಸ್ಯೆ ಕಾಡುತ್ತಿದ್ದು ಗ್ರಾಹಕರು ಪರದಾಡಬೇಕಾಗಿದೆ. ಹಗಲು ಹೊತ್ತಿನಲ್ಲಿ ನೆಟ್ವರ್ಕ್ ಸರಿಯಾಗಿದ್ದರೂ ರಾತ್ರಿ ವೇಳೆ ಕಡಿತಗೊಳ್ಳುತ್ತಿದೆ ಅಲ್ಲದೆ ವಾರದಲ್ಲಿ ಮೂರೇ ದಿನ ಸರಿಯಾಗಿ ನೆಟ್ವರ್ಕ್ ಇರುತ್ತದೆ ಎಂದು ಸಾರ್ವಜನಿಕರು ದೂರಿದ್ದು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಏರ್ಟೆಲ್ ಟವರ್ನಡಿಯಲ್ಲೇ ಇದ್ದರೂ ನೆಟ್ವರ್ಕ್ ಸಮಸ್ಯೆಯಿಂದ ವ್ಯವಹಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಆನ್ಲೈನ್ ಬುಕ್ಕಿಂಗ್, ಹಣ ಪಾವತಿಸಲು ಸಮಸ್ಯೆಯಾಗುತ್ತಿದೆ. ನೆಟ್ವರ್ಕ್ ಹಗಲು ಇದ್ದರೂ ರಾತ್ರಿ ಸಮಯದಲ್ಲಿ ಇರುವುದಿಲ್ಲ. ನೆಟ್ವರ್ಕ್ ಸರಿಯಾಗಿ ಇಲ್ಲದೇ ಇರುವುದರಿಂದ ಎಲ್ಲರಿಗೂ ತೊಂದರೆಯಾಗಿದೆ.
ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಉದ್ಯಮಿ ಕೌಡಿಚ್ಚಾರು