ಅಯೋಧ್ಯೆಯಲ್ಲಿ ಶಿಲಾನ್ಯಾಸದ ದಿನ ನೆಟ್ಟ ಅಶ್ವತ್ಥ ಗಿಡ, ಪ್ರತಿಷ್ಠಾಪನೆಯ ದಿನ ಅಶ್ವತ್ಥೋಪನಯನ
ಪುತ್ತೂರು:ಕಳೆದ ಮೂರು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮ ಭವ್ಯ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ದಿನವೇ ಮುಕ್ವೆ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿ ನೆಡಲಾಗಿದ್ದ ಅಶ್ವತ್ಥ ಗಿಡಕ್ಕೆ ರಾಮ ಮಂದಿರ ಪ್ರತಿಷ್ಠಾಪನೆಯ ದಿನವೇ ಅಶ್ವತ್ಥೋಪನಯನ ಕಾರ್ಯಕ್ರಮಗಳು ನಡೆಯುತ್ತಿದೆ.
2020ರ ಆ.5ರಂದು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದರು. ಅದರ ಸವಿ ನೆನಪಿಗಾಗಿ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ಅಶ್ವತ್ಥ ಗಿಡವೊಂದನ್ನು ನೆಡಲಾಗಿತ್ತು. ಇದೀಗ ಸುಮಾರು 3 ವರ್ಷಗಳ ನಂತರ ಶ್ರೀರಾಮ ಭವ್ಯ ಮಂದಿರ ನಿರ್ಮಾಣಗೊಂಡು ಜ.22ರಂದು ಬಾಲ ರಾಮನ ಪ್ರತಿಷ್ಠೆ ನಡೆಯುವ ಸಂಭ್ರಮದ ದಿನವೇ ಅಶ್ವತ್ಥ ಗಿಡಕ್ಕೆ ಉಪನಯನ ಕಾರ್ಯಕ್ರಮಗಳು ಪೂರ್ವ ಸಂಪ್ರದಾಯದಂತೆ ನಡೆಯಲಿದೆ.
ಅಶ್ವತ್ಥ ಉಪನಯನ ಕಾರ್ಯಕ್ರಮದಲ್ಲಿ ಜ.21ರಂದು ಸಂಜೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ ಪುಣ್ಯಾಹ ವಾಚನ, ವಾಸ್ತು ಹೋಮ ರಕ್ಷೋಘ್ನ ಹೋಮ.
ಜ.22 ಪ್ರಾತಃಕಾಲ ಶ್ರೀ ದೇವರಿಗೆ ಅಷ್ಟೋತ್ತರ ಸಂಖ್ಯೆಯಲ್ಲಿ ಸೀಯಾಳ ಅಭಿಷೇಕ ಬೆಳಿಗ್ಗಿನ ಪೂಜೆ, ನಂತರ ಅಶ್ವತ್ತಾ ಪ್ರತಿಷ್ಟಾ ಕಲಷಾಭಿಷೇಕ, ಉಪನಯನ, ವಾಧ್ಯ ಭಜನೆಯೊಂದಿಗೆ ಮುಕ್ವೆಯಿಂದ ವಧು ದಿಬ್ಬಣ ಆಗಮಿಸಲಿದೆ. ಬಳಿಕ ಸಭಾ ಕಾರ್ಯಕ್ರಮ ಮತ್ತು ಅಯೋಧ್ಯೆ ಕರಸೇವಕರಿಗೆ ಗೌರವಾರ್ಪಣೆ. ಮದ್ಯಾಹ್ನ ಶುಭಮುಹೂರ್ತದಲ್ಲಿ ಅಶ್ವತ್ತ ವಿವಾಹ ಮತ್ತು ಕಲ್ಪೊಕ್ತ ಪೂಜೆ. ನಂತರ ಶ್ರೀ ದೇವರ ಸನ್ನಿಧಿಯಲ್ಲಿ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.