ಇರ್ದೆಯಲ್ಲಿ ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆ ಘಟ ಸಮಿತಿಗಳ ಜಂಟಿ ವಾರ್ಷಿಕೋತ್ಸವ,ಸಾಮೂಹಿಕ ಶ್ರೀಸತ್ಯದತ್ತ ವ್ರತ ಪೂಜೆ, ವಿಕಾಸ ವಾಹಿನಿ ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ

0

ಪುತ್ತೂರು; ಕಡಲು ವಿಸ್ತಾರವಾಗಿ, ಆಳವಾಗಿದ್ದರೂ ತೆರೆ ಬರುತ್ತಲೇ ಇರುತ್ತದೆ. ತೆರೆ ಬಂದು ಕಸಗಳನ್ನು ಹೊರ ಹಾಕಿದಾಗ ಕಡಲು ಸ್ವಚ್ಚವಾಗುತ್ತದೆ. ಅದೇ ರೀತಿ ನಮ್ಮ ಜೀವನದಲ್ಲಿ ಸುಖಗಳಂತೆ ಕಷ್ಟಗಳು ಬಂದಾಗ ಮನಸ್ಸು ಸ್ವಚ್ಚವಾಗಲು ಸಾಧ್ಯ. ಜೀವನದಲ್ಲಿ ಕಷ್ಟ ಸುಖಗಳಿರುವುದು ಆಶ್ಚರ್ಯವಲ್ಲ. ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಅದಕ್ಕಾಗಿ ಆಧ್ಯಾತ್ಮಿಕತೆಯ ಜೊತೆಗೆ ಬದುಕುಬೇಕು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ಹೇಳಿದರು.


ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಂಗಮ ಶ್ರೀ ಸಭಾಂಗಣದಲ್ಲಿ ಜ.19ರಂದು ನಡೆದ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆ ಇರ್ದೆ, ಉಪ್ಪಳಿಗೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಘಟ ಸಮಿತಿ ಇದರ ಜಂಟಿ ವಾರ್ಷಿಕೋತ್ಸವ, ಸಾಮೂಹಿಕ ಶ್ರೀಸತ್ಯದತ್ತ ವ್ರತ ಪೂಜೆ ಮತ್ತು ವಿಕಾಸ ವಾಹಿನಿ ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಮನೆಯಲ್ಲಿ ಪರಸ್ಪರ ಅನ್ಯೋನ್ಯತೆ, ಪ್ರೀತಿ ವಿಶ್ವಾಸ ಕೂಡಿರಬೇಕು. ಒಬ್ಬರನೊಬ್ಬರು ಅರಿತು ಬದುಕಿದರೆ ಜೀವನ ಸಾರ್ಥಕವಾಗಲಿದೆ. ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ಸಹಕಾರದ ಜೊತೆಗೆ ಆಧ್ಯಾತ್ಮಿಕ, ಧರ್ಮ ಪ್ರಜ್ಷ ಮೂಡಿಸಲಾಗುತ್ತಿದೆ. ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ಧಿ ಎಂಬ ಉದ್ದೇಶದಿಂದ ಯೋಜನೆ ಅರಂಭಿಸಲಾಗಿದ್ದು ಸ್ವಾವಲಂಬಿ ಬದುಕ ನಮ್ಮದಾಗಲು ಸ್ವ ಸಹಾಯ ಸಂಘ ಸಹಕಾರಿಯಾಗಲಿದೆ ಎಂದರು.


ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಹಕಾರಿಯು 14 ವರ್ಷಗಳಲ್ಲಿ ರೂ.275 ಕೋಟಿ ಠೇವಣಿ ಪಡೆದು ಲಾಭಾಂಶ ವಿತರಣೆ ಹಾಗೂ ಸಹಕಾರ ನೀಡಿರುವ ವಿವಿಧೋದ್ದೇಶ ಸಹಕಾರಿ ಸಂಘಗಳಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘವೂ ಒಂದು. ಈ ಸಂಘದ ಬಡ ಕುಟುಂಬಳಿಗೆ ಸಹಕಾರ ನೀಡುವ ಮೂಲಕ ಸುಮಾರು 67 ಸಾವಿರ ಕುಟುಂಬಗಳ ಬದುಕು ಬೆಳಗಿಸಿ ಕೀರ್ತಿ ಸಹಕಾರಿ ಸಂಘಕ್ಕಿದೆ ಎಂದರು.
ಎಂಆರ್‌ಪಿಎಲ್ ಸೀತಾರಾಮ ರೈ ಕೈಕಾರ ಮಾತನಾಡಿ, ಸ್ವ ಸಹಾಯ ಯೋಜನೆಯ ಮೂಲಕ ಸಹಕಾರ ಕ್ಷೇತ್ರ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ. ಸ್ವ-ಸಹಾಯ ಸಂಘ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಆರ್ಥಿಕ ಸಬಲೀಕರಣಗೊಳಿಸುವ ಶ್ಲಾಘನೀಯ ಕಾರ್ಯವಾಗುತ್ತಿದೆ ಎಂದರು.


ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಮಾತನಾಡಿ, ಸಂಸ್ಕಾರದ ಜೊತೆಗೆ ಬದುಕ ಕಟ್ಟುವ ಕೆಲಸವಾಗಬೇಕು ಎಂಬ ಸ್ವಾಮಿಜಿಯವರ ಸಂಕಲ್ಪದಂತೆ ಸಹಕಾರಿಯು ಕಾರ್ಯನಿರ್ವಹಿಸುತ್ತಿದೆ. ರಾಜ್ಯದ 5,700 ಸಹಕಾರ ಸಂಘಗಳಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿಯು 23ನೇ ಸ್ಥಾನದಲ್ಲಿದೆ ಎಂದರು.
ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ ಸುರೇಶ್ ಸರಳಿಕಾನ, ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಪ್ರಕಾಶ್ ರೈ ಬೈಲಾಡಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ವಿಠಲ ರೈ ಬೈಲಾಡಿ, ಬಾಲಕೃಷ್ಣ ಭಟ್ ಘಾಟೆ, ಸಾಮಾಜಿಕ ಕಾರ್ಯಕರ್ತ ಸದಾಶಿವ ರೈ ಸೂರಂಬೈಲು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ದೇವಪ್ಪ ನಾಯ್ಕ ಯು., ಆರ್ಯಾಪು ಗ್ರಾ.ಪಂ ಸದಸ್ಯ ಯತೀಶ್ ದೇವ ಸಂಟ್ಯಾರು, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಪ್ರಬಂಧಕ ಜಗನ್ನಾಥ ರೈ ಅರಂತನಡ್ಕ, ಪಾಣಾಜೆ ಘಟ ಸಮಿತಿ ಅಧ್ಯಕ್ಷ ಉದಯ ಕುಮಾರ್ ರೈ ಸೂರಂಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ರಾಷ್ಟ್ರಮಟ್ಟದ ಅಥ್ಲೆಟಿಕ್‌ನಲ್ಲಿ ಚಿನ್ನದ ಪದಕ ಪಡೆದ ಕೀರ್ತಿ ಗುಮ್ಮಟೆಗದ್ದೆ, ರಿಕ್ಷಾ ಚಾಲಕ ಪುತ್ತು ಚೆಲ್ಯಡ್ಕ, ನಾಡಿ ವೈದ್ಯ ಗಂಗಾಧರ, ಯಕ್ಷಗಾನ ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಹಾಗೂ ಚಂದ್ರಶೇಖರ ನೆಲ್ಯಾರ್ಣೆರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಸತ್ಯದತ್ತ ವ್ರತ ಪೂಜೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕಕ್ಕೂರು ರಾಧಾಕೃಷ್ಣ ಭಟ್‌ರವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಶ್ರೀ ಶ್ರೀಸತ್ಯದತ್ತ ವ್ರತಪೂಜೆ ನೆರವೇರಿತು. ಇದೇ ವೇಳೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸದಸ್ಯರಿಂದ ಭಜನೆ ನಡೆಯಿತು.
ಗೀತಾ ಪ್ರಾರ್ಥಿಸಿದರು. ಉಪ್ಪಳಿಗೆ ಘಟ ಸಮಿತಿ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರೋಜಿನಿ, ದಾಮೋದರ ಪಾಟಾಳಿ, ಪದ್ಮನಾಭ, ಉದಯ ಕುಮಾರ್ ರೈ, ಭರತೇಶ್, ಸವಿತಾ ಎಂ., ವಿಜಯಲಕ್ಷ್ಮೀ, ಸುನೀತಾ, ಜ್ಯೋತಿ, ಲೀಲಾವತಿ, ಗೋಪಾಲ ನಾಯ್ಕ, ಚಂದ್ರಶೇಖರ, ಮಂಜುನಾಥ ರೈ, ಅಶ್ವಿನಿ, ಶಶಿ ಟಿ., ಗೀತಾ, ಸದಾಶಿವ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂರ್ತಣೆ ನಡೆಯಿತು.

ರಾಮ ಅಂದರೆ ಭವ ಸಾಗರವನ್ನು ದಾಟಿಸು ಎಂಬರ್ಥವಿದೆ. ಭವ ಬಂಧನದ ಶಕ್ತಿಯು ರಾಮನ ಹೆಸರಿನಲ್ಲಿದೆ. ಇಂತಹ ರಾಮ ಮಂದಿರವು ನಿರ್ಮಾಣವಾಗಿ, ನಮ್ಮ ಕಾಲದಲಲಿಯೇ ಪ್ರತಿಷ್ಠಾಪನೆಯಾಗುತ್ತಿರುವುದು ನಮ್ಮ ಸುಯೋಗ. ಇದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತಹ ಪುಣ್ಯ ಕಾಲದಲ್ಲಿ ನಾವಿದ್ದೇವೆ. ಆ ದಿನ ಉತ್ತಮವಾಗಿರಬೇಕು. ಮನೆ ಮನೆಯಲ್ಲಿ ರಾಮ ನಾಮ ಜಪಿಸಬೇಕು. ಎಲ್ಲೆಡೆ ರಾಮ ನಾಮದ ಝೇಂಕಾರ ಮೂಡುವ ಕಾಲವಾಗಿದೆ. ವಿಶ್ವದ ಚಿತ್ತ ಭಾರದತ್ತ ಆಗುತ್ತಿದೆ. ಜ.22ರಂದು ರಾಮನ ಪ್ರಾಣ ಪ್ರತಿಷ್ಠೆಯ ದಿನವೂ ಇತಿಹಾಸದಲ್ಲಿ ಪುಟದಲ್ಲಿ ಸ್ವರ್ಣಾಕ್ಷರಗಳಲ್ಲಿ ಮೂಡುವ ದಿನವಾಗಿದೆ.
-ಶ್ರೀಗುರುದೇವಾನಂದ ಸ್ವಾಮಿಜಿ, ಒಡಿಯೂರು ಗುರುದೇವ ದತ್ತ ಸಂಸ್ಥಾನ

LEAVE A REPLY

Please enter your comment!
Please enter your name here