ಜೇಸಿಐ ನೆಲ್ಯಾಡಿ 2024ನೇ ಘಟಕಾಡಳಿತ ಮಂಡಳಿ

0

ಅಧ್ಯಕ್ಷೆ : ಸುಚಿತ್ರಾ ಜೆ.ಬಂಟ್ರಿಯಾಲ್, ಕಾರ್ಯದರ್ಶಿ: ಆನಂದ ಅಜಿಲ, ಮಹಿಳಾ ಜೇಸಿ ಅಧ್ಯಕ್ಷೆ: ಲೀಲಾಮೋಹನ್

ನೆಲ್ಯಾಡಿ: ಜೇಸಿಐ ನೆಲ್ಯಾಡಿ ಇದರ 2024ನೇ ಘಟಕಾಡಳಿತ ಮಂಡಳಿ ಅಧ್ಯಕ್ಷರಾಗಿ ಸುಚಿತ್ರಾ ಜೆ.ಬಂಟ್ರಿಯಾಲ್, ಕಾರ್ಯದರ್ಶಿಯಾಗಿ ಆನಂದ ಅಜಿಲ, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ಲೀಲಾಮೋಹನ್ ಹಾಗೂ ಕೋಶಾಧಿಕಾರಿಯಾಗಿ ಸುಪ್ರೀತಾ ರವಿಚಂದ್ರ ಆಯ್ಕೆಯಾಗಿದ್ದಾರೆ.

ನೆಲ್ಯಾಡಿ ಐಐಸಿಟಿ ಕಂಪ್ಯೂಟರ್ ಕೇಂದ್ರದಲ್ಲಿ ನಡೆದ ಜೆಸಿಐ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಐಪಿಪಿ ಜಯಂತಿ ಬಿ.ಎಂ.ಅವರು ಚುನಾವಣಾಧಿಕಾರಿಯಾಗಿದ್ದರು. 2023ನೇ ಸಾಲಿನ ಅಧ್ಯಕ್ಷ ಕೆ.ಎಂ.ದಯಾಕರ ರೈ, ಪೂರ್ವಾಧ್ಯಕ್ಷರಾದ ಅಬ್ರಹಾಂ ವರ್ಗೀಸ್, ರವೀಂದ್ರ ಟಿ., ಆರ್.ವೆಂಕಟ್ರಮಣ, ವಿ.ಆರ್.ಹೆಗ್ಡೆ, ಚಂದ್ರಶೇಖರ ಬಾಣಜಾಲು, ಜಯಾನಂದ ಬಂಟ್ರಿಯಾಲ್, ನಾರಾಯಣ ಎನ್.ಬಲ್ಯ, ಜಾನ್ ಪಿ.ಎಸ್.ನೆಲ್ಯಾಡಿ, ಶಿವಪ್ರಸಾದ್ ಬೀದಿಮಜಲು, ವಿಶ್ವನಾಥ ಶೆಟ್ಟಿ ನೆಲ್ಯಾಡಿ, ಇಸ್ಮಾಯಿಲ್ ಕೆ.ನೆಲ್ಯಾಡಿ. ಅಬ್ದುಲ್ ರಹಿಮಾನ್ ಮತ್ತಿತರರು ಉಪಸ್ಥಿತರಿದ್ದರು. ಜ.29ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನೂತನ ಘಟಕದ ಪದಗ್ರಹಣ ನೆರವೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here