




ಬಡಗನ್ನೂರು: ಕೊಯಿಲ ಬಡಗನ್ನೂರು ಅಶೋಕ್ ರೈ ಅಭಿಮಾನಿ ಬಳಗ ವತಿಯಿಂದ ನಡೆಯುವ 3ನೇ ವರ್ಷದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಫ್ರೆಂಢ್ಸ್ ಟ್ರೋಫಿ-2024 ಹಾಗೂ ಸನ್ಮಾನ ಕಾರ್ಯಕ್ರಮ ಜ.21 ರಂದು ಕೊಯಿಲ ಬಡಗನ್ನೂರು ಸ.ಹಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.




ಕಾರ್ಯಕ್ರಮವನ್ನು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್ ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯ ಸಂತೋಷ್ ಆಳ್ವ, ಶಾಲಾ ಶಿಕ್ಷಕ ಗಿರೀಶ್ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಸತೀಶ್ ನಾಯ್ಕ, ಅಶೋಕ್ ರೈ ಅಭಿಮಾನಿ ಬಳಗದ ಅಧ್ಯಕ್ಷ ಪ್ರಕಾಶ್ ರೈ ಕೊಯಿಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಶೋಕ್ ರೈ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಅಶೋಕ್ ರೈ ಅಭಿಮಾನಿ ಬಳಗದ ಸದಸ್ಯರಾದ ನವೀನ್ ಪಕ್ಕಳ ಕೊಯಿಲ ಸ್ವಾಗತಿಸಿ, ವಂದಿಸಿದರು. ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.














