ಜ. 24- ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ
ಜ. 26- ಕಿನ್ನಿಮಾಣಿ ದೈವಗಳ ನೇಮ
ಜ. 27 – ಪೂಮಾಣಿ ದೈವಗಳ ನೇಮ
ಜ. 28- ಪಿಲಿಭೂತ ನೇಮ
ಪಾಣಾಜೆ: ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಉತ್ಸವ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಜ.22 ರಿಂದ 28 ರವರೆಗೆ ನಡೆಯಲಿದೆ.
ಜ. 22 ರಂದು ರಾತ್ರಿ ಕಾರ್ತಿಕ ಪೂಜೆ, ಅತ್ತಾಳ ಪೂಜೆ, ಗಣಪತಿ ಪ್ರಾರ್ಥನೆ ನೆರವೇರಲಿದೆ. ಜ. 23 ರಂದು ಬೆಳಿಗ್ಗೆ ತುಲಾಭಾರ ಸೇವೆ, ಬಲಿ ಉತ್ಸವ, ಮಹಾಪೂಜೆಯಾಗಿ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಬಲಿ ಉತ್ಸವವಾಗಿ ಕಟ್ಟೆಪೂಜೆ ನಡೆಯಲಿದೆ. ಜ.24 ರಂದು ಬೆಳಿಗ್ಗೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದೇವಳದಲ್ಲಿ ರಂಗಪೂಜೆಯಾಗಿ ದೈವಗಳ ಕೀರ್ವಾಳು ಭಂಡಾರ ಆರ್ಲಪದವು ದೈವಸ್ಥಾನಕ್ಕೆ ಕೊಂಡುಹೋಗಿ ಧ್ವಜಾರೋಹಣ ಆಗಿ ತಂಬಿಲ ನಡೆಯಲಿದೆ. ಜ. 25 ರಂದು ರಾತ್ರಿ ಮಕರ ತೋರಣ ಏರಿಸಿ, ಪಾಲಕ್ಕಿ ಉತ್ಸವ ನಂತರ ತಂಬಿಲ ನಡೆಯಲಿದೆ. ಜ.26 ರಂದು ಬೆಳಿಗ್ಗೆ ಆರ್ಲಪದವು ದೈವಸ್ಥಾನದಲ್ಲಿ ಕಿನ್ನಿಮಾಣಿ ದೈವಗಳ ನೇಮೊತ್ಸವ, ಜ.27 ರಂದು ಪೂಮಾಣಿ ದೈವಗಳ ನೇಮೋತ್ಸವ, ಜ.28 ರಂದು ಬೆಳಿಗ್ಗೆ ಮಲರಾಯ ದೈವದ ನೇಮ ಕಳೆದು ಬಳಿಕ ಪಿಲಿಭೂತ ನೇಮೋತ್ಸವ ನಡೆಯಲಿದೆ. ರಾತ್ರಿ ಅವಭೃತ ಸ್ನಾನಕ್ಕೆ ಕೊಂಡೆಪ್ಪಾಡಿ ಎಂಬಲ್ಲಿಗೆ ಹೋಗಿ ಕಟ್ಟೆಪೂಜೆ ಆಗಿ ಬಂದು ಧ್ವಜಾವರೋಹಣ ಆಗಿ ತಂಬಿಲ ನಡೆದು ಮಂತ್ರಾಕ್ಷತೆ ನಡೆಯಲಿದೆ.