ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಏಕಾಹ ಭಜನೆ ಸಂಪನ್ನ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದಲ್ಲಿ 87ನೇ ವರ್ಷದ ಏಕಾಹ ಭಜನೆಯು ಜ.21ರ ಸೂರ್ಯೋದಯದಿಂದ ರಾತ್ರಿ 8ರ ವರೆಗೆ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯಿತು. ಜ.12ರಂದು ನಗರ ಸಂಕೀರ್ತನೆ ಪ್ರಾರಂಭಗೊಂಡಿದ್ದು ಏಕಾಹ ಭಜನೆಯ ಪ್ರಯುಕ್ತ ಜ.21ರಂದು ಸಂಜೆ ಉಲ್ಪೆ ಮೆರವಣಿಗೆ (ಹಣ್ಣು ಹಂಪಲು) ನಡೆದು ರಾತ್ರಿ 8ಕ್ಕೆ ಮಂಗಳಾಚರಣೆಯೊಂದಿಗೆ ಏಕಾಹ ಭಜನೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಂದಿರದ ಅರ್ಚಕರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಭಾಗವಹಿಸಿದ ಭಜನಾ ಮಂಡಳಿಗಳು: ಶ್ರೀ ಲಲಿತಾ ಸಹಸ್ರನಾಮ ಮಹಿಳಾ ಮಂಡಳಿ ಪುತ್ತೂರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಕ್ಕುಡ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇರಳಕಟ್ಟೆ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಉಪ್ಪಿನಂಗಡಿ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ, ಶ್ರೀ ಓಂ ಶಕ್ತಿ ಆಂಜನೇಯ ಮಂತ್ರಾಲಯ ಬೊಳುವಾರು, ಶ್ರೀ ಶಿವಪಾರ್ವತಿ ಭಜನಾ ಮಂಡಳಿ ಬನ್ನೂರು, ಶ್ರೀರಾಮ ಭಜನಾ ಮಂಡಳಿ ಕೆಮ್ಮಿಂಜೆ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಪುತ್ತೂರು, ಶ್ರೀ ವಜ್ರಮಾತಾ ಭಜನಾ ಮಂಡಳಿ ಪುತ್ತೂರು, ಸಮೃದ್ಧಿ ಮ್ಯೂಸಿಕಲ್ ಸಂಸ್ಥೆ ದರ್ಬೆ.

LEAVE A REPLY

Please enter your comment!
Please enter your name here