ಒಡಿಯೂರು ಸಂಸ್ಥಾನದಲ್ಲಿ ಶ್ರೀರಾಮನಾಮ ತಾರಕ ಯಜ್ಞ – ರಾಮತಾರಕಕ್ಕೆ ಅಪಾರ ಶಕ್ತಿ ಇದೆ: ಒಡಿಯೂರು ಶ್ರೀ

0

ವಿಟ್ಲ: ರಾಮನ ಹೆಸರಿನಲ್ಲಿ ನಿಜಾರ್ಥದಲ್ಲಿ ಆಧ್ಯಾತ್ಮಿಕತೆಯ ಬೆಳಕನ್ನು ನೋಡಲು ಸಾಧ್ಯವಾಗುತ್ತದೆ.  ತ್ಯಾಗದ ಬದುಕೇ ನಿಜ ಬದುಕು. 

ಶ್ರೀರಾಮ‌ನಾಮಕ್ಕೆ ಇಹವನ್ನು ಪರಕ್ಕೆ ಸೇರಿಸುವ ಶಕ್ತಿಯಿದೆ. ರಾಮಾಯಣದಲ್ಲಿ ಬರುವ ವಿಶೇಷ ಸನ್ನಿವೇಶಗಳನ್ನು ನೆನಪಿಸುವ ಕೆಲಸವಾಗಬೇಕಿದೆ. ರಾಮದೇವರ ಬಿಂಬಕ್ಕೆ ಬಹಳ ಕಲೆ ಇದೆ. ಮಂದಹಾಸದ ನಗು ಶ್ರೀರಾಮನ ಮೂರ್ತಿಯಲ್ಲಿದೆ.  ಸರಿಯಾದ ವ್ಯಕ್ತಿಯಿಂದ ಇಂದು ಎಲ್ಲರೂ‌ ನೆನಪಿಟ್ಟುಕೊಳ್ಳುವ ಕೆಲಸವಾಗಿದೆ. ರಾಮತಾರಕಕ್ಕೆ ಅಪಾರ ಶಕ್ತಿ ಇದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾ‌ನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಅಯೋಧ್ಯಾ ಶ್ರೀರಾಮ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಪ್ರಯುಕ್ತ ಒಡಿಯೂರು ಸಂಸ್ಥಾ‌ನದಲ್ಲಿ ನಡೆದ ಶ್ರೀರಾಮನಾಮ ತಾರಕ ಯಜ್ಞದ ಪೂರ್ಣಹುತಿ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು.
ಅರ್ಥ ಬರುವ ಹೆಸರುಗಳನ್ನು ಮಕ್ಕಳಿಗೆ ಇಡುವ ಕೆಲಸವಾಗಬೇಕು. ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಕೆಲಸ ನಡೆಯಬೇಕು. ಪಂಚತತ್ವಗಳು ಕೆಲಸಮಾಡದಿದ್ದರೆ ಆರೋಗ್ಯದಲ್ಲಿ ಏರುಪೇರಾಗಬಹುದು. ಆಹಾರ ಪದ್ದತಿಯಲ್ಲಿ ಸರಿಯಾದ‌ ನಿಯಮಗಳಿರಬೇಕು. ರಾಮತಾರಕಕ್ಕೆ ಅಪಾರ ಶಕ್ತಿ ಇದೆ. ನಮ್ಮ ಕರ್ತವ್ಯವನ್ನು ನೆನಪಿಸುವ ಕೆಲಸ ಅಯೋಧ್ಯೆಯಲ್ಲಿ ಇಂದು ನಡೆದ ಕಾರ್ಯದಿಂದ ಆಗಿದೆ. ನಮ್ಮ‌ ಕರ್ತವ್ಯವನ್ನು ನಿಭಾಯಿಸಿಕೊಂಡು ಮುನ್ನಡೆದರೆ ಯಶಸ್ಸು ಹೆಚ್ಚು. ರಾಮ ಎಂದರೆ ಅದ್ಭುತ ಶಬ್ಧ. ನಡೆ ನುಡಿ‌ ಒಂದಾದರೆ ಧರ್ಮ ನಿರ್ಮಾಣವಾಗುವುದು. ಭಾರತೀಯ ಪರಂಪರೆಯನ್ನು ತಿಳಿಯಲು ರಾಮಾಯಣ ಮಹಾಭಾರತ ಓದಬೇಕು. ತ್ಯಾಗ ಸೇವೆ ನಮ್ಮ ಜೀವನದಲ್ಲಿ ಅಡಕವಾಗಬೇಕು. ರಾಷ್ಟ್ರೀಯ ಆದರ್ಶಗಳು ರಾಮಾಯಣದಲ್ಲಿ ಅಡಗಿದೆ.

ರಾಗ ದ್ವೇಶಗಳು ದೂರವಾಗಿ ಪ್ರೇಮ ಭಾವ ನಮ್ಮೊಳಗೆ ತುಂಬಬೇಕು ಎಲ್ಲರಿಗೂ ಶುಭವಾಗಲಿ ಎಂದರು. 
ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಮುಂಬೈಯ ಉದ್ಯಮಿ ವಾಮಯ್ಯ ಶೆಟ್ಟಿ ಚೆಂಬೂರು, ಒಡಿಯೂರು ಶ್ರೀ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಗಾಯಕ ರವಿರಾಜ್‌ ಶೆಟ್ಟಿ ಒಡಿಯೂರು, ಉದ್ಯಮಿ ಭರತ್ ಭೂಶಣ್ ಮಂಗಳೂರು, ಕರಸೇವಕರಾದ ಅಜಿತ್ ನಾಥ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿರಿದ್ದರು.
ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
ಸದ್ಗುರು ಬಳಗ ಹೊಸಂಗಡಿ, ನಾದಸಂಕೀರ್ತನ ಬಳಗ ಮಂಗಳೂರು, ಗಾನಸುರಭಿ ಉಜಿರೆ ಇವರಿಂದ ಭಗವನ್ನಾಮ ಸಂಕೀರ್ತನೆ ನಡೆಯಿತು. ಡಾ.ಗುರುದಾಸ್ ಎಸ್.ಪಿ. ಇವರಿಂದ ‘ಶ್ರೀರಾಮ-ಗುಣಧಾಮ’ ಕಥಾ ಸಂಕೀರ್ತನೆ ನಡೆಯಿತು.

LEAVE A REPLY

Please enter your comment!
Please enter your name here