ಉಪ್ಪಿನಂಗಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ 34 ನೆಕ್ಕಿಲಾಡಿ ಗ್ರಾ.ಪಂ.ನ ಸಹಕಾರದೊಂದಿಗೆ ಶಿಶು ಪಾಲನಾ ಕೇಂದ್ರವಾದ ‘ಕೂಸಿನ ಮನೆ’ಯ ಉದ್ಘಾಟನೆಯು ಆದರ್ಶನಗರದಲ್ಲಿರುವ 34 ನೆಕ್ಕಿಲಾಡಿ ಗ್ರಾ.ಪಂ.ನ ವಸತಿ ಗೃಹದ ಕೊಠಡಿಯಲ್ಲಿ ಜ.22ರಂದು ಉದ್ಘಾಟನೆಗೊಂಡಿತ್ತು. ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಕೂಸಿನ ಮನೆಯನ್ನು ಉದ್ಘಾಟಿಸಿದರು.
ಆಯ್ದ ಗ್ರಾ.ಪಂ.ನಲ್ಲಿ ನರೇಗಾ ಉದ್ಯೋಗ ಕಾರ್ಡ್‌ಗಳನ್ನು ಹೊಂದಿರುವ ಕುಟುಂಬದ ಮೂರು ವರ್ಷದೊಳಗಿನ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರಗಳನ್ನು ‘ಕೂಸಿನ ಮನೆ’ಯನ್ನು ತೆರೆಯಲು ಸರಕಾರ ಆದೇಶ ಹೊರಡಿಸಿದ್ದು, ಇದಕ್ಕೆ 34 ನೆಕ್ಕಿಲಾಡಿ ಗ್ರಾ.ಪಂ. ಕೂಡಾ ಆಯ್ಕೆಯಾಗಿತ್ತು. ದುಡಿಯಲು ಹೋಗುವ ಸಣ್ಣ ಮಕ್ಕಳಿರುವ ತಾಯಂದಿಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ನರೇಗಾ ಉದ್ಯೋಗ ಚೀಟಿ ಇದ್ದ ಕುಟುಂಬದವರು ಈ ಕೂಸಿನ ಮನೆಯಲ್ಲಿ 6 ತಿಂಗಳಿನಿಂದ ಮೂರು ವರ್ಷದವರೆಗಿನ ಮಕ್ಕಳನ್ನು ಬಿಟ್ಟು ಹೋಗಬಹುದು. 34 ನೆಕ್ಕಿಲಾಡಿಯಲ್ಲಿ ಈಗಾಗಲೇ ಆರು ಮಂದಿಗೆ ಕೇರ್ ಟೇಕರ್ ತರಬೇತಿ ನೀಡಲಾಗಿದ್ದು, ಒಬ್ಬರಿಗೆ 100 ದಿನಗಳ ಕೆಲಸದಂತೆ ಈ ಆರು ಮಂದಿಗೆ ಇದರಲ್ಲಿ ಕೆಲಸ ನೀಡಲಾಗುತ್ತದೆ. ಕೇಂದ್ರದಲ್ಲಿ ಇಬ್ಬರು ಕೇರ್‌ಟೇಕರ್‌ಗಳಂತೆ ಕೆಲಸ ನಿರ್ವಹಿಸುತ್ತಾರೆ.
ಕೂಸಿನ ಮನೆ ಉದ್ಘಾಟನೆಯ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ವೇದಾವತಿ, ವಿಜಯಕುಮಾರ್, ಗೀತಾ, ರತ್ನಾವತಿ, ಪುತ್ತೂರು ತಾ.ಪಂ.ನ ಸಹಾಯಕ ನಿರ್ದೇಶಕಿ ಶ್ರೀಮತಿ ಶೈಲಜಾ ಭಟ್ ಪ್ರಮುಖರಾದ ಅನಿ ಮಿನೇಜಸ್, ಅಬ್ದುರ್ರಹ್ಮಾನ್ ಯುನಿಕ್, ಕಲಂದರ್ ಶಾಫಿ, ಅಬ್ದುರ್ರಹ್ಮಾನ್, ನಿತ್ಯಾನಂದ, ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಜೆಸಿಂತಾ ಆನ್ಸಿ ಮಿನೇಜಸ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶ್ರೀಮತಿ ರೇಖಾ, ಸಂಜೀವಿನಿ ಒಕ್ಕೂಟದ ಪಾವನ, ಗ್ರಾ.ಪಂ.ನ ಸಿಬ್ಬಂದಿ ವಸಂತಿ, ಸುಶೀಲ, ಯಶೋಧಾ, ನಿತಿನ್, ರವಿ, ಪ್ರಮೀಳಾ, ಸಂಜೀವಿನಿ ಒಕ್ಕೂಟದ ಪಾವನ, ಅಂಗನವಾಡಿ ಕಾರ್ಯಕರ್ತರು, ಕೇರ್‌ಟೇಕರ‍್ಸ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಡಿ. ಸ್ವಾಗತಿಸಿದರು. ಲೆಕ್ಕ ಸಹಾಯಕ ದೇವಪ್ಪ ನಾಯ್ಕ ವಂದಿಸಿದರು.