ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನ ಸ.ನಂಬ್ರ 88ರಲ್ಲಿ ವಿಸ್ತೀರ್ಣ 92 ಸೆಂಟ್ಸ್ ನ ಸರ್ವೇಕ್ಷಣೆ, ಗಡಿ ಗುರುತಿಸುವಿಕೆ, ಮತ್ತು ಒತ್ತುವರಿ ನಿಗದಿ ಪಡಿಸುವ, ಜಂಟಿ ಸರ್ವೇಕ್ಷಣೆಯ ಕಾರ್ಯ, ಭೂಮಾಪನ ಹಾಗೂ ಸರ್ವೇಕ್ಷಣೆ ಇಲಾಖಾ ವತಿಯಿಂದ ಜ.25ರಂದು ಬೆಳಿಗ್ಗೆ ಗಂಟೆ 10ಕ್ಕೆ ನಡೆಯಲಿದೆ.
ಜಂಟಿ ಸರ್ವೇಕ್ಷಣೆಗೆ ಸಂಬಂಧಿಸಿದ ಎಲ್ಲಾ ಭೂ ಮಾಲಿಕರಿಗೆ ಜಂಟಿ ಸರ್ವೇಕ್ಷಣೆ ಸಂದರ್ಭ ಕಡ್ಡಾಯ ಹಾಜರಿರುವಂತೆ ಭೂಮಾಪನ ಹಾಗೂ ಸರ್ವೇಕ್ಷಣೆ ಇಲಾಖಾ ವತಿಯಿಂದ ಈಗಾಗಲೇ ನೋಟೀಸ್ ನೀಡಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಮತ್ತು ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.