ಹಿಂದು ಸಂಘಟನೆ ಕಾರ್ಯಕರ್ತರ ವಿರುದ್ಧ ಗಡಿಪಾರು ಆದೇಶ ಪರಿಶೀಲಿಸಿ ಹಿಂಪಡೆಯದಿದ್ದಲ್ಲಿ ಹಿಂ.ಜಾ.ವೆ.ಯಿಂದ ಹೋರಾಟ – ಎಚ್ಚರಿಕೆ

0

ಪುತ್ತೂರು: ಹಿಂದು ಸಂಘಟನೆಗಳ ಅಮಾಯಕ ಕಾರ್ಯಕರ್ತರ ವಿರುದ್ದ ಗಡಿಪಾರು ಆದೇಶಕ್ಕೆ ನೊಟೀಸ್ ಜಾರಿ ಮಾಡಿರುವುದನ್ನು ತಕ್ಷಣ ಪುನರ್ ಪರಿಶೀಲಿಸಿ ಹಿಂಪಡೆಯಬೇಕು.ಇಲ್ಲವಾದಲ್ಲಿ ಸರಕಾರ ಮತ್ತು ಇಲಾಖೆ ವಿರುದ್ದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದು ಜಾಗರಣಾ ವೇದಿಕೆಯಿಂದ ಎಚ್ಚರಿಕೆ ನೀಡಲಾಗಿದೆ.

ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜ ದಿನೇಶ್ ಪಂಜಿಗ ಅವರಿಗೆ ತಿಂಗಳ ಹಿಂದೆ ಗಡಿಪಾರು ಆದೇಶ ನೀಡಲಾಗಿತ್ತು. ಅದಕ್ಕೆ ಅವರು ಕಾನೂನು ಪ್ರಕಾರ ನ್ಯಾಯವಾದಿಗಳ ಮೂಲಕ‌‌ ವಿಚಾರಣೆಗೆ ಹಾಜರಾಗಿ ಪ್ರಕರಣ ಮುಗಿದ ಬಳಿಕ ಇದೀಗ ಮತ್ತೊಮ್ಮೆ ಅವರ ಮೇಲೆ ಗಡಿಪಾರು ಆದೇಶಕ್ಕೆ ಕಾರಣ ಕೇಳಿ‌‌ ನೊಟೀಸ್ ಮಾಡಿರುವುದನ್ನು ಪುನರ್ ಪರಿಶೀಲಿಸಬೇಕು.‌ ಅದೇ ರೀತಿ ಹಿಂಜಾವೇ ಈ ಹಿಂದೆ ಜಿಲ್ಲಾ ಜವಾಬ್ದಾರಿಯಲ್ಲಿದ್ದ ಅವಿನಾಶ್ ಪುರುಷರಕಟ್ಟೆ ಹಾಗೂ ಇತರ ಅಮಾಯಕ ಹಿಂದು ಕಾರ್ಯಕರ್ತರ ಮೇಲೆಯೂ ಗಡಿಪಾರು ಆದೇಶ ನೀಡಿರುವ ಕುರಿತು‌ ಮಾಹಿತಿ ಲಭ್ಯವಾಗಿದೆ. ಯಾವುದೇ ಉಗ್ರ ಸಂಘಟನೆಯ ಕೃತ್ಯ ಎಸಗದ ಮತ್ತು ಯಾವುದೇ ದೇಶ ದ್ರೋಹದ ಕೃತ್ಯ ಮಾಡದವರ ಮೇಲೆ ಗಡಿಪಾರು ಆದೇಶ ನೀಡಿರುವುದು ಸರಕಾರದ ಮನಸ್ಥಿತಿಯನ್ನು ಎತ್ತಿ ತೋರಿಸಿದೆ. ತಕ್ಷಣ ಸರಕಾರ ಹಿಂದುಗಳ ಮೇಲಿನ ಗಡಿಪಾರು ಆದೇಶ ಹಿಂಪಡೆಯುವಂತೆ ಇಲಾಖೆಗೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಶ್ರೀ ರಾಮನ ಶಕ್ತಿಯನ್ನು ಪ್ರದರ್ಶಿಸಬೇಕಾದಿತು ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಾಂತ ಸದಸ್ಯ ಅಜಿತ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here