ಪುತ್ತೂರು: ನೆಲ್ಲಿಕಟ್ಟೆ ಒಕ್ಕಲಿಗ ಸ್ವ-ಸಹಾಯ ಸೌಧ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ (ರಿ) ಪುತ್ತೂರು ಇದರ ದಶಮಾನೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಹಾಗೂ ಕಾರ್ಯಕ್ರಮಕ್ಕೆ ಸಮಿತಿ ರಚನೆಯ ಬಗ್ಗೆ ಪೂರ್ವಭಾವಿ ಸಭೆ ಜ.23ರಂದು ಟ್ರಸ್ಟ್ ನ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ದಶಮಾನೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಹಾಗೂ ದಶಮಾನೋತ್ಸವ ಕಾರ್ಯ್ರಮದ ರೂಪರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷ ಡಿ.ವಿ ಮನೋಹರ್, ಸ್ಥಾಪಕ ಅಧ್ಯಕ್ಷ ಎ ವಿ ನಾರಾಯಣ್, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ, ಸಲಹಾ ಸಮಿತಿ ಸದಸ್ಯರಾದ ಪದ್ಮಯ್ಯ ಬನ್ನೂರು, ವೆಂಕಪ್ಪ ಗೌಡ, ಜಿನ್ನಪ್ಪ ಗೌಡ ಮಲುವೇಲು, ನಿರ್ದೇಶಕರಾದ ವಸಂತ ವೀರಮಂಗಲ,ಶ್ರೀಧರ ಗೌಡ ಕನಜಾಲು, ವಲಯ ಅಧ್ಯಕ್ಷರುಗಳಾದ ಗಂಗಯ್ಯ ಗೌಡ ನೆಕ್ಕಿಲಾಡಿ, ನಾರಾಯಣ ಗೌಡ ಒಟೆ, ಅನಿತಾ ಲಕ್ಷ್ಮಣ ಗೌಡ ಕೇಡೆಂಜಿ ಸೇರಿದಂತೆ ತಾಲೂಕಿನ ಎಲ್ಲಾ ಒಕ್ಕೂಟ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಟ್ರಸ್ಟ್ ನ ಮೆನೇಜರ್ ಸುನಿಲ್, ಮೇಲ್ವಿಚಾರಕಾರದ ವಿಜಯಕುಮಾರ್, ಸುಮಲತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.