ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ಜ.27-ನಾಗಪ್ರತಿಷ್ಠೆ, ಜ.30-ನೇಮೋತ್ಸವ

0

ನೆಲ್ಯಾಡಿ: ಕಾರಣಿಕದ ಸ್ಥಳವಾಗಿರುವ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ಜ.27ರಂದು ನಾಗಪ್ರತಿಷ್ಠೆ ಹಾಗೂ ಜ.30ರಂದು ದೈವಗಳ ನೇಮೋತ್ಸವ ನಡೆಯಲಿದೆ.

ಜ.26ರಂದು ಸಂಜೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಬಳಿಕ ಪುಣ್ಯಾಹ, ಪ್ರಸಾದ ಶುದ್ಧಿ, ರಾಕ್ಷೆಘ್ನ ವಾಸ್ತುಹೋಮ, ಜಲಧಿವಾಸ, ವಾಸ್ತು ಬಲಿ, ಬಿಂಬ ಪ್ರಸಾದ, ಪಾಣಿಗ್ರಹ, ಅನ್ನಸಂತರ್ಪಣೆ ನಡೆಯಲಿದೆ, ಜ.27ರಂದು ಬೆಳಿಗ್ಗೆ 7 ಗಂಟೆಯಿಂದ ಗಣಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಚಿತ್ರಕೂಟ ಪ್ರತಿಷ್ಠೆ, ನಾಗಪ್ರತಿಷ್ಠೆ, ಚೋರಶಾಂತಿ ಹೋಮ, ಜಲಾಭಿಷೇಕ, ಕ್ಷೀರಾಭಿಷೇಕ, ಬಿಂಬ ಅಭಿಷೇಕ, ಆಶ್ಲೇಷ ಬಲಿ, ಕಲಶಾಭಿಷೇಕ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.


ಜ.30 ನೇಮೋತ್ಸವ:
ಜ.30ರಂದು ಬೆಳಿಗ್ಗೆ 10 ಗಂಟೆಗೆ ದೈವಗಳಿಗೆ ತಂಬಿಲ ಸೇವೆ, ಸಂಜೆ ಗಂಟೆ 6ರಿಂದ ಶ್ರೀ ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕೋಟೆ ಚಾಮುಂಡಿ ಮತ್ತು ಗುಳಿದ ದೈವಗಳ ನೇಮೋತ್ಸವ, ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ ನ್ಯೂ ಆರಿಗ, ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರಪಾಣಿಗಳಾದ ರಾಧಾಕೃಷ್ಣ ಯಡಪಡಿತ್ತಾಯ, ಮಾಯಿಲಕೋಟೆ ದೈವಸ್ಥಾನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ದೈವದ ಪರಿಚಾರಕರು, ಮಾಯಿಲ ವಿಭಾಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here