ಕುಂಬ್ರ ಮರ್ಕಝುಲ್ ಹುದಾ ಪದವಿ ಕಾಲೇಜಿನಲ್ಲಿ ಪೇರೆಂಟ್ಸ್ ಗ್ರ್ಯಾಂಡ್ ಅಸೆಂಬ್ಲಿ ಕಾರ್ಯಕ್ರಮ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಪದವಿ ಕಾಲೇಜಿನಲ್ಲಿ ಪೇರೆಂಟ್ಸ್ ಗ್ರಾಂಡ್ ಅಸೆಂಬ್ಲಿ ಕಾರ್ಯಕ್ರಮ ನಡೆಯಿತು. ಖ್ಯಾತ ಮೋಟಿವೇಟರ್, ಐಡಿಯಲ್ ಅಸೋಸಿಯೇಷನ್ ಫಾರ್ ಮೈನಾರಟಿ ಎಜುಕೇಶನ್ ಇಂಡಿಯಾ ಇದರ ಅಕಾಡೆಮಿಕ್ ಸೆಕ್ರಟರಿ ಆದ ಕೆ.ಎಂ ಅಬ್ದುಲ್ ಖಾದರ್ ಕ್ಯಾಲಿಕೇಟ್ ಮಾತನಾಡಿ ವಿದ್ಯಾರ್ಥಿಗಳ ಮಾನಸಿಕ ಸಮತೋಲನೆಯನ್ನು ಸರಿಯಾಗಿ ಮನವರಿಕೆ ಮಾಡಬೇಕಾದ್ದು ಕಾಲೇಜುಗಳಲ್ಲಿ ಅಧ್ಯಾಪಕರ ಕರ್ತವ್ಯ. ಅಂತಹ ವಿದ್ಯಾಕೇಂದ್ರಗಳಲ್ಲಿ ಅಧ್ಯಾಪಕರು ಮಕ್ಕಳಿಗೆ ಬಹಳ ಅಚ್ಚುಮೆಚ್ಚಾಗುತ್ತಾರೆ.
ಕಲಿಕೆಯಲ್ಲೂ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಾರೆ, ಇಲ್ಲೂ ಅಧ್ಯಾಪಕರು ಪ್ಯಾರೆಂಟ್ಸ್ ಈಗೋ ಲೆವಲಿನಲ್ಲಿ ನಿಂತು ಕಾರ್ಯಸಚರಿಸಬೇಕಾದ್ದುದರಿಂದ ಯಶಸ್ಸು ಲಭಿಸುತ್ತದೆ. ಎಂದು ಹೇಳಿದರು.

ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿಗಳನ್ನು ಅವರ ಮುಖದ ಹಾವಭಾವ, ಅವರ ಅಂದಿನ ಕೊರಗಿದ ಶೈಲಿ ಮುಂತಾದ ಸೂಕ್ಷ್ಮ ನಿವೇಧನೆಗಳ ಮೂಲಕ ಗಮನಿಸುವ ಮೂಲಕ ಪ್ರತೀ ವಿದ್ಯಾರ್ಥಿನಿಯನ್ನೂ ಯಶಸ್ಸಿನ ಪಥದಲ್ಲಿ ಮುಂದುವರಿಸಲು ಸಾಧ್ಯ ಎಂದ ಅವರು ಮರ್ಕಝುಲ್ ಹುದಾ ಡಿಗ್ರಿ ಕಾಲೇಜಿನ ಪದವಿ ವಿದ್ಯಾರ್ಥಿನಿಯರ ಶಿಸ್ತು, ನಡತೆ, ಗುಣಮಟ್ಟದ ಕಲಿಕೆ, ವರ್ತನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ವಹಿಸಿ ಶುಭ ಹಾರೈಸಿದರು. ಮರ್ಕಝುಲ್ ಹುದಾ ಕಾಲೇಜಿನ ಉಪಾಧ್ಯಕ್ಷ ಎಂಎಸ್ ಎಂ ಅಬ್ದುಲ್ ರಶೀದ್ ಝೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮೊಯಿಲಾಂಜಿ ಮಾಸಿಕದ ಚೀಫ್ ಎಡಿಟರ್ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಶುಭ ಹಾರೈಸಿದರು.
ಪ್ರಮುಖರಾದ ಯೂಸುಫ್ ಗೌಸಿಯಾ ಸಾಜ, ಯೂಸುಫ್ ಹಾಜಿ ಕೈಕಾರ , ಯೂಸುಫ್ ಮೈದಾನಿಮೂಲೆ, ಶಂಸುದ್ದೀನ್ ಬೈರಿಕಟ್ಟೆ, ಸ್ವಾಲಿಹ್ ಹನೀಫಿ, ಉಮರ್ ಅಮ್ಜದಿ ಮುಂತಾದವರು ಉಪಸ್ಥಿತರಿದ್ದರು.
ಪದವಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ ಸ್ವಾಗತಿಸಿದರು.

ಉಪನ್ಯಾಸಕ ಸುಮನ್ ವಂದಿಸಿದರು. ಉಪನ್ಯಾಸಕಿ ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here