ಆಲಂಕಾರು ಶ್ರೀ ಭಾರತಿ ಆ. ಮಾ ಶಾಲೆಯಲ್ಲಿ ಎ.ಐ ತಂತ್ರಜ್ಞಾನ ಮತ್ತು ಡಾಟಾ ಸೈನ್ಸ್ ಮಾಹಿತಿ ಕಾರ್ಯಾಗಾರ

0

ಆಲಂಕಾರು:ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.24 ರಂದು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಪುತ್ತೂರು ಇದರ ಸಹಯೋಗದಲ್ಲಿ, ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಮತ್ತು ಡಾಟಾ ಸೈನ್ಸ್ ನ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ನ ತೃತೀಯ ವರ್ಷದ ವಿದ್ಯಾರ್ಥಿಗಳಾದ ಜೀವಿತ್, ಆಕಾಶ್ ಪಿ, ಧನುಷ್ ಕುಮಾರ್, ಗಗನ್ ಕೆ, ಅಶ್ವಿಜ ಯು ಪೈ ಹಾಗೂ ಅನುಶ್ರೀ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸುಮಾರು 64 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಾಗಾರದ ಬಳಿಕ ಕೃತಕ ಬುದ್ಧಿಮತ್ತೆ ಆಧಾರಿತ ವಿವಿಧ ಮಾದರಿಗಳ ಪ್ರಾತ್ಯಕ್ಷಿಕೆ ನಡೆಯಿತು. ಸಂಸ್ಥೆಯ ಮುಖ್ಯಗುರುಗಳಾದ ಸತೀಶ್ ಕುಮಾರ್ ಜಿ ಆರ್, ಶಿಕ್ಷಕ ,ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಹಿರಿಂಜ,ಸದಸ್ಯರಾದ ಭಾಗೀರಥಿ, ಮುಖ್ಯ ಗುರು ಆಶಾ ಎಸ್ ರೈ, ಆಂಗ್ಲ ಮಾಧ್ಯಮ ವಿಭಾಗದ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here