ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ಜಾತ್ರೋತ್ಸವ ಸಂಪನ್ನ

0

ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ, ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿಯ ದೈವಗಳ ವರ್ಷಾವದಿ ಜಾತ್ರೋತ್ಸವ ಕ್ಷೇತ್ರದ ತಂತ್ರಿ ದೇಲಂಪಾಡಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ಜ.19 ರಿಂದ 24 ರವರೆಗೆ ಬಹಳ ಅದ್ದೂರಿಯಾಗಿ ನಡೆಯಿತು.ಜ.19 ರಂದು ರಾತ್ರಿ  ಗುತ್ತು ಚಾವಡಿಯಿಂದ ಪಿಲಿಭೂತ ಹಾಗೂ ಮಲರಾಯ ದೈವಗಳ ಭಂಡಾರ ಉಳ್ಳಾಕುಲು ಮಾಡಕ್ಕೆ ತೆರಳಿತು.ಜ.20 ರಂದು ಪ್ರಾತಃಕಾಲ ಉಳ್ಳಾಕುಲು ಮಾಡದಲ್ಲಿ ಮಕರ ತೋರಣ ಏರಿಸಿ  ಧ್ವಜಾರೋಹಣ ಆಗಿ ತಂಬಿಲ ನಡೆಯಿತು. ಸಂಜೆ  ತೋರಣ ಒಪ್ಪಿಸಿ ನಂತರ ದೈವಗಳಿಗೆ ತಂಬಿಲ ನಡೆಯಿತು.

ಜ.21 ರಂದು ಬೆಳಿಗ್ಗೆ  ಕಿನ್ನಿಮಾಣಿ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ತೋರಣ ಒಪ್ಪಿಸಿ ನಂತರ ದೈವಗಳಿಗೆ ತಂಬಿಲ ನಡೆಯಿತು.

ಜ.22 ರಂದು ಬೆಳಿಗ್ಗೆ  ಪೂಮಾಣಿ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇರ್ಲ ಮನೆಯಿಂದ ಧೂಮಾವತಿ ದೈವದ ಭಂಡಾರ ಆಗಮಿಸಿ ರಾತ್ರಿ  ಅನ್ನಸಂತರ್ಪಣೆ ನಂತರ ಪಿಲಿಭೂತ ದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು.

ಜ.23 ರಂದು ಪ್ರಾತಃಕಾಲ ಧೂಮಾವತಿ ದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ  ಮಲರಾಯ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಆನಾಜೆ ಎಂಬಲ್ಲಿ ದೈವಗಳ ಅವಭೃತ ಸ್ನಾನ ಹಾಗೂ ನಾಗನಕಟ್ಟೆಯಲ್ಲಿ ನಾಗತಂಬಿಲ ಮತ್ತು ದೈವಗಳಿಗೆ ತಂಬಿಲ ನಡೆಯಿತು.

ಜ.24 ರಂದು ಪ್ರಾತಃಕಾಲ  ಧ್ವಜಾವರೋಹಣ ನಡೆದು ಬೆಳಿಗ್ಗೆ ಕಾನ ತರವಾಡು ಮನೆಯಿಂದ ಇಷ್ಟದೇವತೆಯ ಭಂಡಾರ ಬಂದು ಇಷ್ಟ ದೇವತೆಯ ನೇಮೋತ್ಸವ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದರೊಂದಿಗೆ ಜಾತ್ರೋತ್ಸವ ಸಂಪನ್ನ ಗೊಂಡಿತು .

ಅನುವಂಶಿಕ ಆಡಳಿತ ಮೊಕ್ತೇಸರರಾದ ಪ್ರವೀಣ್ ಎನ್, ಆರಿಗ ನಿಡ್ಪಳ್ಳಿ ಗುತ್ತು, ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಮತ್ತು ಬಾರಿಕೆ ಮನೆಯವರು,ಹಿರಿಯರಾದ ವಾಸುದೇವ ಭಟ್ ಮುಂಡೂರು, ಭರತ್ ಕುಮಾರ್ ಆರಿಗ ಪುತ್ತೂರು ಪಟ್ಟೆ ಗುತ್ತು, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಊರ ಪರವೂರ  ಸಾವಿರಾರು ಭಕ್ತಾದಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here