ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಒರಿಸ್ಸಾ ರಾಜ್ಯದ ಸಹಕಾರಿ ಇಲಾಖಾ ಅಧಿಕಾರಿಗಳು ಭೇಟಿ

0

ವಿಟ್ಲ: ನಬಾರ್ಡ್ ನ ವತಿಯಿಂದ ನಡೆಯುವ ಸಹಕಾರಿ ಇಲಾಖಾ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಂತೆ ಒರಿಸ್ಸಾ ರಾಜ್ಯದ ಸಹಕಾರಿ ಅಧಿಕಾರಿಗಳ ತಂಡ ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿತು.


ಪ್ರೊಗ್ರಾಂ ಡೈರೆಕ್ಟರ್ ಶಕ್ತಿ ಪಿ. ಮಹಾಪಾತ್ರ ರವರ ನೇತೃತ್ವದಲ್ಲಿ ಅಡಿಷನಲ್ ಸೆಕ್ರೆಟರಿ ಶುಭ್ರಾ ಮೊಹಂತಿ, ಶಬೀರ್ ಕುಮಾರ್ ಪಾಂಡ, ಭಕ್ತಬಂಧು ಸಾಹು ಮುಂತಾದ ಅಧಿಕಾರಿಗಳ ಜೊತೆ14ಜನರಿದ್ದ ತಂಡ ಸಂಘದ ಕಾರ್ಯ ಚಟುವಟಿಕೆಗಳನ್ನು ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು, ಉಪಾಧ್ಯಕ್ಷ ರಾಮ ಭಟ್ ನೀರಪಳಿಕೆ. ನಿರ್ದೇಶಕರಾದ ಗೋಪಾಲಕೃಷ್ಣ ಭಟ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್. ಸಂಘದ ಅಭಿವೃದ್ದಿಯ ಹಂತಗಳು, ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ನಬಾರ್ಡ್ ಸಿಬ್ಬಂದಿ ಶಿವರಾಜ್ ದೇವಗುಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here