‘ಜೋರ್ ಲಗಾಕೆ ಹೈಶಾ..’ ಜಾಹೀರಾತಿನ ಸ್ಲೋಗನ್ ಇವತ್ತು ಹೊಸ ಉತ್ಪನ್ನದ ಹೆಸರಾಗಿದೆ’- ಆದಿತ್ಯ ಪಿ ಆರ್
‘ಊರಿನಲ್ಲೇ ಇದ್ದು ಉದ್ಯಮವನ್ನು ಬೆಳೆಸುತ್ತಿರುವ ನರಸಿಂಹ ಪೈ ಯುವ ಉದ್ಯಮಿಗಳಿಗೆ ಮಾದರಿ’- ಸುಧನ್ವ ಆಚಾರ್ಯ
‘ಮಾರ್ಕೆಟ್ ಫಿಟ್ ಪ್ರೈಸ್, ಮಾರ್ಕೆಟ್ ಫಿಟ್ ಕ್ವಾಲಿಟಿ ಮತ್ತು ಮಾರ್ಕೆಟ್ ಫಿಟ್ ಕಲರ್ ಮೂಲಕ ನಿಮ್ಮ ಮುಂದೆ ಬಂದಿದ್ದೇವೆ’- ಅಭಿಷೇಕ್ ನಿಗಮ್
‘ಗಣೇಶ್ ಟ್ರೇಡರ್ಸ್ ಪುತ್ತೂರಿಗೆ ಹೊಸತಲ್ಲ, ಅದೇ ರೀತಿ ಪಿಡಿಲೈಟ್ ಸಹ ಜನರಿಗೆ ಚಿರಪರಿಚಿತ’- ಎಂಜಿನಿಯರ್ ಸತ್ಯಗಣೇಶ್
‘ಗಣೇಶ್ ಟ್ರೇಡರ್ಸ್ ಮತ್ತು ಹೈಶಾ ಎರಡರಲ್ಲೂ ‘ಗಜಮುಖ’ನಿದ್ದು ಈ ವ್ಯವಹಾರ ಬಂಧನ ಯಶಸ್ವಿಯಾಗಲಿ’ – ಎಂಜಿನಿಯರ್ ಪ್ರಮೋದ್ ಕುಮಾರ್ ಕೆ. ಕೆ
ಪುತ್ತೂರು: ಕಳೆದ 44 ವರ್ಷಗಳಿಂದ ದರ್ಬೆ ಸರ್ಕಲ್ ಸಮೀಪದಲ್ಲಿರುವ ನರಸಿಂಹ ಕಟ್ಟಡದಲ್ಲಿ ಕಾರ್ಯಾಚರಿಸುತ್ತಾ ಪುತ್ತೂರು ಮತ್ತು ಸುತ್ತಮುತ್ತಲಿನ ಗ್ರಾಹಕರಿಗೆ ಮನೆ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಹಾಗೂ ಕೃಷಿಕರಿಗೆ ಅತ್ಯುತ್ತಮ ಗುಣಮಟ್ಟದ ಹಾರ್ಡ್ ವೇರ್, ಪ್ಲಂಬಿಂಗ್, ಟೈಲ್ಸ್ ಮತ್ತು ಸ್ಯಾನಿಟರಿ ಸಾಮಾಗ್ರಿಗಳನ್ನು ಪೂರೈಸುತ್ತಾ ಸಂತೃಪ್ತ ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದು ನಿಂತಿರುವ ಗಣೇಶ್ ಟ್ರೇಡರ್ಸ್ ಇದೀಗ ತನ್ನ ಸೇವೆಯನ್ನು ಇನ್ನಷ್ಟು ಕಲರ್ ಫುಲ್ ಆಗಿಸುವ ನಿಟ್ಟಿನಲ್ಲಿ ಪಿಡಿಲೈಟ್ ಕಂಪೆನಿಯ ‘ಹೈಶಾʼ ಪೈಂಟ್ಸ್ ವಿಭಾಗವನ್ನು ಪ್ರಾರಂಭಿಸಿದೆ. ಕಳೆದ 40 ವರ್ಷಗಳಿಂದ ಪಿಡಿಲೈಟ್ ಸಂಸ್ಥೆಯ ಅಧಿಕೃತ ಡೀಲರ್ ಆಗಿರುವ ಗಣೇಶ್ ಟ್ರೇಡರ್ಸ್ ನಲ್ಲಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅವರ ‘ಹೈಶಾ’ ಪೇಂಟಿಂಗ್ ವಿಭಾಗ ಕಾರ್ಯಾರಂಭ ಮಾಡುತ್ತಿರುವುದು ವಿಶೇಷವಾಗಿದೆ.
ಜ.24ರಂದು ನಡೆದ ಕಾರ್ಯಕ್ರಮದಲ್ಲಿ ಈ ನೂತನ ವಿಭಾಗವನ್ನು ಜಿ.ಎಲ್ ಗ್ರೂಪ್ ಆಫ್ ಕಂಪೆನೀಸ್ ನ ನಿರ್ದೇಶಕರಾಗಿರುವ ಯುವ ಉದ್ಯಮಿ ಸುಧನ್ವ ಆಚಾರ್ಯ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ವಾಮನ್ ಪೈ ಮತ್ತು ಅವರ ಕುಟುಂಬ ನಮಗೆ ತುಂಬಾ ಆತ್ಮೀಯವಾಗಿದ್ದು ಈ ಹೊಸ ಸಾಹಸಕ್ಕೆ ಕೈ ಹಾಕಿರುವ ಅವರಿಗೆ ಅಭಿಂದನೆ ತಿಳಿಸುತ್ತೇನೆ’ ಎಂದು ಹೇಳಿದರು. ‘ಇನ್ನು ವಾಮನ್ ಪೈ ಅವರ ಪುತ್ರ ನರಸಿಂಹ ಪೈ ಮತ್ತು ನಾನು ಶಾಲಾ ದಿನಗಳಿಂದಲೂ ಜೊತೆಯಾಗಿದ್ದವರು, ಇದೀಗ ರೋಟರಿ ಸಂಸ್ಥೆಯಲ್ಲೂ ಜೊತೆಯಾಗಿದ್ದೇವೆ. ಅವರು ತಮ್ಮ ಕಲಿಕೆ ಮುಗಿಸಿ ಉದ್ಯೋಗಕ್ಕಾಗಿ ಪರ ಊರಿಗೆ ಹೋಗದೇ ಇಲ್ಲೇ ತಮ್ಮ ಮನೆತನದ ವ್ಯವಹಾರವನ್ನು ಮುನ್ನಡೆಸುತ್ತಾ ಅದನ್ನು ಬೆಳೆಸಿಕೊಂಡು ಹೋಗುತ್ತಿರುವುದು ಎಲ್ಲರಿಗೂ ಮಾದರಿ’ ಎಂದು ಪ್ರಶಂಸಿಸಿದರು. ಗಣೇಶ್ ಟ್ರೇಡರ್ಸ್ ಮತ್ತು ಜಿ ಎಲ್ ಆಚಾರ್ಯ ಗ್ರೂಪ್ ಗೆ ವ್ಯಾವಹಾರಿಕ ಸಂಬಂಧವೂ ಇದ್ದು ಅವರು ಗುಣಮಟ್ಟದ ಉತ್ಪನ್ನಗಳನ್ನು ಉತ್ತಮ ದರದಲ್ಲಿ ನೀಡುತ್ತಾ ಬಂದಿದ್ದಾರೆ, ಅವರ ಈ ಹೊಸ ಸಾಹಸಕ್ಕೆ ಶುಭವಾಗಲಿ’ ಎಂದು ಶುಭ ಹಾರೈಸಿದರು.
ಇದಕ್ಕೂ ಮೊದಲು ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿ ಗಣ್ಯರು ಮತ್ತು ಸಂಸ್ಥೆಯ ಮಾಲಕರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗಣೇಶ್ ಟ್ರೇಡರ್ಸ್‌ನ ಮಾಲಕ ವಾಮನ್ ಪೈ ಅವರು, ‘ಪುತ್ತೂರಿನಲ್ಲಿ ಶತಮಾನಕ್ಕೂ ಮಿಕ್ಕಿದ ಇತಿಹಾಸವನ್ನು ಹೊಂದಿರುವ ಗೋಪಾಲ್ ಪೈ ಕುಟುಂಬದ ಅಂಗ ಸಂಸ್ಥೆಯೇ ಗಣೇಶ್ ಟ್ರೇಡರ್ಸ್ ಆಗಿದೆ. 1981ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಇದೀಗ 43 ವರ್ಷಗಳನ್ನು ಪೂರ್ಣಗೊಳಿಸಿದೆ. ಇವತ್ತು ನನ್ನ ಪುತ್ರ ನರಸಿಂಹ ಸಂಸ್ಥೆಯ ವ್ಯವಹಾರದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸುತ್ತಿದ್ದಾರೆ. ಇಂದು ನಾವು ಪಿಡಿಲೈಟ್ ಸಂಸ್ಥೆಯ ಹೊಸ ಉತ್ಪನ್ನ ಹೈಶಾ ಪೈಂಟನ್ನು ನಮ್ಮ ಮೂಲಕ ಮಾರುಕಟ್ಟೆಗೆ ಪರಿಚಯಿಸಲು ನಮಗೆ ಹೆಮ್ಮೆಯಾಗುತ್ತಿದೆ. ನಮ್ಮ ಈ ಹೊಸ ಸಾಹಸಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ’ ಎಂದು ಕೇಳಿಕೊಂಡರು.
ಪಿಡಿಲೈಟ್ ಮಂಗಳೂರು ಕ್ಲಸ್ಟರ್ ನ ಏರಿಯಾ ಸೇಲ್ಸ್ ಮ್ಯಾನೇಜರ್ ಆದಿತ್ಯ ಪಿ ಆರ್ ಮಾತನಾಡಿ, ‘ಕಳೆದ 60 ವರ್ಷಗಳಿಂದ ಮಾರುಕಟ್ಟೆಯಲ್ಲಿರುವ ಫೆವಿಕಾಲ್ ಸಹಿತ ಪಿಡಿಲೈಟ್ ಉತ್ಪನ್ನಗಳನ್ನು ನಾವೆಲ್ಲರೂ ನಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಬಳಸ್ತಾ ಇದ್ದೇವೆ. ಸೇಲ್ಸ್ ಬದಲು ಕ್ವಾಲಿಟಿ ಮೇಲೆ ಕಂಪೆನಿಯ ಫೋಕಸ್ ಇರುವ ಕಾರಣ ಪಿಡಿಲೈಟ್ ಇಂದು ನಮ್ಮೆಲ್ಲರ ಜೀವನದ ಭಾಗವಾಗಿದೆ’ ಎಂದರು. ಪಿಡಿಲೈಟ್‌ನ ಹೊಸ ಉತ್ಪನ್ನವಾಗಿರುವ ‘ಹೈಶಾ’ ಪೈಂಟ್ ಬಗ್ಗೆ ಮಾತನಾಡುತ್ತಾ, ‘ಪೇಂಟಿಂಗ್ ಉತ್ಪನ್ನಗಳನ್ನು ಕಂಪೆನಿ ಈ ಮೊದಲೇ ಪರಿಚಯಿಸಿದ್ದರೂ ಇದೀಗ ಹೈಶಾ ಹೆಸರಿನಲ್ಲಿ ಇಂಟೀರಿಯರ್ ಪೈಂಟ್ ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದ್ದೇವೆ. ಫೆವಿಕಾಲ್ ಉತ್ಪನ್ನದ ಜಾಹೀರಾತಿನಲ್ಲಿ ಬರುವ ‘ಧಮ್ ಲಗಾಕೆ ಹೈಶಾ..’ ಎಂಬ ಸಾಲಿನಿಂದ ಸ್ಪೂರ್ತಿ ಪಡೆದು ಹೈಶಾ ಎಂಬ ಹೆಸರನ್ನು ಈ ಹೊಸ ಉತ್ಪನ್ನಕ್ಕೆ ಕಂಪೆನಿ ಇಟ್ಟಿದೆ’ ಎಂಬ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟರು.
‘ಹೈಶಾ’ ಭಾರತ್ ಫಸ್ಟ್ ಬ್ರ್ಯಾಂಡ್..
ಯಾವುದೇ ರಾಷ್ಟ್ರಮಟ್ಟದ ಹೊಸ ಉತ್ಪನ್ನಗಳನ್ನು ಮೆಟ್ರೋ ನಗರಗಳಲ್ಲಿ ಲಾಂಚ್ ಮಾಡುವುದು ಸಹಜ. ಆದರೆ ಪಿಡಿಲೈಟ್ ಸಂಸ್ಥೆ ತನ್ನ ಹೊಸ ಉತ್ಪನ್ನ ಹೈಶಾ ಪೇಂಟ್ ಅನ್ನು ‘ಭಾರತ್ ಫಸ್ಟ್’ ಎಂಬ ಪರಿಕಲ್ಪನೆಯಡಿಯಲ್ಲಿ ಮೊದಲಿಗೆ ದೇಶದ ಸಣ್ಣ ನಗರಗಳಲ್ಲಿ ಗ್ರಾಹಕರಿಗೆ ಪರಿಚಯಗೊಂಡು ಅಲ್ಲಿಂದ ಬಳಿಕ ಮಹಾನಗರಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ ಭಾಗದ ಗ್ರಾಹಕರ ಫೀಡ್ ಬ್ಯಾಕ್ ಆಧಾರದಲ್ಲಿ ಮುಂದೆ ಇದು ಮಹಾನಗರಗಳಲ್ಲಿ ಪರಿಚಯಿಸಲ್ಪಡಲಿದೆ ಎಂದು ಆದಿತ್ಯ ಹೇಳಿದರು.
ಹೈಶಾ ಪೇಂಟ್ ನಲ್ಲಿ ಹಲವಾರು ಆಯ್ಕೆಗಳು ಲಭ್ಯವಿದ್ದು, ಇದನ್ನು ಮೊದಲು ಕಾಂಟ್ರಾಕ್ಟರ್ ಗಳಿಗೆ ಕೊಟ್ಟು ಅವರ ಫೀಡ್ ಬ್ಯಾಕ್ ಆಧಾರದಲ್ಲಿ ಡೀಲರ್ ಗಳನ್ನು ಸಂಪರ್ಕಿಸಿರುವುದು ಈ ಹೊಸ ಉತ್ಪನ್ನದ ಮಾರ್ಕೆಟಂಗ್ ಸ್ಪ್ರಾಟಜಿಯ ಇನ್ನೊಂದು ವಿಶೇಷತೆಯಾಗಿದೆ. ಈ ಹೊಸ ಉತ್ಪನ್ನವನ್ನು ಪುತ್ತೂರು ನಗರದಲ್ಲಿ ಪರಿಚಯಿಸಲು ಗಣೇಶ್ ಟ್ರೇಡರ್ಸ್ ನಮಗೆ ತುಂಬಾ ಸಪೋರ್ಟ್ ಮಾಡಿದ್ದು ಅವರನ್ನು ಈ ಸಂದರ್ಭದಲ್ಲಿ ಕಂಪೆನಿಯ ಪರವಾಗಿ ಅಭಿನಂದಿಸುವುದಾಗಿ ಆದಿತ್ಯ ಹೇಳಿದರು.
ಪಿಡಿಲೈಟ್ ಬೆಂಗಳೂರು ಕ್ಲಸ್ಟರ್ ನ ಪ್ರಾದೇಶಿಕ ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಆಗಿರುವ ಅಭಿಷೇಕ್ ನಿಗಮ್ ಮಾತನಾಡಿ, ‘ನಮ್ಮ ಸಂಸ್ಥೆಯ ಈ ಹೊಸ ಉತ್ಪನ್ನವನ್ನು ಈ ಭಾಗದ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಆಸಕ್ತಿ ತೋರಿಸಿದ ಗಣೇಶ್ ಟ್ರೇಡರ್ಸ್ ನ ಮಾಲಿಕರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು. ಭಾರತದಲ್ಲಿ ಪೈಂಟಿಂಗ್ ಇಂಡಸ್ಟ್ರಿ 60 ಸಾವಿರ ಕೋಟಿ ವ್ಯವಹಾರದ ಬೃಹತ್ ಉದ್ಯಮವಾಗಿ ಬೆಳೆದಿದ್ದರೂ, ನಾವು ಗುಣಮಟ್ಟದಲ್ಲಿ ರಾಜಿಯಾಗದೇ ಇರುವ ಕಾರಣ ಈ ಹೊಸ ಪೈಂಟ್ ಉತ್ಪನ್ನವನ್ನು ಪರಿಚಯಿಸಲು ಇಷ್ಟು ಸಮಯ ಹಿಡಿಯಿತು. ಇದೀಗ ನಾವು ‘ಮಾರ್ಕೆಟ್ ಫಿಟ್ ಪ್ರೈಸ್, ಮಾರ್ಕೆಟ್ ಫಿಟ್ ಕ್ವಾಲಿಟಿ ಮತ್ತು ಮಾರ್ಕೆಟ್ ಫಿಟ್ ಕಲರ್ ಮೂಲಕ ನಿಮ್ಮ ಮುಂದೆ ಬಂದಿದ್ದೇವೆ’ ಎಂದು ಹೇಳಿದರು.
ಪೇಸ್‌ನ ಅಧ್ಯಕ್ಷ ಸತ್ಯಗಣೇಶ್ ಮಾತನಾಡಿ, ‘ಗಣೇಶ್ ಟ್ರೇಡರ್ಸ್ ಪುತ್ತೂರಿಗೆ ಹೊಸತಲ್ಲ, ಅದೇ ರೀತಿ ಪಿಡಿಲೈಟ್ ಕಂಪೆನಿಯೂ ಸಹ ಜನರಿಗೆ ಸಾಕಷ್ಟು ಚಿರಪರಿಚಿತವಾಗಿದೆ. ಹಾಗಾಗಿ ಈ ಹೊಸ ಉತ್ಪನ್ನವನ್ನು ನಾವೆಲ್ಲರೂ ಖರೀದಿಸಿ ಸಂಸ್ಥೆಯನ್ನು ಬೆಳೆಸೋಣ ಮತ್ತು ಪುತ್ತೂರಿಗೆ ಈ ಹೊಸ ಉತ್ಪನ್ನವನ್ನು ತಂದು ತೋರಿಸಿದ್ದು ಅವರಿಗೆ ನಮ್ಮ ಬೆಂಬಲ ಅಗತ್ಯವಾಗಿದೆ, ಹಾಗಾಗಿ ಈ ಹೊಸ ವಿಭಾಗ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಶುಭ ನುಡಿಗಳನ್ನಾಡಿದರು.
ಏಸ್ ಪುತ್ತೂರು ಚಾಪ್ಟರ್‌ನ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ. ಕೆ ಮಾತನಾಡಿ, ‘ಗಣೇಶ್ ಟ್ರೇಡರ್ಸ್ ಈಗಾಗಲೇ ಪುತ್ತೂರಿನಾದ್ಯಂತ ತನ್ನ ಉತ್ತಮ ಸೇವೆಗೆ ಹೆಸರುವಾಸಿಯಾಗಿದೆ. ಮೊದಲಿಗೆ ನಾನು ಇದು ‘ಪೈ’ಗೆ ಹೊಂದುವಂತೆ ‘ಹೈ’ ಎಂಬ ಹೆಸರು ಬರುವಂತೆ ಹೊಸ ಉತ್ಪನ್ನವನ್ನು ಗಣೇಶ್ ಟ್ರೇಡರ್ಸ್ ಹೊರತಂದಿದೆ ಎಂದು ಭಾವಿಸಿದ್ದೆ, ಆದರೆ ಇದೀಗ ಇದು ಪಿಡಿಲೈಟ್ ಕಂಪೆನಿಯ ಹೊಸ ಉತ್ಪನ್ನ ಎಂದು ತಿಳಿದು ಸಂತೋಷವಾಯ್ತು. ಗಣೇಶ್ ಟ್ರೇಡರ್ಸ್ ಎಂಬುದು ಆನೆ ಮುಖದ ವಿನಾಯಕನ ಹೆಸರು, ಇನ್ನು ಹೈಶಾ ಉತ್ಪನ್ನದ ಚಿಹ್ನೆ ಸಹ ಆನೆ ಆಗಿದ್ದು ಈ ಉತ್ಪನ್ನ ಮಾರುಕಟ್ಟೆಯಲ್ಲಿ ಮತ್ತು ಗ್ರಾಹಕರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಗೊಳ್ಳಲಿ’ ಎಂದು ಹಾರೈಸಿದರು.
ಪಶುಪತಿ ಶರ್ಮ ಅವರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಗಣೇಶ್ ಟ್ರೇಡರ್ಸ್ ನ ಮಾಲಕ ವಾಮನ್ ಪೈ ಪ್ರಸ್ತಾವನೆಗೈದು ಅತಿಥಿ ಗಣ್ಯರನ್ನು ಸ್ವಾಗತಿಸಿದರು, ಕಾರ್ಯಕ್ರಮ ನಿರೂಪಿಸಿದ ಸಹ ಮಾಲಕ ನರಸಿಂಹ ಪೈ ಧನ್ಯವಾದ ಸಮರ್ಪಿಸಿದರು.
ಗಣೇಶ್ ಟ್ರೇಡರ್ಸ್ ನಲ್ಲಿ ಪ್ಲಂಬಿಂಗ್, ಸ್ಯಾನಿಟರಿ, ಟೈಲ್ಸ್ ಸೇರಿದಂತೆ ನಿರ್ಮಾಣ ಕ್ಷೇತ್ರಕ್ಕೆ ಅಗತ್ಯವಾಗಿರುವ ಎಲ್ಲಾ ಸಾಮಾಗ್ರಿಗಳು ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು ಇದೀಗ ಈ ಸಾಲಿಗೆ ಹೈಶಾ ಬ್ರ್ಯಾಂಡ್ ನ ಪೈಂಟ್ ಸಹ ಸೇರ್ಪಡೆಗೊಂಡಿದೆ. ನಮ್ಮ ಎಲ್ಲಾ ಉತ್ಪನ್ನಗಳೂ ‘ಕ್ವಾಲಿಟಿ ಫರ್ಸ್’ ಎಂಬ ತತ್ವಕ್ಕೆ ಬದ್ಧವಾಗಿದೆ. ಗ್ರಾಹಕರು ಇಲ್ಲಿಂದ ಒಂದು ಉತ್ಪನ್ನವನ್ನು ಖರೀದಿಸಿದ ಬಳಿಕ ಅವರಿಗೆ ಮತ್ತೆ ಅದರ ಬಗ್ಗೆ ಪದೇ ಪದೇ ತಲೆಕೆಡಿಸಿಕೊಳ್ಳುವಂತಾಗಬಾರದು ಎಂಬುದೇ ನಮ್ಮ ವ್ಯವಹಾರದ ಧ್ಯೇಯ. ಇನ್ನು ಹೈಶಾ ಬ್ರ್ಯಾಂಡ್ ನಲ್ಲಿ ಬೇಸಿಕ್ ರೇಂಜ್ ನಲ್ಲೇ ವಾಟರ್ ಪ್ರೂಫಿಂಗ್ ಸೊಲ್ಯೂಷನ್ ನ ಪೈಂಟ್ ಗಳು ಲಭ್ಯವಿದೆ. ಇದು ರೈನ್ ಕೋಟ್ ರೀತಿಯಲ್ಲಿ ನಮ್ಮ ಮನೆ ಅಥವಾ ಕಟ್ಟಡವನ್ನು ಮಳೆಯಿಂದ ರಕ್ಷಿಸುವಲ್ಲಿ ನೆರವಾಗುತ್ತದೆ, ಇದು ಈ ಬ್ರ್ಯಾಂಡ್ ನ ಪ್ರಮುಖ ವಿಶೇಷತೆ. ಅತ್ಯಾಧುನಿಕ ತಂತ್ರಜ್ಞಾನದ ಕಂಪ್ಯೂಟರೀಕೃತ ಕಲರ್ ಮಿಕ್ಸಿಂಗ್ ಯಂತ್ರದ ಮೂಲಕ ಗ್ರಾಹಕರು ತಮ್ಮ ಅಭಿರುಚಿಗೊಪ್ಪುವ ಬಣ್ಣವನ್ನು ಕಾಂಬಿನೇಷನ್ ಮಾಡಿಕೊಂಡು ಪೇಂಟ್ ಗಳನ್ನು ಸೆಲೆಕ್ಟ್ ಮಾಡುವ ಅವಕಾಶವಿಲ್ಲಿದೆ. ನಮ್ಮಲ್ಲಿ ನಾವು ಯಾವುದೇ ಉತ್ಪನ್ನವನ್ನು ಗ್ರಾಹಕರಿಗೆ ನೀಡುವ ಸಂದರ್ಭದಲ್ಲಿ ಅವರನ್ನು ಆ ಪ್ರಾಡಕ್ಟ್ ಬಗ್ಗೆ ಎಜುಕೇಟ್ ಮಾಡಿ ಉತ್ಪನ್ನವನ್ನು ಮಾರಾಟ ಮಾಡುತ್ತೇವೆ. ಹಾಗಾಗಿ ನಮ್ಮಲ್ಲಿ ಗ್ರಾಹಕ ಸಂತೃಪ್ತಿ ಮತ್ತು ಉತ್ಪನ್ನದ ಗುಣಮಟ್ಟಕ್ಕೇ ಮೊದಲ ಆದ್ಯತೆ.
-ನರಸಿಂಹ ಪೈ, ಸಹ ಮಾಲಕರು, ಗಣೇಶ್ ಟ್ರೇಡರ್ಸ್