ಪುತ್ತೂರು: ಪುರುಷರಕಟ್ಟೆಯಲ್ಲಿರುವ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಜ.26ರ ಗಣರಾಜ್ಯೋತ್ಸವ ಅಂಗವಾಗಿ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿಯ ಉಚಿತ ಶಿಬಿರ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ತನಕ ನಡೆಯಲಿರುವ ಈ ಶಿಬಿರದಲ್ಲಿ ರೂ.1200 ಮೌಲ್ಯದ ಎಲುಬು ಸಾಂದ್ರತ ಪರೀಕ್ಷೆ (Bone mineral density test)ನ್ನು ಉಚಿತವಾಗಿ ಮಾಡಲಾಗುವುದು. ಪುತ್ತೂರಿನ ಖ್ಯಾತ ಮತ್ತು ಕೀಲು ಸರ್ಜನ್ ಡಾ. ಸಚಿನ್ ಶಂಕರ್ ಹಾರಕೆರೆ ಅವರು ಶಿಬಿರದಲ್ಲಿ ಸಂದರ್ಶನಕ್ಕೆ ಲಭ್ಯರಿರುವರು. ಅಲ್ಲದೇ, ಫಿಸಿಯೋಥೇರೇಪಿ ತಜ್ಞರ ಸಂದರ್ಶನ ಹಾಗೂ ಫಿಸಿಯೋಥೇರೇಪಿ ಚಿಕಿತ್ಸೆ ಉಚಿತವಾಗಿ ನಡೆಯಲಿದೆ.
ಎಲುಬು ಮತ್ತು ಕೀಲು ಸಂಬಂಧಿಸಿದ ವ್ಯಾಧಿಗಳಾದ ಸಂಧಿ ವಾತಾ, ಆಮವಾತ, ಕತ್ತುನೋವು, ಸೊಂಟನೋವು, ಭುಜನೋವು, ಎಲುಬುಮುರಿತ, ಸ್ಪೋರ್ಟ್ಸ್ ಇಂಜ್ಯೂರಿ ಇತ್ಯಾದಿ ಸಮಸ್ಯೆಗಳಿರುವವರು ಶಿಬಿರದ ಪ್ರಯೋಜನವನ್ನು ಪಡೆಯಬಹುದು ಎಂದು ಪುರುಷರಕಟ್ಟೆ ಸಿದ್ಧಣ್ಣ ಕಾಂಪ್ಲೆಕ್ಸ್ ನಲ್ಲಿರುವ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞ ಡಾ. ಸುಜಯ್ ಕೃಷ್ಣ ತಂತ್ರಿ ಕೆಮ್ಮಿಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.