ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಜ.27ರಂದು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಬೊಳುವಾರು ಇಲ್ಲಿ ಪಾರ್ತಿಸುಬ್ಬ ವಿರಚಿತ ಕಬಂದ-ಶಬರಿ ಮೋಕ್ಷ, ಸುಗ್ರೀವ ಸಖ್ಯ ಎಂಬ ತಾಳಮದ್ದಳೆ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಹಾಗೂ ಮಾಂಬಾಡಿ ವೇಣುಗೋಪಾಲ್ ಭಟ್ ( ಶ್ರೀ ರಾಮ), ದುಗ್ಗಪ್ಪ ನಡುಗಲ್ಲು (ಹನುಮಂತ), ಅಚ್ಯುತ ಪಾಂಗಣ್ಣಾಯ (ಸುಗ್ರೀವ)), ಕಿಶೋರಿ ದುಗ್ಗಪ್ಪ ನಡುಗಲ್ಲು (ಶಬರಿ), ಹರಿಣಾಕ್ಷಿ .ಜೆ.ಶೆಟ್ಟಿ(ಕಬಂಧ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು. ಪಿ.ಜಿ. ಜಗನ್ನಿವಾಸ ರಾವ್ ಪ್ರಾಯೋಜಿಸಿದರು.

LEAVE A REPLY

Please enter your comment!
Please enter your name here