ಒಳಮೊಗ್ರು ಕುಕ್ಕುಮುಗೇರು ಉಳ್ಳಾಕುಲು ನೇಮೋತ್ಸವಕ್ಕೆ ಅದ್ಧೂರಿ ಹೊರೆಕಾಣಿಕೆ ಸಮರ್ಪಣೆ, ಕದಿಕೆ ತುಂಬಿಸುವ ಕಾರ್ಯಕ್ರಮ

0

ಪುತ್ತೂರು: ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವವು ಬೊಳ್ಳಾಡಿ ರಾಜಮಾಡದಲ್ಲಿ ಜ.29 ರಿಂದ ಆರಂಭಗೊಂಡು ಫೆ.3ರವರೆಗೆ ನಡೆಯಲಿದ್ದು ಇದರ ಅಂಗವಾಗಿ ಜ.29ರಂದು ಬೆಳಿಗ್ಗೆ ಮುಗೇರು ಕದಿಕೆ ಚಾವಡಿ ಮತ್ತು ಕೈಕಾರ ಕಿನ್ನಿಮಾಣಿ ದೈವಸ್ಥಾನದಲ್ಲಿ ಉದಯ ನಾರಾಯಣರವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಮತ್ತು ತಂಬಿಲ ಸೇವೆ ನಡೆದು ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವ ಕಾರ್ಯಕ್ರಮ ನಡೆಯಿತು. ರಾತ್ರಿ ದೈವಗಳ ಕೀರ್ವಾಳು ಭಂಡಾರ ಏರಿಸುವ ಕಾರ್ಯಕ್ರಮ ರಾಜಮಾಡದಲ್ಲಿ ನಡೆಯಿತು.

ಅದ್ಧೂರಿ ಹೊರೆಕಾಣಿಕೆ ಸಮರ್ಪಣೆ
ಬೆಳಿಗ್ಗೆ 8.30ಕ್ಕೆ ಮುಗೇರು ಕದಿಕೆ ಚಾವಡಿ ಕದಿಕೆ ತುಂಬಿಸಲು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ದರ್ಬೆತ್ತಡ್ಕ ಶಾಲಾ ಬಳಿ ಹೊರೆ ಕಾಣಿಕೆ ಮೆರವಣಿಗೆಯ ಉದ್ಘಾಟನೆ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಎ.ಜಿ ವಿಜಯ ಕುಮಾರ್ ರೈ ಮುಗೇರುರವರು ತೆಂಗಿನ ಕಾಯಿ ಒಡೆದು, ಆರತಿ ಮಾಡಿ ಹೊರೆಕಾಣಿಕೆ ಮೆರವಣಿಗೆಯನ್ನು ಉದ್ಘಾಟಿಸಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಆರತಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಹೊರೆಕಾಣಿಕೆ ಮೆರವಣಿಗೆ ಹಾಗೂ ಕದಿಕೆ ತುಂಬಿಸುವ ಕಾರ್ಯಕ್ರಮದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರುಗಳಾದ ಎ.ಚಿಕ್ಕಪ್ಪ ನಾೖಕ್‌ ಅರಿಯಡ್ಕ, ಎ.ಜಿ.ವಿಜಯ ಕುಮಾರ್ ರೈ ಮುಗೇರು, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ ಮತ್ತು ಶೀನಪ್ಪ ನಾಯ್ಕ ಮುಡಾಲ, ರಕ್ಷಿತ್ ರೈ ಮುಗೇರು, ರಾಜೇಶ್ ರೈ ಪರ್ಪುಂಜ, ಶ್ರೀನಿವಾಸ ರೈ, ಅರುಣ್ ರೈ ಬಿಜಳ, ಸೀತಾರಾಮ ಶೆಟ್ಟಿ ಮುಡಾಲ, ಸಂಕಪ್ಪ ಆಳ್ವ ಕಲ್ಲಡ್ಕ, ವೀರಪ್ಪ ಮೂಲ್ಯ ಬೈರಮೂಲೆ, ಹರಿಪ್ರಸಾದ್ ಬೊಳ್ಳಾಡಿ, ರವೀಂದ್ರ ಬಿಜತ್ರೆ, ದೇಜಪ್ಪ ಉಪ್ಪಿನಂಗಡಿ, ಜಗನ್ನಾಥ ಪೂಜಾರಿ ಮುಡಾಲ, ರಾಜಶೇಖರ ಶೆಟ್ಟಿ ಮುಡಾಲ, ಪುರಂದರ ಶೆಟ್ಟಿ ಮುಡಾಲ, ಶೇಖರ ರೈ ಅಲಂಗೂರು, ಸೋಮಪ್ಪ ಪೂಜಾರಿ, ಮೋಹನ್ ಕುಮಾರ್ ಬಡಕ್ಕೋಡಿ, ತೀರ್ಥರಾಮ ಗೌಡ, ಶಾಲಿನಿ ಬಿ.ರೈ, ಚಂದ್ರಶೇಖರ ರೈ ಕಲ್ಲಡ್ಕ, ಮೋಕ್ಷಿತ್ ಕಲ್ಲಡ್ಕ, ನಿಶಾಂತ್ ರೈ ತುಂಡುಬೈಲ್, ಸೋಮಯ್ಯ ಆಚಾರ್ಯ, ದಿವಾಕರ ಪೂಜಾರಿ ಪಲ್ಲತ್ತಾರು, ಶಶಿಕಲ ಶೆಟ್ಟಿ ಮುಗೇರು, ಗೀತಾ ಅಡ್ಯಂತಾಯ ಮುಗೇರು, ಜಯರಾಮ ರೈ ಕಲ್ಲಡ್ಕ, ವಿಜಯಲಕ್ಷ್ಮೀ ವಿ.ರೈ ಮುಗೇರು, ವಿಖ್ಯಾತ್ ರೈ ಮುಗೇರು, ಕೇಶವ ಪೂಜಾರಿ ನಾಣಿಲತ್ತಡ್ಕ, ಕುಶಾಲಪ್ಪ ನಾಯ್ಕ, ಗಿರೀಶ್ ನಾಯ್ಕ ಮುಡಾಲ, ಸಂಕಪ್ಪ ರೈ, ಬಾಬು ದರ್ಬೆತ್ತಡ್ಕ, ಗಿರೀಶ್ ರೈ ನೀರ್ಪಾಡಿ, ದಿವಾಕರ ಪೂಜಾರಿ, ಬಾಬು ಪೂಜಾರಿ, ರಮೇಶ್ ಪೂಜಾರಿ, ವೆಂಕಪ್ಪ ಪೂಜಾರಿ ದರ್ಬೆತ್ತಡ್ಕ, ಪ್ರವೀಣ್ ಪಲ್ಲತ್ತಾರು, ಸಂದೇಶ್ ಪೂಜಾರಿ ಬೊಳ್ಳಾಡಿ, ರವಿ ಮಣಿಯಾಣಿ ದರ್ಬೆತ್ತಡ್ಕ, ಶಿವಪ್ಪ ಮುಡಾಲಮೂಲೆ, ರಾಮಚಂದ್ರ ಸಂಪ್ಯ, ಬಾಳಪ್ಪ ನಾಯ್ಕ ಮುಡಾಲಮೂಲೆ, ನಾರಾಯಣ ನಾಯ್ಕ ದರ್ಬೆತ್ತಡ್ಕ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.



ಹೊರೆಕಾಣಿಕೆ ಮೆರವಣಿಗೆಯು ದರ್ಬೆತ್ತಡ್ಕ ಶಾಲೆ, ನೀರ್ಪಾಡಿ, ಅಜಲಡ್ಕ ವಿಠಲ ಪೂಜಾರಿ ಅಂಗಡಿ, ಉಪ್ಪಳಿಗೆ, ಗುಮ್ಮಟೆಗದ್ದೆ, ಸಾಹೇಬರ ಅಂಗಡಿ ಹತ್ತಿರ, ಶ್ರೀ ದೇವಿ ಭಜನಾ ಮಂದಿರ ಮುಂಡೋವುಮೂಲೆ, ಅಜ್ಜಿಕಲ್ಲು, ಬೈರೋಡಿ, ಕಾಪಿಕಾಡು, ತೊಟ್ಲ, ಕೈಕಾರ ಹಾಲಿನ ಸೊಸೈಟಿ, ಕೈಕಾರ ಜುಮಾದಿ ದೈವಸ್ಥಾನದ ಹತ್ತಿರ, ರಾಜ್ ಕಾಂಪ್ಲೆಕ್ಸ್ ಪರ್ಪುಂಜ, ಸದಾಶಿವ ಭಜನಾ ಮಂದಿ, ಕೊಲತ್ತಡ್ಕ ಶಿವಕೃಪಾ, ಕುಂಬ್ರ ಶ್ರೀ ರಾಮ ಭಜನಾ ಮಂದಿರ, ಶೇಖಮಲೆ ಹಾಗೂ ಮುಡಾಲ ಮರಾಟಿ ಮಂದಿರ ಇಲ್ಲಿಂದ ಹೊರಟು ಮುಗೇರು ಕದಿಕೆ ಚಾವಡಿಗೆ ಬಂದು ಸೇರಿತು. ನೂರಾರು ಭಕ್ತರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀ ದೈವಗಳ ಕೃಪೆಗೆ ಪಾತ್ರರಾದರು.

ನಾಳೆ ರಾಜಮಾಡದಲ್ಲಿ ನೇಮೋತ್ಸವ ಸಂಭ್ರಮ
ಜ.30ರಂದು ಬೆಳಿಗ್ಗೆ ಶ್ರೀ ಕಿನ್ನಿಮಾಣಿ ದೈವದ ನೇಮ, ಗಂಧಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಶ್ರೀ ಪೂಮಾಣಿ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಸುಡುಮದ್ದು ಸೇವೆ ನಡೆಯಲಿದೆ. ಬಳಿಕ ಶ್ರೀ ಮಲರಾಯ ದೈವದ ನೇಮ, ಗಂಧ ಪ್ರಸಾದ ವಿತರಣೆ, ವರ್ಣರ ಪಂಜುರ್ಲಿ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here