ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ`ಸಿಲ್ವರಿಯಂ’ ಘೋಷಣಾ ಸಮಾವೇಶ, ಕಟ್ಟಡ ಶಿಲಾನ್ಯಾಸ

0

ಮಹಿಳಾ ಶಿಕ್ಷಣದಲ್ಲಿ ಮರ್ಕಝ್‌ನಿಂದ ಅಮೋಘ ಸಾಧನೆ-ಗಣ್ಯರಿಂದ ಗುಣಗಾನ

ಮಹಿಳಾ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಮರ್ಕಝ್:
2001 ಜನವರಿ 26ರಂದು ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ಮರ್ಕಝುಲ್ ಹುದಾ ಸಂಸ್ಥೆಗೆ ಶಿಲಾನ್ಯಾಸ ಮಾಡಿದ್ದು ಕಳೆದ 23 ವರ್ಷಗಳಲ್ಲಿ ಈ ಸಂಸ್ಥೆ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಪದವಿಪೂರ್ವ, ಪದವಿ ಮತ್ತು ಶರಿಯಾ ಕೋರ್ಸ್‌ಗಳಲ್ಲಿ 600ರಷ್ಟು ಹೆಣ್ಮಕ್ಕಳು ಕಲಿಯುತ್ತಿದ್ದಾರೆ. ವಸತಿ ಸೌಕರ್ಯ ಇರುವ ಕಾರಣದಿಂದ ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ವಿದ್ಯಾರ್ಥಿನಿಯರು ಸೇರ್ಪಡೆಗೊಳ್ಳುತ್ತಿದ್ದಾರೆ. ಅತ್ಯುತ್ತಮ ಕ್ಯಾಂಪಸ್ ಹಾಗೂ ಶಿಸ್ತಿಗೆ ವಿಶೇಷ ಪ್ರಾಧಾನ್ಯತೆ ನೀಡುತ್ತಿರುವ ಮರ್ಕಝುಲ್ ಹುದಾ ವಿದ್ಯಾಸಂಸ್ಥೆ ರಾಜ್ಯದ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇದೀಗ `ಸಿಲ್ವರಿಯಂ’ ಹೆಸರಿನಲ್ಲಿ 2 ವರ್ಷ ಹಲವು ಕಾಯ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗುತ್ತದೆ. ಅಲ್ಲದೇ ಬಹುಮಹಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದು ಅದರಲ್ಲಿ ಕ್ಲಾಸ್ ರೂಂ, ಪ್ರಾರ್ಥನಾ ಕೊಠಡಿ ಹಾಗೂ ವಸತಿ ವ್ಯವಸ್ಥೆಯನ್ನು ಒಳಗೊಂಡಿರಲಿದೆ.

ನಿಮ್ಮೆಲ್ಲರ ಸಹಕಾರದಿಂದ ಸಂಸ್ಥೆ ಮುನ್ನಡೆಯುತ್ತಿದೆ-ಅರಿಯಡ್ಕ ಹಾಜಿ
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ನಮ್ಮ ವಿದ್ಯಾಸಂಸ್ಥೆ ವ್ಯಾವಹಾರಿಕವಾಗಿ ಲಾಭ ಮಾಡುವ ಉದ್ದೇಶಕ್ಕೆ ಹುಟ್ಟಿಕೊಂಡಿರುವ ಸಂಸ್ಥೆಯಲ್ಲ. ನಮ್ಮ ಸಮುದಾಯದ ಹೆಣ್ಮಕ್ಕಳು ಕಲಿಯಬೇಕೆನ್ನುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು. ವಿದ್ಯಾಸಂಸ್ಥೆ ನಡೆಸಲು ಆರ್ಥಿಕತೆ ಗಟ್ಟಿಯಾಗಿರಬೇಕಾದ ಅಗತ್ಯವಿದ್ದು ಊರವರ ಮತ್ತು ವಿಶೇಷವಾಗಿ ವಿದೇಶದಲ್ಲಿ ನಮ್ಮ ಸಂಸ್ಥೆಯ ಹಿತೈಷಿಗಳ ಸಹಕಾರಿಂದ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದು ನನ್ನ ಸಂಸ್ಥೆ ಎನ್ನುವ ಭಾವನೆಯಿಂದ ಪ್ರತಿಯೊಬ್ಬರೂ ಇದಕ್ಕೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಮರ್ಕಝ್ ಇಂಟರ್‌ನ್ಯಾಶನಲ್ ಸ್ಕೂಲ್, ದುವಾ ಕಾಲೇಜು ಸ್ಥಾಪಿಸಲು ಚಿಂತನೆ:
ಪ್ರಾಸ್ತಾವಿಕವಾಗಿ ಸಂಸ್ಥೆಯ ಉಪಾಧ್ಯಕ್ಷ ಎಮ್ಮೆಸ್ಸೆಂ ಅಬ್ದರ್ರಶೀದ್ ಝೈನಿ ಕಾಮಿಲ್ ಮಾತನಾಡಿ ಸುಮಾರು 5೦೦೦ಕ್ಕೂ ಅಧಿಕ ವಿದ್ಯಾರ್ಥಿನಿಯರು ಇಲ್ಲಿ ಕಲಿತಿದ್ದು ಅದರಲ್ಲಿ ಹಲವರು ಇಂದು ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಮರ್ಕಝುಲ್ ಹುದಾ ಅಧೀನದಲ್ಲಿ ಪುತ್ತೂರು ತಾಲೂಕಿನಲ್ಲಿ ಮರ್ಕಝ್ ಇಂಟರ್‌ನ್ಯಾಶನಲ್ ಸ್ಕೂಲ್ ಪ್ರಾರಂಭಿಸುವ ಕುರಿತು ಚಿಂತನೆ ನಡೆಸುತ್ತಿದ್ದು ಗಂಡು ಮಕ್ಕಳಿಗಾಗಿ ದಅವಾ ಕಾಲೇಜು ಸ್ಥಾಪಿಸುವ ಗುರಿಯೂ ನಮ್ಮದಾಗಿದೆ ಎಂದು ಹೇಳಿದರು.


ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು 23 ಯಶಸ್ವೀ ವರ್ಷಗಳನ್ನು ಪೂರೈಸಿ 24ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಸಿಲ್ವರಿಯಂ ಎಂಬ ಹೆಸರಲ್ಲಿ ಎರಡು ವರ್ಷಗಳ ಕಾಲ ಬೆಳ್ಳಿ ಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು ಇದರ ಘೋಷಣೆ ಹಾಗೂ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಜ.26ರಂದು ಸಂಜೆ ಕುಂಬ್ರ ಮರ್ಕಝುಲ್ ಹುದಾ ವಠಾರದಲ್ಲಿ ನಡೆಯಿತು. ಶಿಲಾನ್ಯಾಸ ಹಾಗೂ ಸಿಲ್ವರಿಯಂನ ಉದ್ಘಾಟನೆಯನ್ನು ವಿಶ್ವ ವಿಖ್ಯಾತ ಮರ್ಕಝ್ ಸಖಾಫತಿ ಸ್ಸುನ್ನಿಯ್ಯದ ಅಧ್ಯಕ್ಷ ಸಮಸ್ತ ಮುಶಾವರದ ಉಪಾಧ್ಯಕ್ಷ ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀ ತಂಙಳ್ ನಿರ್ವಹಿಸಿದರು.

ನೂತನ ಲೋಗೋ ಪ್ರಕಾಶನ:
ಸಂಸ್ಥೆಯ ನೂತನ ಲೋಗೊವನ್ನು ಈಗಾಗಲೇ ಎ.ಪಿ ಉಸ್ತಾದ್ ಬಿಡುಗಡೆಗೊಳಿಸಿದ್ದು ಅದನ್ನು ಇದೇ ವೇಳೆ ಸಯ್ಯಿದ್ ಅಲೀ ಬಾಫಖೀ ತಂಙಳ್ ನೇತೃತ್ವದಲ್ಲಿ ವೇದಿಕೆಯಲ್ಲಿ ಪ್ರಕಾಶನ ಮಾಡಲಾಯಿತು.

ಕುಟುಂಬವೇ ಸುಶಿಕ್ಷಿತವಾಗುತ್ತಿದೆ-ಅಹ್ಮದ್ ಹಾಜಿ
ಉದ್ಘಾಟಿಸಿದ ಕುಂಬ್ರ ಕೆಐಸಿ ಅಧ್ಯಕ್ಷ ಅಹ್ಮದ್ ಹಾಜಿ ಆಕರ್ಷಣ್ ಮಾತನಾಡಿ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿನಿಯರ ಕುಟುಂಬವೇ ಸುಶಿಕ್ಷಿತವಾಗುತ್ತಿದ್ದು ಇಂತಹ ಸಂಸ್ಥೆಗಳನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ಸೌದಿ ರಾಷ್ಟ್ರೀಯ ಸಮಿತಿಯಿಂದ ಕಟ್ಟಡ ನಿರ್ಮಾಣ-ಫಾರೂಕ್ ಕನ್ಯಾನ
ಮರ್ಕಝುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಮಹಮ್ಮದ್ ಫಾರೂಕ್ ಕನ್ಯಾನ ಮಾತನಾಡಿ ನಮ್ಮ ಸಮುದಾಯ ಇಂದು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಬಲಿಷ್ಠಗೊಳ್ಳುತ್ತಿದ್ದು ಮಹಿಳೆಯರು ಕೂಡಾ ಸುಶಿಕ್ಷಿತರಾಗುತ್ತಿದ್ದಾರೆ, ಇದು ಉತ್ತಮ ಬೆಳವಣಿಗೆಯಾಗಿದೆ. ಇಲ್ಲಿ ನಿರ್ಮಿಸಲುದ್ದೇಶಿಸಿರುವ ನೂತನ ಕಟ್ಟಡವನ್ನು ಎಲ್ಲರ ಸಹಕಾರದೊಂದಿಗೆ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ ನಿರ್ಮಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಸರಕಾರದಿಂದ ಸಿಗುವ ಸವಲತ್ತು ತೆಗೆಸಿಕೊಡಲು ಪ್ರಯತ್ನ-ಎಂ.ಎಸ್ ಮುಹಮ್ಮದ್
ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಹೆಣ್ಣೊಬ್ಬಳು ಕಲಿತರೆ ಅವಳ ಇಡೀ ಕುಟುಂಬ ಸುಶಿಕ್ಷಿತವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಮರ್ಕಝುಲ್ ಹುದಾಗೆ ಬೆಂಬಲವಾಗಿ ನಿಲ್ಲಬೇಕು, ಸರಕಾರದಿಂದ ಇಲ್ಲಿಗೆ ಸಿಗುವ ಸೌಲಭ್ಯಗಳನ್ನು ತೆಗೆಸಿಕೊಡಲು ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಮರ್ಕಝ್ ಸಮುದಾಯದ ಸೊತ್ತು-ಸುಹೈಲ್ ಕಂದಕ್
ಕೆಪಿಸಿಸಿ ರಾಜ್ಯ ಸಂಯೋಜಕ ಸುಹೈಲ್ ಕಂದಕ್ ಮಾತನಾಡಿ ಕುಂಬ್ರ ಮರ್ಕಝುಲ್ ಹುದಾವನ್ನು ಕಾಲೇಜು ಎನ್ನುವುದಕ್ಕಿಂತಲೂ ಇದನ್ನು ಸಮುದಾಯದ ಸೊತ್ತು ಎನ್ನಬಹುದು, ಇದರ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಹೇಳಿ ತಮ್ಮ ವೈಯಕ್ತಿಕ ಕೊಡುಗೆಯೊಂದನ್ನು ಘೋಷಿಸಿದರು.

ವಕ್ಫ್‌ನಿಂದ ಅನುದಾನ ನೀಡಲು ಪ್ರಯತ್ನ-ನಾಸಿರ್ ಲಕ್ಕಿಸ್ಟಾರ್
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ ಮರ್ಕಝುಲ್ ಹುದಾ ಸಂಸ್ಥೆಗಾಗಿ ಇದರ ಆಡಳಿತ ಕಮಿಟಿಯವರು, ಸಂಬಂಧಪಟ್ಟವರು ಇಷ್ಟೆಲ್ಲಾ ಕಷ್ಟಪಡುವಾಗ ಅವರಿಗೆ ನಾವು ಸಹಕಾರ ನೀಡಬೇಕು, ವಕ್ಫ್‌ನಿಂದ ಸಿಗುವ ಅನುದಾನವನ್ನು ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ನಿಷ್ಕಳಂಕ ಮನಸ್ಸು ಇದ್ದರೆ ಯಶಸ್ಸು ಖಚಿತ-ಮುಸ್ತಫಾ ಸುಳ್ಯ
ಮೀಫ್ ಉಪಾಧ್ಯಕ್ಷ ಕೆ.ಎಂ ಮುಸ್ತಫಾ ಸುಳ್ಯ ಮಾತನಾಡಿ ನಿಷ್ಕಳಂಕ ಮನಸ್ಸು ಇರುವವರಲ್ಲಿ ಅಧಿಕಾರ ಇದ್ದರೆ ಅದು ಯಶಸ್ಸು ಸಾಧಿಸುತ್ತದೆ, ಹಾಗಾಗಿ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಮತ್ತು ತಂಡಕ್ಕೆ ನಾವೆಲ್ಲಾ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಮರ್ಕಝ್ ಯಶಸ್ಸಿನ ಪಥದಲ್ಲಿ ಸಾಗುತ್ತೊದೆ-ಬಶೀರ್ ಇಂದ್ರಾಜೆ
ಸ್ವಾಗತಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಮಾತನಾಡಿ ಮರ್ಕಝುಲ್ ಹುದಾ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದು ವಿವಿಧ ದೇಶಗಳಲ್ಲಿರುವ ಮರ್ಕಝುಲ್ ಹುದಾ ರಾಷ್ಟ್ರೀಯ ಸಮಿತಿಯವರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಯು.ಕೆ ಮಹಮ್ಮದ್ ಸಅದಿ ವಳವೂರು ದುವಾ ಮಾಡಿದರು.
ವೇದಿಕೆಯಲ್ಲಿ ಸುಲ್ತಾನ್ ಗೋಲ್ಡ್‌ನ ಅಬ್ದುಲ್ ರವೂಫ್, ಶಕೀರ್ ಹಾಜಿ ಹೈಸಮ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷ ಸುರಯ್ಯ ಅಬ್ದುಲ್ ಖಾದರ್ ಹಾಜಿ, ಹಂಝ ಹಾಜಿ ಸಾಲ್ಮರ, ವೈಎಂಕೆ ಸೈಯದ್ ಬುರೈದ, ಬಿ.ಪಿ ಅಬ್ದುಲ್ ಹಮೀದ್ ಹಾಜಿ ಬೈತಡ್ಕ, ಕೆಎಂಜೆ ಜಿಲ್ಲಾ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ಬೈತಡ್ಕ, ಬಿ.ಕೆ ಬಿಲ್ಡ್ ಮಾರ್ಟ್‌ನ ಮೊಯ್ದೀನ್, ಇಬ್ರಾಹಿಂ ಹಾಜಿ ಕತ್ತರ್, ಮಲ್ಲೂರು ಅಶ್ರಫ್ ಸಅದಿ, ಮರ್ಕಝುಲ್ ಹುದಾ ಶರೀಅತ್ ಕಾಲೇಜಿನ ಮುದರ್ರಿಸ್ ಅಬ್ದುಲ್ ಜಲೀಲ್ ಸಖಾಫಿ, ಮದೀನತುಲ್ ಮುನವ್ವರ ದುವಾ ಕಾಲೇಜಿನ ಪ್ರಾಂಶುಪಾಲ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ, ಅಬ್ದುಲ್ ರಝಾಕ್ ಅಳಕೆಮಜಲು, ಯೂಸುಫ್ ಕಳಂಜಿಬೈಲು ರಿಯಾದ್, ಅಬ್ದುಲ್ ರಝಾಕ್ ಹಾಜಿ ಮಣಿಲ ಶಾರ್ಜಾ, ನೂರ್ ಮಹಮ್ಮದ್ ನೀರ್ಕಜೆ, ಅಡ್ವೊಕೇಟ್ ಅಬೂಬಕ್ಕರ್ ಅಡ್ಕಾರ್, ಡಾ.ಅಬೂಬಕ್ಕರ್ ಆರ್ಲಪದವು, ನಝೀರ್ ಮಠ, ಅಡ್ವೊಕೇಟ್ ಮೂಸಾ ಪೈಂಬಚ್ಚಾಲ್, ಮರ್ಕಝುಲ್ ಹುದಾ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಪ್ರಮುಖರಾದ ಯೂಸುಫ್ ಹಾಜಿ ಕೈಕಾರ, ಆಶಿಕುದ್ದೀನ್ ಅಖ್ತರ್, ಯೂಸುಫ್ ಮೈದಾನಿಮೂಲೆ,ಕರೀಂ ಕಾವೇರಿ, ಜಿ.ಎಂ ಕುಂಞಿ ಉಪ್ಪಿನಂಗಡಿ, ಮರ್ಕಝುಲ್ ಹುದಾ ಪದವಿ ವಿಭಾಗದ ಪ್ರಾಂಶುಪಾಲ ಮನ್ಸೂರ್ ಕಡಬ, ಡಿಗ್ರಿ ವಿಭಾಗದ ಶರೀಅತ್ ಉಸ್ತಾದ್ ಸ್ವಾಲಿಹ್ ಹನೀಫಿ ಸುಣ್ಣಮೂಲೆ, ಕೆ.ಎಚ್ ಅಬ್ದುಲ್ ಜಲೀಲ್ ಹಾಜಿ ಕುಂಬ್ರ, ಕಮ್ಯೂನಿಟಿ ಸೆಂಟರ್‌ನ ನಝೀರ್ ಉಸ್ಮಾನ್ ಮುಸ್ಲಿಯಾರ್ ಕೊಯಿಲತ್ತಡ್ಕ, ಅಬೂಬಕ್ಕರ್ ಸಾರೆಪುಣಿ, ಅಬ್ಬಾಸ್ ಫೈಝಿ ಜಾಲ್ಸೂರು, ಎಂ.ಎಸ್ ಮಹಮ್ಮದ್ ಕುಂಞಿ ಶೇಕಮಲೆ, ಒಳಮೊಗ್ರು ಗ್ರಾ.ಪಂ ಸದಸ್ಯ ಲತೀಫ್, ಮಜೀದ್ ಅಲಂಗೂರು, ಎ.ಆರ್ ಇಬ್ರಾಹಿಂ, ಅಬ್ದುರ್ರಹ್ಮಾನ್ ಶೇಕಮಲೆ, ಮಹಮ್ಮದ್ ಕೆಜಿಎನ್ ಕಲ್ಪಣೆ, ಹಕೀಂ ವಿಟ್ಲ, ಉಮ್ಮರ್ ವಿಟ್ಲ, ಹನೀಫ್ ಹಾಜಿ ಇಂದ್ರಾಜೆ, ಸುಲೈಮಾನ್ ಹಾಜಿ ಇಂದ್ರಾಜೆ, ಅಬ್ದುಲ್ ಖಾದರ್ ಹಾಜಿ ಮೇರ್ಲ, ಎಂ.ಕೆ ಮಹಮ್ಮದ್ ಅರಿಕ್ಕಿಲ, ರಶೀದ್ ಬೊಳ್ಳಾಡಿ, ಅಬ್ದುರ್ರಹ್ಮಾನ್ ಹಾಜಿ ಉಜಿರೋಡಿ, ಎ.ಆರ್ ಸಂಶುದ್ದೀನ್ ಕುಂಬ್ರ ಉಪಸ್ಥಿತರಿದ್ದರು.
ಮರ್ಕಝ್ ಗಲ್ಫ್ ಸಂಚಾಲಕ ಶಂಸುದ್ದೀನ್ ಬೈರಿಕಟ್ಟೆ ವಂದಿಸಿದರು. ಕಾರ್ಯದರ್ಶಿ ರಶೀದ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here