ರಾಮಕುಂಜ: ವಾರ್ಷಿಕ ಜಾತ್ರೆ-ದೈವಗಳ ನೇಮೋತ್ಸವ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಜ.27 ಹಾಗೂ 28ರಂದು ದೈವಗಳ ನೇಮೋತ್ಸವ ನಡೆಯಿತು.

ಜ.27ರಂದು ಸಂಜೆ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಿತು. ಜ.28ರಂದು ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ, ಗುಳಿಗ ದೈವದ ನೇಮ ನಡೆಯಿತು.

ದೇವಸ್ಥಾನದ ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕಿಮಠ, ಪ್ರಧಾನ ಅರ್ಚಕ ಅನಂತ ಉಡುಪ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಸೇರಿದಂತೆ ನೂರಾರು ಮಂದಿ ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here