ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಬೃಹತ್ ಗೃಹ, ವಾಹನ ಸಾಲ ಮೇಳ

0

ಪ್ರಮುಖ ವಾಹನ ಮಾರಾಟ ಸಂಸ್ಥೆಗಳ ವಾಹನಗಳ ಪ್ರದರ್ಶನ – ಬಿಡುಗಡೆ

ಸ್ಪರ್ಧಾತ್ಮಕ ನೆಲೆಯಲ್ಲಿ ಸಾಲ ನೀಡುವ ಯೋಜನೆ – ಎನ್.ಕಿಶೋರ್ ಕೊಳತ್ತಾಯ
ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಬ್ಯಾಂಕ್ ಬದ್ಧ- ಚಂದ್ರಶೇಖರ್ ರಾವ್ ಬಪ್ಪಳಿಗೆ
ಗ್ರಾಹಕರಿಗೆ ಹೊಸ ಯೋಜನೆ ಸೌಲಭ್ಯ ತಿಳಿಸುವ ಉದ್ದೇಶ- ಬಿ ಶೇಖರ್ ಶೆಟ್ಟಿ

ಪುತ್ತೂರು: 114 ವರ್ಷಗಳ ಸಾರ್ಥಕ ಸೇವೆಯಲ್ಲಿರುವ ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಜ.30ರಂದು ಬ್ಯಾಂಕ್ ನ ಆವರಣದಲ್ಲಿ ಬೃಹತ್ ಗೃಹ ಮತ್ತು ವಾಹನ ಸಾಲ ಮೇಳ ನಡೆಯಿತು. ಮೇಳದಲ್ಲಿ ಪ್ರಮುಖ ವಾಹನ ಮಾರಾಟ ಸಂಸ್ಥೆಗಳ ವಾಹನಗಳ ಪ್ರದರ್ಶನಗಳಿದ್ದು, ಸಾಲ ಸೌಲಭ್ಯದಲ್ಲಿ ಕನಿಷ್ಠ ಬಡ್ಡಿದರ, ಗರಿಷ್ಠ ಸಾಲ, ಸರಳ ದಾಖಲೆಪತ್ರ, ತ್ವರಿತ ಮಂಜೂರಾತಿ, ಸುಲಭ ಇಎಂಐ, ಕನಿಷ್ಠ ಸೇವಾ ಶುಲ್ಕ ವಿತರಿಸುವ ಕುರಿತು ಮಾಹಿತಿ ನೀಡಲಾಗುತ್ತಿತ್ತು. ಸಾರ್ವಜನಿಕರು, ಗ್ರಾಹಕರು ಮೇಳಕ್ಕೆ ಬಂದು ಮಾಹಿತಿ ಪಡೆದು ಕೊಂಡರು.
ಬೆಳಿಗ್ಗೆ ಮೇಳವನ್ನು ಉದ್ಘಾಟಿಸಿದ ಬ್ಯಾಂಕ್‌ನ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಆರ್ಥಿಕ ಸುಧಾರಣೆ ಆಗಿದೆ. ಇವತ್ತು ಎಲ್ಲರಿಗೂ ವಾಹನ ಅಗತ್ಯ. ಈ ನಿಟ್ಟಿನಲ್ಲಿ ಬ್ಯಾಂಕ್‌ನಿಂದ ಸ್ಪರ್ಧಾತ್ಮಕ ನೆಲೆಯಲ್ಲಿ ಸಾಲ ನೀಡುತ್ತೇವೆಂಬುದು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಸಾಲ ಮೇಳ ಆಯೋಜಿಸಲಾಗಿದೆ. ಎಲ್ಲರು ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ವಿನಂತಿಸಿದರು.


ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಬ್ಯಾಂಕ್ ಬದ್ಧ:
ಬ್ಯಾಂಕ್‌ನ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ಮಾತನಾಡಿ ಬ್ಯಾಂಕ್ ಅರಂಭದಿಂದಲು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಅದೇ ರೀತಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಬದ್ಧರಾಗಿದ್ದೇವೆ ಎಂದರು.

ಗ್ರಾಹಕರಿಗೆ ಹೊಸ ಯೋಜನೆ ಸೌಲಭ್ಯ ತಿಳಿಸುವ ಉದ್ದೇಶ:
ಸಂಸ್ಥೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿ ಶೇಖರ್ ಶೆಟ್ಟಿಯವರು ಮಾತನಾಡಿ ಸಾರ್ವಜನಿಕರಿಗೆ ಬ್ಯಾಂಕ್ ಮೂಲಕ ಹೊಸ ಹೊಸ ಯೋಜನೆ, ಸೌಲಭ್ಯಗಳನ್ನು ತಿಳಿಸಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದರು. ಮೇಳಕ್ಕೆ ಆಗಮಿಸಿದ ಮಾರುತಿ ಸುಜಿಕಿ, ಟಾಟಾ, ಟೊಯೆಟಾ, ಹುಂಡೈ, ತಿರುಮಲ ಮೋಟಾರ್‍ಸ್ ಕಂಪೆನಿಯಿಂದ ವಾಹನ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ಸಂಸ್ಥೆಯ ಮುಖ್ಯಸ್ಥರನ್ನು ಗೌರವಿಸಲಾಯಿತು. ಬ್ಯಾಂಕ್‌ನ ಹಿರಿಯ ನಿರ್ದೇಶಕ ಎ.ವಿ.ನಾರಾಯಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕ್‌ನ ಉಪಲೆಕ್ಕಾಧಿಕಾರಿ ಚಿದಂಬರ್, ಜ್ಯೋತಿ, ಹಿರಿಯ ಸಹಾಯಕ ಗಿರೀಶ್‌ರಾಜ್ ಅತಿಥಿಗಳನ್ನು ಗೌರವಿಸಿದರು. ಬ್ಯಾಂಕ್‌ನ ಉಪ ಮಹಾಪ್ರಬಂಧಕ ಚೇತನ್ ಉಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್‌ನ ನಿರ್ದೇಶಕರಾದ, ಕಿರಣ್ ರೈ, ಚಂದ್ರಶೇಖರ್ ಗೌಡ, ಮಲ್ಲೇಶ್, ವಿನೋದ್ ಕುಮಾರ್ ಮತ್ತು ಬ್ಯಾಂಕ್‌ನ ಸಿಬ್ಬಂದಿಗಳು ಹಾಗು ಗ್ರಾಹಕರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here