ಗ್ರಾಮೀಣ ಪ್ರದೇಶ ಸರ್ವೆಯಲ್ಲಿ ಫೆ.1ರಂದು “ಕ್ಷೇಮ ಚಿಕಿತ್ಸಾಲಯ” ಶುಭಾರಂಭ

0

ಪುತ್ತೂರು: ಭಾರತದ ಪ್ರತಿ ಹಳ್ಳಿಯೂ ಆರೋಗ್ಯ ಮತ್ತು ವಿದ್ಯೆಯಲ್ಲಿ ಪ್ರಗತಿ ಮತ್ತು ಸ್ವಾವಲಂಬನೆಯತ್ತ ಸಾಗಬೇಕೆಂಬ ಆಶಯದೊಂದಿಗೆ ಫೆ.1ರಂದು ಪುತ್ತೂರು ಹೊರವಲಯದ ಗ್ರಾಮೀಣ ಪ್ರದೇಶ ಸರ್ವೆಯಲ್ಲಿ “ಕ್ಷೇಮ ಚಿಕಿತ್ಸಾಲಯ” ಕಾರ್ಯಾರಂಭಿಸಲಿದೆ. ಮೂಲಭೂತ ತುರ್ತು ಚಿಕಿತ್ಸೆಗೆ ಹಳ್ಳಿಯ ಜನ ದೂರದ ಪಟ್ಟಣವನ್ನು ಅವಲಂಬಿಸುವಂತರಾಗಬಾರದು .ಇಲ್ಲಿ ಮುಖ್ಯವಾಗಿ ರೋಗಿಯ ಆರ್ಥಿಕ ಸಂಪನ್ಮೂಲ ಮತ್ತು ಧಾರಣಾ ಶಕ್ತಿ, ಮತ್ತು  ಸಮಯದ ಉಳಿತಾಯ ಮತ್ತು  ಅವಶ್ಯಕತೆಯ ಲಭ್ಯತೆ ದೊರೆಯುವಂತಾಗಲು ಮತ್ತು ಅಗತ್ಯವುಳ್ಳ ರೋಗಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಚಿಕಿತ್ಸಾಲಯದ ಮೂಲಕ ವೃತ್ತಿ ಜೀವನವನ್ನು ಆರಂಭಿಸುವುದಾಗಿ ಡಾ.ಆದಿತ್ಯ ನಾರಾಯಣ ಭಟ್ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆ, 40% ಮಕ್ಕಳಲ್ಲಿ‌ ಅಪೌಷ್ಟಿಕತೆ ಸಮಸ್ಯೆ, ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವೀಸಸ್ ನಲ್ಲಾಗುವ ಅಡಚಣೆ, ಹೆಚ್ಚುತ್ತಿರುವ ಸಾಂಕ್ರಾಮಿಕವಲ್ಲದ ರೋಗಗಳು, ರೋಗಗಳ ಅಪಾಯಕಾರಿ ಅಂಶಗಳ ಬಗ್ಗೆ ಜ್ಞಾನದ ಕೊರತೆ, ಕಾಯಿಲೆಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡುವ ಆರೋಗ್ಯ ಸೌಲಭ್ಯಗಳ  ಕೊರತೆ, ಗರ್ಭಿಣಿಯರಲ್ಲಿ ಪ್ರಸವಪೂರ್ವ ಆರೈಕೆ ಕೊರತೆಯಿಂದಾಗಿ ಹೆಚ್ಚುತ್ತಿರುವ ಸಮಸ್ಯೆಯನ್ನು ಮನಗಂಡು ಗ್ರಾಮೀಣ ಭಾಗದಲ್ಲಿ “ಕ್ಷೇಮ ಚಿಕಿತ್ಸಾಲಯ” ಆರಂಭಿಸುವುದಾಗಿ ಸಂಸ್ಥೆಯ ವೈದ್ಯ ಡಾ.ಆದಿತ್ಯ ನಾರಾಯಣ ಭಟ್ ತಿಳಿಸಿದ್ದಾರೆ.

ಪುತ್ತೂರು ತಾಲೂಕು ಮುಂಡೂರು ಗ್ರಾಮದ ಹಿಂದಾರು ನಿವಾಸಿ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಮತ್ತು ಸರ್ವೇಶ್ವರಿ ದಂಪತಿಗಳ ಪುತ್ರ ಡಾ.ಆದಿತ್ಯ ನಾರಾಯಣ ಭಟ್, ಸುಳ್ಯದ ಕೆವಿಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿ.ಎ.ಎಂ.ಯಸ್ ಪದವಿಯನ್ನು ಪಡೆದಿದ್ದು, ಸ್ನಾತಕೋತ್ತರ ಪದವಿಗೆ ತಯಾರಿ ನಡೆಸುವುದರೊಂದಿಂಗೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ನೀಡಿಲಿದ್ದಾರೆ. ವಾರದ ದಿನಗಳಲ್ಲಿ ಸಾಯಂಕಾಲ 5.00  ಗಂಟೆಯಿಂದ ರಾತ್ರೆ 9 .00  ರ ತನಕ, ಆದಿತ್ಯವಾರದಂದು ಬೆಳಿಗ್ಗೆ 8 .00  ರಿಂದ 1.00  ಅಪರಾಹ್ನ 3 .00  ರಿಂದ ರಾತ್ರಿ  8.30 ರ ತನಕ  ಚಿಕಿತ್ಸೆಗೆ ಲಭ್ಯರಿರುತ್ತಾರೆ. 

LEAVE A REPLY

Please enter your comment!
Please enter your name here