ನಿಡ್ಪಳ್ಳಿ: ನೇತ್ರಾವತಿ ನೂತನ ಸಂಘ ಉದ್ಘಾಟನೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಕಾರ್ಯಕ್ಷೇತ್ರದಲ್ಲಿ 6 ಸದಸ್ಯರನ್ನೊಳಗೊಂಡ ʼನೇತ್ರಾವತಿʼ ಹೆಸರಿನ ನೂತನ ಸಂಘ ನಿಡ್ಪಳ್ಳಿ ಅಂಗನವಾಡಿ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು. 
ನಿಡ್ಪಳ್ಳಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವಲಯ‌ ಮೇಲ್ವಿಚಾರಕ ಚಂದ್ರಶೇಖರ್ ಯೋಜನೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಜಯಂತಿ.ಕೆ ಮತ್ತು ಅಂಗನವಾಡಿ ಸಹಾಯಕಿ ಜಯಲಕ್ಷ್ಮಿ  ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಶಾಲಿನಿ.ಕೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here