ನಾಳೆ(ಜ.31) : ಆಲಂಕಾರು ದುರ್ಗಾಂಬಾ ಪ್ರೌಢ ಶಾಲಾ ಮುಖ್ಯ ಗುರು ಶ್ರೀಪತಿ ರಾವ್ ಎಚ್ ಸೇವಾ ನಿವೃತ್ತಿ

0

ಆಲಂಕಾರು: ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಪತಿ ರಾವ್ ನಾಳೆ(ಜ.31) ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಶ್ರೀಪತಿ ರಾವ್ ಎಚ್ ರವರು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಐದಂಗೂರಿನಲ್ಲಿ ಶ್ರೀ ಲಕ್ಷ್ಮೀನಾರಾಯಣ ರಾವ್ ಮತ್ತು ಸೀತಮ್ಮ ದಂಪತಿಗಳ ಎರಡನೇ ಮಗನಾಗಿ 1964ರಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಾಜೆ, ಪ್ರೌಢಶಾಲಾ ಶಿಕ್ಷಣವನ್ನು ನವೋದಯ ಪ್ರೌಡಶಾಲೆ ಬೆಟ್ಟಂಪಾಡಿ, ಚಿತ್ರಕಲಾ ತರಬೇತಿಯನ್ನು ಚಿತ್ರಕಲಾ ಮಂದಿರ ಕಟಪಾಡಿ, ಉಡುಪಿ, ಡಿಪ್ಲೋಮಾವನ್ನು ಮಹಾಲಸ ಚಿತ್ರಕಲಾ ಶಾಲೆ ಮಂಗಳೂರಿನಲ್ಲಿ ವಿಧ್ಯಾಭ್ಯಾಸ ಮುಗಿಸಿ 1987ರಲ್ಲಿ ಶ್ರೀ ದುರ್ಗಾಂಬಾ ಪ್ರೌಡ ಶಾಲೆಗೆ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿ ಒಟ್ಟು 37ವರ್ಷ ಸೇವೆ ಸಲ್ಲಿಸಿ 2 ವರ್ಷ 6ತಿಂಗಳು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಜ.31ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಶ್ರೀಯುತರು ಆಲಂಕಾರು ಗ್ರಾಮದ ಬುಡೇರಿಯಾ ಅಕ್ಷತಾ ನಿಲಯದಲ್ಲಿ ಪತ್ನಿ ಅಮಿತಾ ಎಸ್ ರಾವ್, ಮಕ್ಕಳಾದ ಅನುಶ್ರೀ ಎಸ್ ರಾವ್,ಅಂಕಿತ್ ಎಸ್ ರಾವ್ ರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here