ಫೆ.2-4: ಕಡಬ ಕೇಂದ್ರ ಜುಮಾ ಮಸೀದಿಯಲ್ಲಿ ಉರೂಸ್, ಸೌಹಾರ್ದ ಸಮ್ಮೇಳನ

0

ಕಡಬ: ಇಲ್ಲಿನ ಬರ್ಕತುಲ್ ಇಸ್ಲಾಂ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯಲ್ಲಿ ಫೆ. 2 ರಿಂದ 4 ರ ತನಕ 3 ದಿನಗಳ ಉರೂಸ್ ಹಾಗೂ ಕಡಬ ತಾಲೂಕಿನ ವಿವಿಧ ಮಸೀದಿಗಳ ಸಹಕಾರದೊಂದಿಗೆ ಸೌಹಾರ್ದ ಸಮ್ಮೇಳನವು ಜರಗಲಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಅವರು ತಿಳಿಸಿದ್ದಾರೆ.


ಅವರು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಫೆ 2ರಂದು ಮಧ್ಯಾಹ್ನ 3 ಘಂಟೆಗೆ ಜಾವಗಲ್‌ನ ಜಾವಗಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಡಬ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್ ಅವರು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮರ್ದಾಳದ ಸಯ್ಯದ್ ಹಬೀಬುಲ್ಲಾ ತಂಙಳ್ ಆಶೀರ್ವಚನ ನೀಡಲಿದ್ದು, ಅಡ್ಡಗದ್ದೆ ಹನಫಿ ಜುಮಾ ಮಸೀದಿಯ ಇಮಾಮ್ ಹಝ್ರತ್ ಮೌಲಾನಾ ಫಯಾಝುಲ್‌ಖಾದ್ರಿ ಅವರು ಉದ್ಘಾಟನ ಭಾಷಣ ಮಾಡಲಿದ್ದಾರೆ. ಕೇರಳದ ಕುಟ್ಯಾಡಿ ರಾಶಿದ್ ಬುಖಾರಿ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಕಡಬ ಕೇಂದ್ರ ಜುಮಾ ಮಸೀದಿಯ ಖತೀಮ್ ಅಬ್ದುಲ್‌ರಶೀದ್ ಸಹದಿ ಹಾಗೂ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಆದಂ ಕುಂಡೋಳಿ ಉಪಸ್ಥಿತರಿರುತ್ತಾರೆ.

3 ರಂದು ರಾತ್ರಿ 8ರಿಂದ ನಡೆಯುವ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರು ವಹಿಸಲಿದ್ದು, ಕರ್ನಾಟಕ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಡಾ|ಮಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರು ಆಶೀರ್ವಚನ ನೆರವೇರಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್, ಪ್ರಮುಖರಾದ ಕೆ.ಎಂ.ಮುಸ್ತಫಾ, ಹಮಿದ್ ಕುತ್ತಮೊಟ್ಟೆ, ಎಸ್.ಶಂಶುದ್ದೀನ್, ಎಚ್.ಎ.ಆದಂ ಅವರು ಆಗಮಿಸಲಿದ್ದು, ಕೇರಳದ ಲದಲ್ ಹಬೀಬಿ ಬುರ್ದಾ ಇಕ್ವಾಲ್ ಮಲಪ್ಪುರಂ ನೇತೃತ್ವದಲ್ಲಿ ಹಝ್ರತ್ ರಝ ಖಾದಿರಿ ಬಿಜಾಪುರ ಹಾಗೂ ಮಹಮ್ಮದ್ ನಬೀರ್ ರಝ ಬರಕತಿ ಬೆಂಗಳೂರು ತಂಡದ ಸದಸ್ಯರು ಬುರ್ದಾ ಮಜ್ಲಿಸ್ ನಡೆಸಿಕೊಡಲಿದ್ದಾರೆ.

4 ರಂದು ಸಂಜೆ 6.30 ರಿಂದ ಜರಗಲಿರುವ ಸೌಹಾರ್ದ ಸಮ್ಮೇಳನದ ಸಲುವಾಗಿ ಕಡಬದಿಂದ ಕೇಂದ್ರ ಜುಮಾ ಮಸೀದಿ ತನಕ ಮೆರವಣಿಗೆ ನಡೆಯಲಿದೆ. ಕಡಬ ಕೇಂದ್ರ ರಹ್ಮಾನಿಯ ಟೌನ್ ಜುಮಾ ಮಸೀದಿಯ ಖತೀಬ್ ಹಾಜಿ ಇಬ್ರಾಹಿಂ ದಾರಿಮಿ ಅಶೀರ್ವಚನದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಯ್ಯದ್ ಮೀರಾ ಸಾಹೇಬ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಜಮೀರ್ ಅಹ್ಮದ್, ಪ್ರಮುಖರಾದ ಡಾ|ಎ.ಜೆ.ಆಕ್ರಂ ಭಾಷ, ಸಯ್ಯದ್ ಹಮೀದ್ ತಂಙಳ್ ಮರ್ದಾಳ, ಇಕ್ಬಾಲ್ ಎಲಿಮಲೆ, ಡಾ|ಸಯ್ಯದ್‌ನಝೀರ್ ಸಾಹೇಬ್, ಅಬ್ದುಲ್ ಲತೀಫ್ ಹರ್ಲಡ್ಕ, ಜಲೀಲ್ ಬೈತಡ್ಕ ಮುಂತಾದವರು ಆಗಮಿಸಲಿದ್ದಾರೆ. ಕೇರಳದ ಮಶ್‌ಹೂರ್ ಮಲಕ್ಕೋಯ ತಂಙಳ್ ಪ್ರಧಾನ ಭಾಷಣ ಮಾಡಲಿದ್ದು, ಕೇರಳದ ಇಬ್ರಾಹಿಂ ಖಲೀಲುಲ್ ಬುಖಾರಿ ದುವಾಃ ನೆರವೇರಿಸಲಿದ್ದಾರೆ ಎಂದು ಮೀರಾ ಸಾಹೇಬ್ ವಿವರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮಸೀದಿಯ ಮಹಮ್ಮದ್ ಶರೀಫ್ ಕೇಪು, ಉಪಾಧ್ಯಕ್ಷ ಆದಂ ಕುಂಡೋಳಿ, ಕಾರ್ಯದರ್ಶಿ ಫೈಝಲ್ ಎಸ್.ಇ.ಎಸ್., ಕೋಶಾಧಿಕಾರಿ ಇಕ್ಬಾಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here