ಫೆ.3:ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆಯಿಂದ ಬಿರುಮಲೋತ್ಸವ – ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್, ಸಾಂಸ್ಕೃತಿಕ ಕಾರ್ಯಕ್ರಮ-ಉಚಿತ ಪ್ರವೇಶ

0

ಪುತ್ತೂರು: ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಬಿರುಮಲೋತ್ಸವ-2024 ಫೆ.3ರಂದು ಅಪರಾಹ್ನ ಬಿರುಮಲೆಬೆಟ್ಟದಲ್ಲಿ ಜರಗಲಿದೆ. ಕಾರ್ಯಕ್ರಮವು ಸ್ಪರ್ಧಿಗಳಿಗೆ ಉಚಿತ ಪ್ರವೇಶವಾಗಿದೆ.

ಸ್ಪರ್ಧೆಗಳ ವಿವರ:
ಸ್ಥಳದಲ್ಲಿ ಗಾಳಿಪಟ ತಯಾರಿಸಿ ಹಾರಿಸುವುದು, ಮೊದಲೇ ತಯಾರಿಸಿದ ಅಥವಾ ರೆಡಿಮೆಡ್ ಗಾಳಿಪಟ ಹಾರಿಸುವುದು ಅಲ್ಲದೆ ಈ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿರುವುದು,
ಪ್ರೈಮರಿ, ಹೈಸ್ಕೂಲ್, ಕಾಲೇಜು ಮತ್ತು ಮುಕ್ತ ವಿಭಾಗದಲ್ಲಿ ಪ್ರತ್ಯೇಕ ಬಹುಮಾನ ನೀಡಲಾಗುವುದು, ಹಾರಿಸಲಾದ ಗಾಳಿಪಟಗಳಲ್ಲಿ ಆಕರ್ಷಕ ವಿನ್ಯಾಸದ ಮತ್ತು ದೊಡ್ಡ ಗಾತ್ರದ ಗಾಳಿಪಟಕ್ಕೆ ವಿಶೇಷ ಬಹುಮಾನ ಇದೆ, ಅತಿ ಎತ್ತರಕ್ಕೆ ಹಾರಿಸಿದ ಗಾಳಿಪಟಕ್ಕೆ ವಿಶೇಷ ಬಹುಮಾನ ಇದೆ, ಗಾಳಿಪಟ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು , ಗಾಳಿಪಟ ಹಾರಿಸುವ ದಾರಕ್ಕೆ ಗ್ಲಾಸ್ ಚೂರುಗಳನ್ನು ಅಂಟಿಸುವಂತಿಲ್ಲ, ವಿಶೇಷ ಆಕರ್ಷಣೆಯಾಗಿ ಗಾಳಿಪಟ ಮಾರಾಟದ ಮಳಿಗೆ ಇರುತ್ತದೆ.
ಸ್ಪರ್ಧೆಯ ನಿಯಮ/ನಿಬಂಧನೆಗಳು:
ಸಮಯ 15 ರಿಂದ 30 ನಿಮಿಷಗಳು ಗಾಳಿಯನ್ನು ಹೊಂದಿಕೊಂಡು, ನಿಗದಿತ ಸಮಯದಲ್ಲಿ ಉತ್ತಮವಾಗಿ ಹಾರಿಸಿದ ಗಾಳಿಪಟವನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು, ಗಾಳಿಪಟದ ವಿನ್ಯಾಸ, ಸೌಂದರ್ಯ, ಥೀಮ್, ಹಾರಾಟದ ವಿಧಾನ, ಶಿಸ್ತು, ನಿಯಮ ಪಾಲನೆ, ಪ್ರೇಕ್ಷಕರಿಗೆ ಸಿಗುವ ಮನರಂಜನೆ ಮತ್ತು ಗಾಳಿಪಟ ಹಾರಿಸುವವನ ಕೌಶಲ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗುವುದು, ಎತ್ತರಕ್ಕೆ ಪ್ರತ್ಯೇಕ ಸ್ಪರ್ಧೆ ಇರುವುದರಿಂದ ಈ ವಿಭಾಗಗಳಲ್ಲಿ ಎತ್ತರಕ್ಕೆ ಪ್ರಾಮುಖ್ಯತೆ ಇರುವುದಿಲ್ಲ, ನಿಗದಿತ ಸ್ಪರ್ಧಾಕಣದಲ್ಲಿ ಸ್ಪರ್ಧಿಗಳ ಹೊರತಾಗಿ ಇತರರಿಗೆ ಅವಕಾಶ ಇರುವುದಿಲ್ಲ ಮತ್ತು ಇತರರ ಸಹಾಯ ಪಡೆಯುವಂತಿಲ್ಲ, ಸ್ಪರ್ಧಿಗಳು ಸಹಾಯದ ಆವಶ್ಯಕತೆ ಇದ್ದರೆ ಸಂಘಟಕರ ಸಹಾಯ ಅಥವಾ ಸಂಘಟಕರ ಅನುಮತಿ ಪಡೆದು ಇತರರ ಸಹಾಯ ಸಂದರ್ಭಕ್ಕೆ ಮಾತ್ರ ಪಡೆಯತಕ್ಕದ್ದು, ಸಂಘಟಕರ ಅನುಮತಿ ಇಲ್ಲದೇ ಯಾವುದೇ ಸಂದರ್ಭದಲ್ಲೂ ಇತರರ ಸಹಾಯ ಪಡೆಯುವಂತಿಲ್ಲ, ಇತರರು ಸ್ಪರ್ಧಾಕಣದಿಂದ ದೂರದಲ್ಲಿ ಸ್ಪರ್ಧಿಗಳಿಗೆ ತೊಂದರೆಯಾಗದಂತೆ ಗಾಳಿಪಟ ಹಾರಿಸಬಹುದು, ಎತ್ತರ ವಿಭಾಗದ ಸ್ಪರ್ಧೆಯಲ್ಲಿ ನಿಗದಿತ ವಲಯಕ್ಕಿಂತ ಹೊರ ಹೋಗುವ ಗಾಳಿಪಟಗಳನ್ನು ಪರಿಗಣಿಸಲಾಗುವುದಿಲ್ಲ, ಎತ್ತರ ಸ್ಪರ್ಧೆಯಲ್ಲಿ ಮುಗಿದ ನೂಲಿನ ಉದ್ದವನ್ನು ಪರಿಗಣಿಸಲಾಗುವುದಿಲ್ಲ ಕೇವಲ ಲಂಬವಾಗಿ ಎತ್ತರಕ್ಕೆ ಹಾರಿದ ಗಾಳಿಪಟವನ್ನು ಮಾತ್ರ ಪರಿಗಣಿಸಲಾಗುವುದು, ನಿಗದಿತ ವಲಯದಿಂದ ಅಂದರೆ ಗಾಳಿಪಟ ಹಾರಿಸುವ ಸ್ಥಳದಿಂದ 50 ಮೀಟರ್ ತ್ರಿಜ್ಯವನ್ನು(ರೇಡಿಯಾಸ್) ಪರಿಗಣಿಸಲಾಗುವುದು, ಹೊರವಲಯದಲ್ಲಿ ಹಾರಾಡುವ ಗಾಳಿಪಟಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ, ತಂಡ ಸ್ಪರ್ಧೆಯಲ್ಲಿ ಮೊದಲೇ ಹೆಸರು ನೀಡಿದ ತಂಡದ ಸದಸ್ಯರಿಗೆ ಮಾತ್ರ ಆವಕಾಶ ನೀಡಲಾಗುವುದು, ತಮ್ಮ ಗಾಳಿಪಟಗಳಿಗೆ ನೀಡಲಾದ ಗುರುತಿನ ನಂಬರ್ ಗಾಳಿಪಟ ಹಾರಿಸುವವನ ಹತ್ತಿರ ದಾರದ ಬುಡದಲ್ಲಿ ಮತ್ತು ಗಾಳಿಪಟದ ಬಳಿ ಎರಡೂ ಕಡೆಯು ಇರತಕ್ಕದ್ದು, ನಿರ್ಣಾಯಕರಿಗೆ ಅಗತ್ಯ ಕಂಡರೆ ಗಾಳಿಪಟ ಇಳಿಸಿ ತೋರಿಸತಕ್ಕದ್ದು, ನಿಯಮ/ನಿಬಂಧನೆಗಳಿಗೆ ಸರಿಯಾಗಿ ನಡೆದುಕೊಳ್ಳದ ಸ್ಪರ್ಧಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ, ನಿರ್ಣಾಯಕರ ತಿರ್ಮಾನವೇ ಅಂತಿಮವಾಗಿದೆ.
ಸ್ಪರ್ಧಿಗಳು ಸ್ಪರ್ಧೆಯ ಮುಂಚಿತವಾಗಿ ಹಾಜರಾಗಿ ಹೆಸರನ್ನು ಸಂಘಟಕರಲ್ಲಿ ನೋಂದಾಯಿಸ ತಕ್ಕದ್ದು. ಮಾತ್ರವಲ್ಲ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಎ.ಜಗಜ್ಜೀವನ್‌ದಾಸ್ ರೈ, ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಗೌರವ ಉಪಸ್ಥಿತಿಯಾಗಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಪುತ್ತೂರು ಉಪ ವಿಭಾಗದ ಎಸಿಎಫ್ ಸುಬ್ಬಯ್ಯ, ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್‌ರವರು ಭಾಗವಹಿಸಲಿರುವರು.

LEAVE A REPLY

Please enter your comment!
Please enter your name here