ಫೆ.4 : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರ ,ಸಂಪರ್ಕ ರಸ್ತೆ ಉದ್ಘಾಟನೆ-ಫೆ.17ರಿಂದ ಫೆ.24ರವರೆಗೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ

0

ಪುತ್ತೂರು : ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರ ಹಾಗೂ ಅಭಿವೃದ್ದಿಯಾದ ಸಂಪರ್ಕ ಕಲ್ಪಿಸುವ ರಸ್ತೆಯ ಉದ್ಘಾಟನೆ ಕಾರ್ಯಕ್ರಮ ಫೆ.4 ರಂದು ನಡೆಯಲಿದೆ.ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ.17ರಿಂದ ಫೆ.24ರವರೆಗೆ  ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ವಿವಿಧ ಸಿದ್ದತೆಗಳು ನಡೆಯುತ್ತಿದೆ.

ದೇವಸ್ಥಾನದ ಬರುವ ರಸ್ತೆಯಲ್ಲಿ ಮಂಗಳೂರು ಸಾಗರ್ ಕನ್‌ಸ್ಟ್ರಕ್ಷನ್‌ನ ಗಿರಿಧರ ಶೆಟ್ಟಿ ಅವರು ಸೇವಾ ರೂಪದಲ್ಲಿ ನೀಡಿರುವ ನೂತನ  ಮಹಾದ್ವಾರ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಅನುದಾನದಲ್ಲಿ ಅಭಿವೃದ್ಧಿಗೊಂಡ ದೇವಸ್ಥಾನದ ಸಂಪರ್ಕ ರಸ್ತೆಯ ಉದ್ಘಾಟನೆಯು ಫೆ.4ರಂದು ನಡೆಯಲಿದೆ.

ಮಹಾದ್ವಾರವನ್ನು ಮಂಗಳೂರು ಸಾಗರ್ ಇನ್‌ಸ್ಟ್ರಕ್ಷನ್‌ನ ಗಿರಿಧರ್ ಶೆಟ್ಟಿ ಉದ್ಘಾಟಿಸುವರು.ಅಭಿವೃದ್ಧಿಗೊಂಡ ರಸ್ತೆಯನ್ನು ಪುತ್ತೂರು ಶಾಸಕ ಹಾಗೂ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಉದ್ಘಾಟಿಸುವರು.

ಅಧ್ಯಕ್ಷತೆಯನ್ನು ಕೊಳ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಕ್ಕಮ್ಮ ವಹಿಸುವರು.ಅತಿಥಿಗಳಾಗಿ ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.,ಸದಸ್ಯರಾದ ಶುಭಲತಾ ಜೆ.ರೈ ,ಪಿ.ಬಿ.ಸುಂದರ ,ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ವಹಿಸುವರು.

ಬೆಳಿಗ್ಗೆ8 ಗಂಟೆಗೆ ದ್ವಾರದ ಬಳಿ ಪೂಜೆ ನಡೆಯಲಿದೆ.11 ಗಂಟೆಗೆ ರಸ್ತೆ ಹಾಗೂ ಮಹಾದ್ವಾರದ ಉದ್ಘಾಟನೆ, ದೇವಸ್ಥಾನದಲ್ಲಿ ಸಭೆ,ಶ್ರೀ ದೇವರಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ,ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here