ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ರಜತ ಮಹೋತ್ಸವದ ಪ್ರಯುಕ್ತ ತುಳು ನಾಟಕ “ಪುದರ್ ದೀದಾಂಡ್”-ಯಶಸ್ವಿ ಪ್ರದರ್ಶನ

0

ಪುತ್ತೂರು: 1999 ರಲ್ಲಿ ಸ್ಥಾಪನೆಯಾದ ನಗರದ ಹೊರ ವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಇದರ ರಜತ ಮಹೋತ್ಸವದ ಪ್ರಯುಕ್ತ ಚರ್ಚ್ ನ ವಿವಿಧ ಅಭಿವೃದ್ಧಿ ಯೋಜನೆಗಳ ಸಹಾಯಾರ್ಥವಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ತುಳುನಾಡಿನ ಮಾಣಿಕ್ಯ ಅರವಿಂದ ಬೋಳಾರ್, ನವರಾಸ ರಾಜ ಭೋಜರಾಜ್ ವಾಮಂಜೂರು ಪ್ರಮುಖ ಅಭಿನಯದ ತುಳು ಹಾಸ್ಯಮಯ ನಾಟಕ ‘ಪುದರ್ ದೀದಾಂಡ್’ ಫೆ.2 ರಂದು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಸಂಜೆ ಜರಗಿತು.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಚಾ ಪರ್ಕ ಕಲಾವಿದರಿಂದ ಈ ವರ್ಷದ ವಿಭಿನ್ನ ಹಾಸ್ಯಮಯ ನಾಟಕ, ರಾಜ್ಯ ಪ್ರಶಸ್ತಿ ಪುರಸ್ಕೃತ, ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸುವ ‘ಪುದರ್ ದೀದಾಂಡ್’ ನಾಟಕವನ್ನು ಶರ್ಮಿಳಾ ಕಾಪಿಕಾಡ್ ರವರು ನಿರ್ಮಾಣದ ಹೊಣೆ ಹೊತ್ತಿದ್ದರು. ಪ್ರಬುದ್ಧ ರಂಗ ಕಲಾವಿದರಾಗಿ ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಮಾಲೆಮಾರ್, ಪ್ರಕಾಶ್ ಧರ್ಮನಗರ, ಸಚಿನ್, ಸುಜಾತ ಶಕ್ತಿನಗರ, ಧೃತಿ ಸಾಯಿ, ಪ್ರಸನ್ನ ಬೋಳಾರ್, ಪವನ್ ಕುಮಾರ್ ರವರು ಅಭಿನಯಿಸಿದ್ದು ಕಲಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯೋಜನೆಗಳು ಸಂಪೂರ್ಣವಾಗಲಿ, ಯೇಸುಕ್ರಿಸ್ತರ ಆಶೀರ್ವಾದವಿರಲಿ-ವಂ|ಲಾರೆನ್ಸ್ ಮಸ್ಕರೇನ್ಹಸ್:
ನಾಟಕದ ಮುನ್ನ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಚರ್ಚ್ ಸ್ಥಾಪನೆಯಾಗಿ 25 ವರ್ಷ ಕಳೆದು ಇದೀಗ ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ. ಈ ಬೆಳ್ಳಿ ಹಬ್ಬದ ಪ್ರಯುಕ್ತ ಚರ್ಚ್ ಬಾಂಧವರು ಕೆಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಈ ಎಲ್ಲಾ ಯೋಜನೆಗಳಿಗೆ ಚರ್ಚ್ ಬಾಂಧವರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ, ಮಾತ್ರವಲ್ಲ ಯೋಜನೆಗಳು ಸಂಪೂರ್ಣವಾಗಲಿ, ಯೇಸುಕ್ರಿಸ್ತರ ಆಶೀರ್ವಾದ ಎಲ್ಲರಿಗೂ ಇರಲಿ ಎಂದರು.

ನನ್ನನ್ನು ಸನ್ಮಾನಿಸಿದ್ದು ನನಗೆ ವಿಶೇಷ ಟಾನಿಕ್ ನೀಡಿದೆ-ಡಾ|ದೇವದಾಸ್ ಕಾಪಿಕಾಡ್:
ಪುದರ್ ದೀದಾಂಡ್ ನಾಟಕದ ನಿರ್ದೇಶಕ, ನಟ ಡಾ.ದೇವದಾಸ್ ಕಾಪಿಕಾಡ್ ಮಾತನಾಡಿ, ತುಳು ರಂಗಭೂಮಿಗೆ ನಾಟಕಾಭಿಮಾನಿಗಳು ಬಹಳಷ್ಟು ಪ್ರೋತ್ಸಾಹವನ್ನು ನೀಡುವ ಮೂಲಕ ಕಲಾವಿದರನ್ನು ಹರಸಿದ್ದಾರೆ. ಈ ಪ್ರೋತ್ಸಾಹ ಸದಾ ಇರಲಿ ಎಂದು ಹೇಳುತ್ತಾ ಮುಂದಿನ ದಿನಗಳಲ್ಲಿ “ಏರ್ಲಾ ಗ್ಯಾರಂಟಿ ಅತ್ತ್” ಎಂಬ ತುಳು ನಾಟಕ ಹಾಗೂ “ಪುರುಷೋತ್ತಮನ ಪ್ರಸಂಗ” ಕನ್ನಡ ಚಲನಚಿತ್ರಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹವಿರಲಿ. ಇಂದಿಲ್ಲಿ ನನ್ನನ್ನು ಸನ್ಮಾನಿಸಿದ್ದು ನನಗೆ ವಿಶೇಷ ಟಾನಿಕ್ ನೀಡಿದೆ ಎಂದರು.


ಮರೀಲು ಚರ್ಚ್ ಪ್ರಧಾನ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಡಾ|ಎಡ್ವಿನ್ ಡಿ’ಸೋಜ ವಂದಿಸಿದರು. ಚರ್ಚ್ ಸೇವಾದರ್ಶಿ(ದಿಯಾಕೊನ್), ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚರ್ಚ್ ಪುಟಾಣಿಗಳಿಂದ ಸ್ವಾಗತ ಪ್ರಾರ್ಥನಾ ನೃತ್ಯ ನೆರವೇರಿತು.ಚರ್ಚ್ ನ ಶರಲ್ ಸೆಲ್ಮಾ ವೇಗಸ್, ಕ್ಲೇರಾ ಪಾಯಿಸ್, ಸರಿತಾ ರೊಡ್ರಿಗಸ್ ದಾನಿಗಳ ಪಟ್ಟಿ ವಾಚಿಸಿದರು.ಕಾರ್ಮಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು

ದೇವದಾಸ್ ಕಾಪಿಕಾಡ್ ಸಹಿತ ನಾಟಕದ ಮಹಾ ಪೋಷಕರಿಗೆ ಸನ್ಮಾನ..
ಪುದರ್ ದೀದಾಂಡ್ ನಾಟಕದ ನಿರ್ದೇಶಕ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್, ನಾಟಕದ ಪೋಷಕರು ಆಗಿರುವ ದರ್ಬೆ ರೊಡ್ರಿಗಸ್ ಚಿಕನ್ ಸೆಂಟರ್ ಮಾಲಕರಾಗಿರುವ ಲ್ಯಾನ್ಸಿ ರೊಡ್ರಿಗಸ್, ನಾಟಕದ ಧ್ವನಿವರ್ಧಕಗಳ ಜೊತೆಗೆ ಬೆಳಕನ್ನು ನೀಡಿ ಸಹಕರಿಸಿದ ಹೆರಾಲ್ಡ್ ಕುಟಿನ್ಹಾ ಮರೀಲುರವರ ಸಹೋದರಿ ಮೋಲಿ ಕುಟಿನ್ಹಾ, ನಾಟಕದ ಪ್ರಚಾರಕ್ಕೆ ಸಂಬಂಧಿಸಿದಂತೆ ಸಹಕರಿಸಿದ ಸಂತೋಷ್ ಡಿ’ಅಲ್ಮೇಡ, ಆಸನದ ವ್ಯವಸ್ಥೆಯ ಪೋಷಕರಾದ ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್ ಮಾಲಕರಾದ ಗಿಲ್ಬರ್ಟ್ ಡಿ’ಸೋಜರವರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಮ್ಯಾನೇಜರ್ ಆಗಿರುವ ಸುನೀಲ್ ಮಸ್ಕರೇನ್ಹಸ್ ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಅಭಿನಂದನೆ:
ನಾಟಕದ ಗೌರವ ಪೋಷಕರಾಗಿ ಸಹಕರಿಸಿದ ದಾನಿಗಳನ್ನು, ವಿವಿಧ ಚರ್ಚ್ ಗಳ ಧರ್ಮಗುರುಗಳನ್ನು ಪಾಲನಾ ಸಮಿತಿಯ ಉಪಾಧ್ಯಕ್ಷರುಗಳನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here