ನೆಲ್ಯಾಡಿ-ಕೌಕ್ರಾಡಿ ವರ್ತಕ/ಕೈಗಾರಿಕಾ ಸಂಘ ಪದಗ್ರಹಣ

0

ನೆಲ್ಯಾಡಿ: ವರ್ತಕ ಮತ್ತು ಕೈಗಾರಿಕಾ ಸಂಘ ನೆಲ್ಯಾಡಿ- ಕೌಕ್ರಾಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.31ರಂದು ನೆಲ್ಯಾಡಿ ಸಂತಚಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಸಂತಚಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ವಾಮನ ಪೈ ಅವರು ಮಾತನಾಡಿ, ವ್ಯವಹಾರದಲ್ಲಿ ಪ್ರಾಮಾಣಿಕತೆ, ಜನರೊಂದಿಗೆ ಸ್ಪಂದನೆ ಹಾಗೂ ತೆರಿಗೆ ಪಾವತಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಸಿದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರ ಜೆ ಬಂಟ್ರಿಯಾಲ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾದ ಸತೀಶ್ ಕೆ.ಎಸ್. ಕಾರ್ಯದರ್ಶಿ ಪ್ರಶಾಂತ್ ಸಿ.ಎಚ್. ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ರಫೀಕ್ ಸೀಗಲ್ ಅವರನ್ನು ಸನ್ಮಾನಿಸಲಾಯಿತು.ಉಷಾ ಅಂಚನ್ ಸ್ವಾಗತಿಸಿದರು. ಗಣೇಶ್ ಕೆ ರಶ್ಮಿ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ನಾಝಿಂ ಸಾಹೇಬ್ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ಸಂಘದ ಕಾನೂನು ಸಲಹೆಗಾರ, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ವಂದಿಸಿದರು.


ಪದಸ್ವೀಕಾರ:
ನೂತನ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಕಾರ್ಯದರ್ಶಿಯಾಗಿ ಪ್ರಶಾಂತ್ ಸಿ.ಎಚ್., ಕೋಶಾಧಿಕಾರಿಯಾಗಿ ವಿ.ಜೆ.ಜೋಸೆಫ್, ಉಪಾಧ್ಯಕ್ಷರಾದ ನಾಝಿಂ ಸಾಹೇಬ್, ಗಣೇಶ್ ರಶ್ಮಿ, ಜೊತೆ ಕಾರ್ಯದರ್ಶಿ ರವಿಕುಮಾರ್ ಸುರಕ್ಷಾ, ಸದಸ್ಯರಾದ ರಾಜ ಎಂ., ಅಕ್ಬರ್ ಸಿದ್ದಿಕ್, ರಘುಲಾಲ್, ಅಬ್ದುಲ್ ಖಾದರ್, ಅಬ್ದುಲ್ ಲತೀಫ್, ಅಬ್ದುಲ್ ಜಬ್ಬಾರ್, ದಿನೇಶ್, ಜಿನೋಯ್, ಶಾಂತರಾಮ್ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.

LEAVE A REPLY

Please enter your comment!
Please enter your name here