ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ-ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಗೆ ಆಮಂತ್ರಣ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯ ರಜತ ಸಂಭ್ರಮ ಆಚರಣೆಯನ್ನು ಫೆ.11 ರ ಆದಿತ್ಯವಾರ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪರವಾಗಿ ವಿಧಾನ ಸಭೆಯ ಅಧ್ಯಕ್ಷರು ಮಂಗಳೂರು ವಿಧಾನಸಭಾ ಸದಸ್ಯರು ಆಗಿರುವ ಸನ್ಮಾನ್ಯ ಯು ಟಿ ಖಾದರ್ ಅವರನ್ನು ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿಕಾರ್ ಜನೆರಲ್ ಅತೀ ವಂದನೀಯ ಜೋಸ್ ವಲಿಯ ಪರಂಬಿಲ್ ಕೆಎಸ್ಎಂಸಿಎ ಕೇಂದ್ರ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸೇಬಾಷ್ಟಿಯನ್ ಪಿ ಸಿ. ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಧರ್ಮ ಗುರುಗಳು ಹಾಗೂ ಕೆಎಸ್ಎಂಸಿಎ ನಿರ್ದೇಶಕ ವಂದನೀಯ ಫಾ. ಶಾಜಿ ಮ್ಯಾಥ್ಯೂ, ಫಾ. ಜೋಬಿ ಪುಲ್ಲಾಟ್ ಜ್ಞಾನ ನಿಲಯ ಬೆಳ್ತಂಗಡಿ, ನೆಲ್ಯಾಡಿ ವರ್ತಕ ಸಂಘದ ಕೋಶಾಧಿಕಾರಿ ಹಾಗೂ ಸಂತ ಅಲ್ಫೋನ್ಸ ಚರ್ಚ್ ನ ಮಾಜಿ ಟ್ರಸ್ಟಿ ಜೋಸೆಫ್ ವಿ ಜೆ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here