ಪುತ್ತೂರು ಘಟಕದ ಹಿರಿಯ ಗೃಹರಕ್ಷಕ ಜಗನ್ನಾಥ್‌ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

0

ಪುತ್ತೂರು: ಪುತ್ತೂರು ಘಟಕದ ಹಿರಿಯ ಗೃಹರಕ್ಷಕ ಸೆಕ್ಷನ್ ಲೀಡರ್ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿಯಾಗಿರುವ ಜಗನ್ನಾಥ ಪಿ. ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|ಮುರಲೀ ಮೋಹನ್ ಚೂಂತಾರು ಶಿ-ರಸ್ಸು ಮಾಡಿರುವ ಮೇರೆಗೆ ಜಗನ್ನಾಥ ಅವರನ್ನು ಸರ್ಕಾರ ಗುರುತಿಸಿ ೨೦೨೩ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಘೋಷಣೆ ಮಾಡಿದೆ. ಪುತ್ತೂರು ಘಟಕದ ಹಿರಿಯ ಗೃಹರಕ್ಷಕರಾಗಿರುವ ಜಗನ್ನಾಥ ಪಿ., ಸೆಕ್ಷನ್ ಲೀಡರ್ ೨೦೦೦ನೇ ಇಸವಿಯ ಎ.೧ರಂದು ಇಲಾಖೆಗೆ ಸೇರಿ ಸುಮಾರು ೨೪ ವರ್ಷಗಳ ಕಾಲ ನಿಷ್ಟಾವಂತ ಸೇವೆಯನ್ನು ಸಲ್ಲಿಸಿರುತ್ತಾರೆ.

ಗ್ರಾ.ಪಂ., ತಾ.ಪಂ .ಜಿ.ಪಂ., ವಿಧಾನಸಭೆ, ಲೋಕಸಭಾ ಚುನಾವಣೆ, ಕೇರಳ ಹಾಗೂ ತಮಿಳುನಾಡು ಚುನಾವಣಾ ಕರ್ತವ್ಯ, ಮಧ್ಯಪ್ರದೇಶ ಚುನಾವಣಾ ಕರ್ತವ್ಯ ನಿರ್ವಹಿಸಿರುವ ಇವರು ಧರ್ಮಸ್ಥಳ ಮಹಾಮಸ್ತಕಾಭಿಷೇಕ ಸಂದರ್ಭವೂ ಕರ್ತವ್ಯ ನಿರ್ವಹಿಸಿರುತ್ತಾರೆ,ಇತರೆ ಕಾನೂನು ಸುವ್ಯವಸ್ಥೆ ಕರ್ತವ್ಯ, ಟ್ರಾಫಿಕ್ ವಾರ್ಡನ್ ಮತ್ತು ಬಂದೋಬಸ್ತ್ ಮತ್ತು ಪ್ರಕೃತಿ ವಿಕೋಪ ಸಂದರ್ಭದಲ್ಲಿಯೂ ಕರ್ತವ್ಯವನ್ನು ನಿರ್ವಹಿಸಿರುವ ಇವರ ಸಾಮಾಜಿಕ ಕಳಕಳಿಯ ಸೇವಾಮನೋಭಾವ ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕರಿಂದಲೂ ಪ್ರಶಂಸನೆ ವ್ಯಕ್ತವಾಗಿದೆ.ಅಲ್ಲದೇ,ಸಾಮಾಜಿಕ ಕಾರ್ಯಕ್ರಮಗಳಾದ ಸ್ವಚ್ಚತಾ ಅಭಿಯಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿ ಶ್ರಮದಾನ, ಪರಿಸರ ಸಂರಕ್ಷಣೆ ಸಲುವಾಗಿ ಪ್ರತಿವರ್ಷ ಗಿಡನೆಡುವ ವನಮಹೋತ್ಸವ ಕಾರ್ಯಕ್ರಮಗಳನ್ನು ಕೂಡ ಪುತ್ತೂರು ಘಟಕದಲ್ಲಿ ನಡೆಸಿಕೊಂಡು ಬಂದಿರುವ ಇವರು ಇತರ ಗೃಹರಕ್ಷಕರಿಗೆ ಮಾದರಿ ಎಂದು ಡಾ.ಮರಲೀಮೋಹನ ಚೂಂತಾರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

20 ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿ:

ಮೂಲತಃ ಪಂಜದ ಬಾಬ್ಲುಬೆಟ್ಟು ನಿವಾಸಿಯಾಗಿರುವ ಪಿ.ಜಗನ್ನಾಥ ಅವರು ಕಳೆದ ೨೦ ವರ್ಷಗಳಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಪುತ್ತೂರು ದೇವಳದ ಬಳಿಯ ಕಂಬಳಕೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here