ಪುತ್ತೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆ ಪ್ರಯುಕ್ತ ದ.ಕ ಜಿಲ್ಲಾ ಮಟ್ಟದ ದೈ. ಶಿಕ್ಷಣ ಶಿಕ್ಷಕರ ಕ್ರಿಡಾಕೂಟವು ಫೆ.3ರಂದು ಎಸ್ ಡಿ ಎಂ ಕ್ರೀಡಾಂಗಣ ಉಜಿರೆಯಲ್ಲಿ ನಡೆಯಿತು.
ಪುತ್ತೂರು ತಾಲೂಕಿನಿಂದ 35 ಕ್ರೀಡಾ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದು ವಾಲಿಬಾಲ್ ನಲ್ಲಿ ಪುರುಷರ ವಿಭಾಗ ತೃತೀಯ, ಮಹಿಳೆಯರ ವಿಭಾಗದ ತ್ರೋಬಾಲ್ ಪ್ರಥಮ, ವಾಲಿಬಾಲ್ ನಲ್ಲಿ ದ್ವಿತೀಯ, ಹಗ್ಗಜಗ್ಗಾಟ ದ್ವಿತೀಯ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಬಲ್ನಾಡು ಮೊರಾರ್ಜಿ ಶಾಲೆಯ ಶಿಕ್ಷಕ ಸದಾಶಿವ 400ಮೀ ಓಟದಲ್ಲಿ ಪ್ರಥಮ, ಪಾಪೆಮಜಲು ಶಾಲೆಯ ಪ್ರವೀಣ ರೈ ಗುಂಡು ಎಸೆತದಲ್ಲಿ ಪ್ರಥಮ, ಬೆಟ್ಟಂಪಾಡಿ ಶಾಲೆಯ ಚಂದ್ರಕಲಾ ದ್ವಿತೀಯ, ಉಪ್ಪಿನಂಗಡಿ ಶಾಲೆಯ ಎಲಿಜಬೆತ್ ಉದ್ದಜಿಗಿತದಲ್ಲಿ ದ್ವಿತಿಯ, ವಿಕ್ಟರ್ಸ್ ನ ಪೂರ್ಣಿಮಾ ಗುಂಡು ಎಸೆತದಲ್ಲಿ ಪ್ರಥಮ, ಪ್ರಿಯದರ್ಶೀನಿಯ ಮಮತಾ ಗುಂಡು ಎಸೆತದಲ್ಲಿ ತೃತಿಯಾ, ಇಂದ್ರಪ್ರಸ್ಥ ಶಾಲೆಯ ವಿದ್ಯಾ 400ಮೀ ದ್ವಿತೀಯ, ಗಜಾನನ ಶಾಲೆಯ ಸೌಮ್ಯ 100ಮೀ ಓಟದಲ್ಲಿ ತೃತೀಯ, ಉದ್ದಜಿಗಿತದಲ್ಲಿ ಪ್ರಥಮ, ಶ್ರದ್ದಾ ಶೆಟ್ಟಿ 400ಮೀ,100ಮೀ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಪುತ್ತೂರು ತಾಲೂಕು ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಮತ್ತು ಪರಿವೀಕ್ಷಾಣಾಧಿಕಾರಿ ಸುಂದರಗೌಡ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಮೋನಪ್ಪ ಪಟ್ಟೆ, ಅಧ್ಯಕ್ಷ ಸೀತರಾಮ ಮಿತ್ತಡ್ಕ, ಕಾರ್ಯದರ್ಶಿ ದಾಮೋದರ ಕಜೆ, ಕೋಶಾಧಿಕಾರಿ ಸುಧೀರ್ ಪಾಣಾಜೆ, ಗ್ರೇಡ್ 2 ಸಂಘದ ಅಧ್ಯಕ್ಷ ಸುಧಾಕರ್ ಪಾಣಾಜೆ, ಸಂಘದ ಪದಾಧಿಕಾರಿಗಳು, ಕ್ರೀಡಾಪಟುಗಳು, ಶಿಕ್ಷಕರು, ಭಾಗವಹಿಸಿದ್ದರು.