ಕಳೆದ 2 ತಿಂಗಳ ಗೌರವಧನವನ್ನು ಫೆ.10ರೊಳಗೆ ಪಾವತಿ ಮಾಡದಿದ್ದಲ್ಲಿ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ

0

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸಂಘದ ಮಾಸಿಕ ಸಭೆಯಲ್ಲಿ ನಿರ್ಧಾರ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷೆ ಕಮಲ ಮಾವಿನಕಟ್ಟೆ ರವರ ಅಧ್ಯಕ್ಷತೆಯಲ್ಲಿ ಫೆ.3ರಂದು ನಡೆಯಿತು.
ಕಳೆದ 2 ತಿಂಗಳಿನಿಂದ ಅಂಗನವಾಡಿ ಕಾಯಕರ್ತೆಯರಿಗೆ ಗೌರವಧನ ಪಾವತಿ ಆಗದೆ ಇದ್ದು ಫೆಬ್ರವರಿ ತಿಂಗಳ 10 ತಾರೀಕಿನೊಳಗೆ ಗೌರವಧನ ಪಾವತಿ ಆಗದಿದ್ದಲ್ಲಿ ಇಲಾಖೆಯ ಗಮನಕ್ಕೆ ತಂದು ಸಿ.ಡಿ.ಪಿಒ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಲಾಖೆಯಿಂದ 4 ವರ್ಷಗಳ ಹಿಂದೆ ನೀಡಿರುವ ಮೊಬೈಲ್‌ಗಳು ಹಾಳಾಗಿದ್ದು ರೀಚಾರ್ಜ್ ಮುಗಿದಿದ್ದು, ಇಲಾಖಾ ಸಿಮ್‌ಗಳು ನಿಷ್ಕ್ರಿಯಗೊಂಡಿದೆ. ಫೆಬ್ರವರಿ ತಿಂಗಳ 1ನೇ ತಾರೀಕಿಗೆ ರೂ.1000 ನಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿ ನಮ್ಮ ವೈಯಕ್ತಿಕ ಮೊಬೈಲ್‌ಗಳಲ್ಲಿ ಇಲಾಖೆಯ ಪೋಷಣ್ ಪ್ರೇಕರ್ ಚಿಠಿಠಿ ನಲ್ಲಿ ಇಲಾಖೆಯ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಲಾಖೆಯಿಂದ ಹೊಸ ಮೊಬೈಲ್ ಕೊಡುವವರೆಗೆ ನಮ್ಮ ವೈಯಕ್ತಿಕ ಮೊಬೈಲ್‌ಗಳಲ್ಲಿ ಇಲಾಖೆಯ ಕೆಲಸಗಳನ್ನು ಮಾಡುವುದಿಲ್ಲವೆಂದು ನಿರ್ಣಯಿಸಲಾಯಿತು.
ಪುತ್ತೂರಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆ ಖಾಲಿ ಇದ್ದು ಅತೀ ಶೀಘ್ರವಾಗಿ ಪುತ್ತೂರಿಗೆ ಖಾಯಂ ಸಿಡಿಪಿಒರವರನ್ನು ನೇಮಕ ಮಾಡಬೇಕೆಂದು ಇಲಾಖಾ ನಿರ್ದೇಶಕರಿಗೆ ಮನವಿ ನೀಡುವುದೆಂದು ನಿರ್ಣಯಿಸಲಾಯಿತು.
ಮಾ.3ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡುವುದೆಂದು ತೀರ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷೆ ತಾರಾ ಬಲ್ಲಾಳ್, ಮಾಜಿ ಜಿಲ್ಲಾಧ್ಯಕ್ಷೆ ಅರುಣ ಬೀರಿಗ, ನಿಕಟ ಪೂರ್ವ ಅಧ್ಯಕ್ಷೆ ಮಲ್ಲಿಕಾ ಎಸ್ ಆಳ್ವ, ಮಾಜಿ ಅಧ್ಯಕ್ಷರುಗಳಾದ ಶ್ಯಾಮಲಾ ಪಾಣಾಜೆ, ಮೀನಾಕ್ಷಿ ಉಪ್ಪಿನಂಗಡಿ, ಕವಿತಾ ಜಯನ್ ಶಿರಾಡಿ, ಗುಣವತಿ ಕಡಬ, ಉಪಾಧ್ಯಕ್ಷೆ ಸಂಧ್ಯಾ ಬೀರಿಗ, ಮಾಜಿ ಕಾರ್ಯದರ್ಶಿಗಳು, ವಲಯ ಪ್ರತಿನಿಧಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಷ್ಪ ಲತಾ ಕೊಳ್ತಿಗೆ ಸ್ವಾಗತಿಸಿ ಖಜಾಂಜಿ ಶೈಲಜಾ ಈಶ್ವರಮಂಗಲ ವಂದಿಸಿದರು.

LEAVE A REPLY

Please enter your comment!
Please enter your name here