ಪುತ್ತೂರು: ಗ್ರಾಮ ಪಂಚಾಯತ್ ನರಿಮೊಗರು ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಪುತ್ತೂರು, ಇವುಗಳ ಜಂಟಿ ಆಶ್ರಯದಲ್ಲಿ ಸುಮಾರು 15 ದಿನಗಳವರೆಗೆ ನಡೆಯಲಿರುವ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರ ಇದರ ಉದ್ಘಾಟನಾ ಕಾರ್ಯಕ್ರಮ ಫೆ.7ರಂದು ಪಂಚಾಯತ್ ಸಭಾಂಗಣದಲ್ಲಿ ನೆರವೇರಿತು.
ಶಿಬಿರದ ಉದ್ಘಾಟನೆಯನ್ನು ನರಿಮೊಗರು ಪಂಚಾಯತ್ ಅಧ್ಯಕ್ಷೆ ಹರಿಣಿ ಪಂಜಳ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ, ಶಿಬಿರದ ಯಶಸ್ವಿಗೆ ಶುಭ ಹಾರೈಸಿದರು.
ನೆಮ್ಮದಿ ವೆಲ್‌ನೆಸ್ ಸೆಂಟರ್ ನ ಮುಖ್ಯಸ್ಥರಾದ ಕೆ.ಪ್ರಭಾಕರ ಸಾಲ್ಯಾನ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಎಂ ಇಂದಿರಾನಗರ ಹಾಗೂ ಮಾಜಿ ಉಪಾಧ್ಯಕ್ಷ ಸುಧಾಕರ್ ಕುಲಾಲ್ ಮತ್ತು ಪಂಚಾಯತ್ ಕಾರ್ಯದರ್ಶಿ ಶೇಖ್ ಖಲಂದರ್ ಆಲಿ ವೇದಿಕೆಯಲ್ಲಿ ಹಾಜರಿದ್ದರು.
ಬಳಿಕ ಥೆರಪಿಯೂ ಪ್ರಾರಂಭಗೊಂಡಿತು ಮತ್ತು ಹಲವಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.