ಕಾವು: ಭಾರತೀಯ ಸೇನೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವೆಯಿಂದ ನಿವೃತ್ತಿಗೊಂಡ ಬಡಗನ್ನೂರು ಗ್ರಾಮದ ಪಟ್ಟೆ ವಿದ್ಯಾಧರ್ ಎನ್ ಇವರಿಗೆ ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘ ವತಿಯಿಂದ ಫೆ.4ರಂದು ಪಟ್ಟೆಯಲ್ಲಿ ನಡೆದ ವಲಯ ಮಟ್ಟದ ಯುವ ಕ್ರೀಡಾ ಸಂಗಮ- 2೦24 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪೂರ್ವ ಅಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೆಟ್ಟಿ,ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ, ನಿಡ್ಪಳ್ಳಿ ಗ್ರಾಮ ಸಮಿತಿ ಗೌರವಾಧ್ಯಕ್ಷರಾದ ನಾಗೇಶ್ ಗೌಡ ಪುಳಿತ್ತಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖಾ ಸಲಹಾ ಸಮಿತಿ ಸದಸ್ಯ ರಾಮಣ್ಣ ಗೌಡ ಬಸವಹಿತ್ಲು,ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ ಉಪಾಧ್ಯಕ್ಷ ನವೀನ್ ಕುಕ್ಕುಡೆಲು, ಶ್ರೀನಿವಾಸ ಗೌಡ ಕನ್ನಯ,ಗಿರಿಯಪ್ಪ ಗೌಡ ಅಲಂತ್ತಡ್ಕ, ದಿವ್ಯಪ್ರಸಾದ್ ಎ ಎಂ,ಪ್ರಭಾಕರ ಗೌಡ ಕನ್ನಯ, ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಅಧ್ಯಕ್ಷ ಜಗ್ಗನಾಥ ಗೌಡ ಪಟ್ಟೆ,ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು,ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ, ಉಪಾಧ್ಯಕ್ಷ ಅನಿಲ್ ಕುಮಾರ್ ಕನ್ನಡ್ಕ,ಜೊತೆ ಕಾರ್ಯದರ್ಶಿ ಶರತ್ ಗೌಡ ಪುಳಿತ್ತಡಿ,ಕೋಶಾಧಿಕಾರಿ ಆಶೀರ್ವಾದ್ ಹೊಸಮನೆ,ಸಾಂಸ್ಕತಿಕ ಕಾರ್ಯದರ್ಶಿ ಪ್ರೇಮಾನಂದ ಮೂಡಿಪಿನಡ್ಕ, ಕ್ರೀಡಾ ಕಾರ್ಯದರ್ಶಿ ಆಶ್ವಿತ್ ಮಾಡ್ಯಲಮಜಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.