ಪುತ್ತೂರು: ಯೋಗನಿದ್ರಾಸನ ಭಂಗಿಯಲ್ಲಿ ಸತತವಾಗಿ 18 ನಿಮಿಷ 56 ಸೆಕೆಂಡುಗಳ ಕಾಲ ಇದ್ದು ಹಿಂದೆ ಇದ್ದ ೬ ನಿಮಿಷದ ದಾಖಲೆಯನ್ನು ಮುರಿದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಉಪ್ಪಿನಂಗಡಿಯ ಅದಿತಿ ಆರ್.ರೈಯವರು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ಆಂಗ್ಲಮಾಧ್ಯಮ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಉಪ್ಪಿನಂಗಡಿ ರಾಮನಗರ ಉದಯಗಿರಿ ನಿವಾಸಿ ರಾಮಣ್ಣ ರೈ ಹಾಗೂ ಉಮಾವತಿ ಕೆ.ದಂಪತಿಯ ಪುತ್ರಿ.