ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ (ಆರ್.ಐ.ಸಿ.) ಇದರ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ ‘ನೂರೇ ಅಜ್ಮೀರ್’ ಕಾರ್ಯಕ್ರಮವು ಫೆ.10 ರಂದು ರೆಂಜಲಾಡಿ ಖ್ವಾಜಾ ನಗರದಲ್ಲಿ ಜರಗಲಿದೆ ಎಂದು ದಾರಿಮೀ ಉಲಮಾ ಒಕ್ಕೂಟ ಕರ್ನಾಟಕ ಇದರ ಅಧ್ಯಕ್ಷ ಎಸ್.ಬಿ ಮುಹಮ್ಮದ್ ದಾರಿಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಡುವಿಲ್ಲದೆ ಒತ್ತಡಗಳೊಂದಿಗೆ ಬದುಕು ಸಾಗಿಸುತ್ತಿರುವ ಜನರು ಮನಃಶಾಂತಿ ಹಾಗೂ ಸಮಾಧಾನದ ಹಾದಿಯನ್ನು ಹುಡುಕಾಡುತ್ತಿರುವ ಈ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಶಾಂತಿ, ಸಮಾಧಾನ ಹಾಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವ ವಿಶ್ವಾಸಿಗಳ ಸಾಂತ್ವನದ ಭರವಸೆಯ ಬೆಳಕು ಹಾಗೂ ವಿಶೇಷ ಆಧ್ಯಾತ್ಮಿಕತೆಯ ಚೈತನ್ಯವನ್ನು ನೀಡುವ “ನೂರೇ ಅಜ್ಮೀರ್” ಆಧ್ಯಾತ್ಮಿಕ ಸಂಗಮವು ಇಂದು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.
ಕೇರಳದ ಖ್ಯಾತ ವಿದ್ವಾಂಸ, ವಾಗ್ನಿ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರಿಂದ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ ಅವರ ನೇತೃತ್ವದ ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ವತಿಯಿಂದ ಫೆ.10 ರಂದು ಸಂಜೆ ಗಂಟೆ 7 ರಿಂದ ಆರಂಭವಾಗುವ ಈ ”ನೂರೇ ಅಜ್ಮೀರ್” ಆಧ್ಯಾತ್ಮಿಕ ಸಂಗಮದಲ್ಲಿ ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್, ಎನ್.ಪಿ.ಯಂ.ಜೈನುಲ್ ಆಬಿದೀನ್ ತಂಙಲ್ ಕುನ್ನುಂಗೈ, ಸಯ್ಯದ್ ಸಫ್ಘಾನ್ ತಂಙಲ್ ಎಜ್ಮಲ , ಸಯ್ಯದ್ ಅಹ್ಮದ್ ಪೂಕೋಯ ತಂಙ ಪುತ್ತೂರು, ಸಯ್ಯದ್ ಅಲವಿ ತಂಙಲ್ ವಾಲೆಮುಂಡೋವು, ಮಹ್ಮೂದುಲ್ ಫೈಝಿ ವಾಲೆಮುಂಡೋವು ಮೊದಲಾದ ಹಲವಾರು ಧಾರ್ಮಿಕ ಉಲಮಾ, ಸಾದಾತ್ ಗಳು, ಹಾಗೂ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಮೊದಲಾದ ಹಲವಾರು ಸಾಮಾಜಿಕ ಗಣ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ನಾಯಕರು ಭಾಗವಹಿಸುವರು.
ಈ ಆಧ್ಯಾತ್ಮಿಕ ಸಂಗಮದ ಪ್ರಯುಕ್ತ ಫೆಬ್ರವರಿ 9 ರಂದು ರಾತ್ರಿ ಕೇರಳದ ಖ್ಯಾತ ಗಾಯಕ, ವಾಗ್ನಿ ಅಬ್ದುಸ್ಸಮದ್ ದಾರಿಮಿ ಕೊಳತ್ತರ ಕೇರಳ ಮತ್ತು ಬಳಗದವರಿಂದ ಇಸ್ಲಾಮಿಕ್ ‘ಕಥಾ ಪ್ರಸಂಗ’ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅವರು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸೆಕ್ರೆಟಿಯೇಟ್ ಸದಸ್ಯ ಅಬ್ದುಲ್ ಕರೀಂ ದಾರಿಮಿ, ರೆಂಜಲಾಡಿ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಹಾಜಿ, ಸ್ವಾಗತ ಸಮಿತಿ ಚೆರ್ ಮೆನ್ ಉಮರ್ ಸುಲ್ತಾನ್ ರೆಂಜಲಾಡಿ, ಸ್ವಾಗತ ಸಮಿತಿ ಜನರಲ್ ಕನ್ವೀನರ್ ಪಿ.ಕೆ.ಮುಹಮ್ಮದ್ ಉಪಸ್ಥಿತರಿದ್ದರು.