ಫೆ.10: ಕಿಲ್ಲೆ ಮೈದಾನದಲ್ಲಿ ಆಹ್ವಾನಿತ ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ – ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಆಯೋಜನೆ

0

ಪುತ್ತೂರು: ಸೆವನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್‌ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ದಿI ಅಖಿಲೇಶ್ ಸ್ಮರಣಾರ್ಥ ಹೊನಲು ಬೆಳಕಿನ ಲೀಗ್ ಮಾದರಿಯ ಪುರುಷರ ಆಹ್ವಾನಿತ 8 ತಂಡಗಳ ವಾಲಿವಾಲ್ ಪಂದ್ಯಾಟವು ಫೆ. 10ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಶರತ್ ಆಳ್ವ ಕೂರೇಲು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ‘ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ 8 ತಂಡಗಳು ಭಾಗವಹಿಸಲಿವೆ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಗುರುತಿಸಿಕೊಂಡ ಆಟಗಾರರು ತಂಡಗಳಲ್ಲಿ ಆಡಲಿದ್ದಾರೆ. ವಾಲಿಬಾಲ್ ಕ್ರೀಡೆಯನ್ನು ಉಳಿಸಿ ಬೆಳಸುವ ಮತ್ತು ಕ್ರೀಡಾಭಿಮಾನಿಗಳಿಗೆ ಉತ್ಕೃಷ್ಟ ಮಟ್ಟದ ಕ್ರೀಡಾ ಮನರಂಜನೆ ನೀಡಬೇಕೆಂಬುದು ನಮ್ಮ ಆಶಯವಾಗಿದೆ’ ಎಂದರು.

ತಂಡಗಳು ಮತ್ತು ಪ್ರಾಯೋಜಕರು
ಪುತ್ತೂರು ಕ್ಲಬ್ ತಂಡವನ್ನು ಡಾ. ದೀಪಕ್ ರೈ ಮತ್ತು ವಿಶ್ವಾಸ್ ಶೆಣೈಯವರು ಪ್ರಾಯೋಜಿಸಲಿದ್ದಾರೆ. ಟೀಮ್ ಮಿತ್ತಳಿಕೆ’ ತಂಡವನ್ನು ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಸೂರ್ಯನಾಥ ಆಳ್ವರವರು, ಎ.ಆರ್. ವಾರಿಯರ್ಸ್ ತಂಡವನ್ನು ಉದ್ಯಮಿ ಪ್ರಜ್ವಲ್ ರೈ ಪಾತಾಜೆ, ರುತ್ವಿ ಚಾಲೆಂಜರ್ಸ್ ತಂಡವನ್ನು ಉದ್ಯಮಿ ಜನಾರ್ದನ ಪಡುಮಲೆ, ರತ್ನ ಶ್ರೀ ತಂಡವನ್ನು ಉದ್ಯಮಿ ಪವನ್ ಶೆಟ್ಟಿ, ಬೇರಿಕೆ ಬ್ರಿಗೇಡಿಯರ್ಸ್ ತಂಡವನ್ನು ವಕೀಲರಾದ ಬೇರಿಕೆ ರಾಮಪ್ರಸಾದ್ ಶೆಟ್ಟಿ, ಸುಶಾಂತ್ ಕ್ಯಾಟರರ್ಸ್ ತಂಡವನ್ನು ಉದ್ಯಮಿ ರಾಧಾಕೃಷ್ಣ ರೈ ಹಾಗೂ ಆಳ್ವಾಸ್ ತಂಡವನ್ನು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವರವರು ಪ್ರಾಯೋಜಿಸಲಿದ್ದಾರೆ.

ಬಹುಮಾನಗಳು
ಪಂದ್ಯಾಕೂಟದ ಪ್ರಥಮ ಬಹುಮಾನವಾಗಿ ರೂ. 25,000 ನಗದು ಮತ್ತು ಫಲಕ, ದ್ವಿತೀಯ ರೂ. 15000 ನಗದು ಮತ್ತು ಫಲಕ, ತೃತೀಯ ರೂ. 10,000 ಮತ್ತು ಫಲಕ, ಚತುರ್ಥ ರೂ. 7000 ಮತ್ತು ಫಲಕ ನೀಡಲಾಗುತ್ತದೆ. ಅದರ ಜೊತೆಗೆ ಪ್ರತೀ ಪಂದ್ಯಶ್ರೇಷ್ಠನಿಗೆ ನಗದು ಬಹುಮಾನ ಮತ್ತು ಸರಣಿ ಶ್ರೇಷ್ಠ ಆಟಗಾರನಿಗೆ ಹೀರೋ ಸೈಕಲ್ ಬಹುಮಾನವಾಗಿ ದೊರೆಯಲಿದೆ ಎಂದು ಶರತ್ ಆಳ್ವ ತಿಳಿಸಿದರು.

ಗಣ್ಯರ ಆಗಮನ
ಪಂದ್ಯಾಕೂಟವನ್ನು ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಚಿತ್ರನಟರಾದ ದೀಪಕ್ ರೈ ಪಾಣಾಜೆ, ಆರ್ಯನ್ ಶೆಟ್ಟಿ, ಸುಂದರ ರೈ ಮಂದಾರ, ನಿರೀಕ್ಷಾ ಶೆಟ್ಟಿ ಭಾಗವಹಿಸಲಿದ್ದಾರೆ’ ಎಂದು ಶರತ್ ರವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸೆವೆನ್ ಡೈಮಂಡ್ಸ್ ಕ್ಲಬ್ ನ ಉಪಾಧ್ಯಕ್ಷ ಶಿವರಾಮ ಭಟ್ ಪೆರ್ಲಂಪಾಡಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಿ.ಆರ್., ಕೋಶಾಧಿಕಾರಿ ಗುಣಕರ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here