ಫೆ.11ಕ್ಕೆ ಯುವ ಒಕ್ಕಲಿಗ ಗೌಡರ ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ – ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬೆಳಿಗ್ಗೆ ಕ್ರೀಡಾ ಜ್ಯೋತಿ ಜಾಥಾ

0

ಊರ ಗೌಡರಿಂದ ಕ್ರೀಡಾ ಸಂಭ್ರಮಕ್ಕೆ ಚಾಲನೆ
ರಾಷ್ಟ್ರ, ರಾಜ್ಯಮಟ್ಟದ ಸಾಧಕರಿಗೆ ಸನ್ಮಾನ
30ರಿಂದ 40ಮಂದಿ ತೀರ್ಪುಗಾರರು
8 ಗುಂಪಾಟ, ಎಲ್ಲಾ ವಯೋಮಾನದವರಿಗೂ ಸ್ಪರ್ಧೆ

ಪುತ್ತೂರು: ಯುವ ಒಕ್ಕಲಿಗ ಗೌಡರ ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2024 ಫೆ.11ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದೊಂದಿಗೆ ಯುವ ಒಕ್ಕಲಿಗ ಗೌಡ ಸೇವಾ ಸಂಘ ಬನ್ನೂರು ವಲಯದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸೇವಾ ಸಂಘ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಹಕಾರದೊಂದಿಗೆ ಪುತ್ತೂರು ತಾಲೂಕು ಮಟ್ಟದ ಕ್ರೀಡಾ ಸಂಭ್ರಮ ನಡೆಯಲಿದ್ದು, ಅಂದು ಬೆಳಿಗ್ಗೆ ಗಂಟೆ 7.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ವಿವೇಕಾನಂದ ಶಾಲಾ ಕ್ರೀಡಾಂಗಣದ ತನಕ ಕ್ರೀಡಾಜ್ಯೋತಿ ಜಾಥ ನಡೆಯಲಿದ್ದು, ಪ್ರಗತಿಪರ ಕೃಷಿಕರಾದ ಯಶೋಧ ಮೋನಪ್ಪ ಗೌಡ ತೆಂಕಪ್ಪಾಡಿ ಅವರು ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ ಗಂಟೆ 8.45ಕ್ಕೆ ಪಡ್ನೂರಿನ ಊರ ಗೌಡರಾಗಿರುವ ಸಂಕಪ್ಪ ಗೌಡ ಕುಂಬಾಡಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಗಂಟೆ 11ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ, ಚಿಕ್ಕಮಗಳೂರು ಮಾಜಿ ಶಾಸಕ ಸಿ.ಟಿ ರವಿ ಪ್ರಧಾನ ಉಪಸ್ಥಿತಿಯಲ್ಲಿರುತ್ತಾರೆ. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಧ್ವಜಾರೋಹಣ ಮಾಡಲಿದ್ದಾರೆ. ಎಸ್.ಆರ್.ಕೆ.ಲ್ಯಾಡರ್ಸ್‌ ನ ಮಾಲಕ ಪಿ.ಕೇಶವ ಗೌಡ ಅಮೈ ಕಲಾಯಿಗುತ್ತು ವೇದಿಕೆಯ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಶಾಸಕರಾಗಿರುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಸಂಜೀವ ಮಠಂದೂರು ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ, ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಮಚಂದ್ರ ಕೆ, ಡಿವೈಎಸ್ಪಿ ಅರುಣ್ ನಾಗೇಗೌಡ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಇದರ ಪ್ರಧಾನ ಕಾರ್ಯದರ್ಶಿ ರಂಗೇ ಗೌಡ, ದ.ಕ.ಗೌಡ ವಿದ್ಯಾವರ್ಧಕ ಸಂಘದ ಧನಂಜಯ ಅಡ್ಪಂಗಾಯ, ತಾ.ಪಂ ಮಾಜಿ ಸದಸ್ಯೆ ನೇತ್ರಾವತಿ ಕೆ.ಪಿ.ಗೌಡ ಸಹಿತ ಅನೇಕ ಮಂದಿ ಅತಿಥಿಗಳು ಉಪಸ್ಥಿತಿಯಲ್ಲಿರುತ್ತಾರೆ ಎಂದರು.


ಸಂಜೆ ಸಮಾರೋಪ:
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ ಗೌಡ, ಲೋಕೋಪಯೋಗಿ ಸುಬ್ರಹ್ಮಣ್ಯ ವಿಭಾಗದ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ, ನಿತ್ಯ ಫುಡ್ ಪ್ರೊಡಕ್ಟ್ ಮಾಲಕ ರಾಧಾಕೃಷ್ಣ ಗೌಡ ಇಟ್ಟಿಗುಂಡಿ, ಉದ್ಯಮಿ ಮಂಜುನಾಥ ಗೌಡ ತೆಂಕಿಲ, ಶೇಖರ್ ಗೌಡ ಬನ್ನೂರು, ಕೇಪುಳು ಜ್ಯೋತಿ ಇಲೆಕ್ಟ್ರಿಕಲ್ಸ್‌ನ ಮಾಲಕ ಸುಂದರ ಗೌಡ, ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷೆ ವಾರಿಜ ಕೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ್ ಡಿ.ವಿ ಸಹಿತ ಅನೇಕ ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಧವ ಗೌಡ ಪೆರಿಯತ್ತೋಡಿ ಹೇಳಿದರು.


ರಾಷ್ಟ್ರ, ರಾಜ್ಯಮಟ್ಟದ ಸಾಧಕರಿಗೆ ಸನ್ಮಾನ:

ಸಮಾಜದ ಪ್ರತಿಭಾವಂತ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿದ್ದಾರೆ. ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುವುದು. ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಏನೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಮಾಧವ ಗೌಡ ಪೆರಿಯತ್ತೋಡಿ ತಿಳಿಸಿದರು.


30 ರಿಂದ 40 ಮಂದಿ ತೀರ್ಪುಗಾರರು:
6 ವಲಯಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರು ತಾಲೂಕುಮಟ್ಟದಲ್ಲಿ ಭಾಗವಹಿಸಲಿದ್ದು, ಎಲ್ಲಾ ಕ್ರೀಡೆಗಳು ಏಕಕಾಲದಲ್ಲಿ ನಡೆಯಲಿದೆ. ಹಾಗಾಗಿ ಸುಮಾರು 30ರಿಂದ 40ಮಂದಿ ತೀರ್ಪುಗಾರರು ಸಮಯೋಚಿತವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಬೆಳಗ್ಗಿನಿಂದ ಆರಂಭಗೊಳ್ಳುವ ಕ್ರೀಡೆಯು ಸಭಾ ಕಾರ್ಯಕ್ರಮದಲ್ಲಿ ವಿರಾಮವಿರುತ್ತದೆ ಎಂದು ಮಾಧವ ಗೌಡ ಪೆರಿಯತ್ತೋಡಿ ತಿಳಿಸಿದರು.

8 ಗುಂಪಾಟ, ಎಲ್ಲಾ ವಯೋಮಾನದವರಿಗೂ ಸ್ಪರ್ಧೆ:
ಕಳೆದ 14 ರ‍್ಷಗಳಿಂದಲೂ ಸತತವಾಗಿ ಯುವ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಕ್ರೀಡಾಕೂಟ ಬಹಳ ಅದ್ದೂರಿಯಾಗಿ ನಡೆಯುತ್ತಾ ಬಂದಿದೆ. ಈ ಹಿಂದೆ 7 ವಲಯಗಳಿದ್ದು, ಇದೀಗ ಕಡಬ ಹೊರತು ಪಡಿಸಿ 6 ವಲಯಗಳಲ್ಲಿ ಕ್ರೀಡಾಕೂಟ ನಡೆದಿದೆ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 8 ಗುಂಪಾಟಗಳು, ಮಹಿಳೆಯರಿಗೆ, ಪುರುಷರಿಗೆ, ಬಾಲಕ ಬಾಲಕಿಯರಿಗೆ, 50 ರ‍ ಮೇಲ್ಪಟ್ಟವರಿಗೂ ಕ್ರೀಡಾ ಕೂಟ ನಡೆಯಲಿದೆ. ಪುರುಷರಿಗೆ ವಾಲಿಬಾಲ್, ಕ್ರಿಕೆಟ್, ಟೆನ್ನಿಸ್ ಬಾಲ್, ಹಗ್ಗಜಗ್ಗಾಟ, ಕಬಡ್ಡಿ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, 200ಮೀ ಓಟ, ರಿಲೆ 4*100 ಮೀ. 17ರ ವಯೋಮಾನದ ಹುಡುಗರಿಗೆ ಕಬಡ್ಡಿ, 100ಮೀ ಓಟ, 400 ಮೀ ಓಟ, ರಿಲೇ 4*100 ಮೀ, ಹುಡುಗಿಯರಿಗೆ 100ಮೀ ಓಟ, 200ಮೀ ಓಟ, 400ಮೀ ಓಟ, ರಿಲೇ 4*100 ಮೀ. 14ರ ವಯೋಮಾನದ ಹುಡುಗರಿಗೆ ಮತ್ತು ಹುಡುಗಿಯರಿಗೆ 100 ಮೀ ಓಟ, 200 ಮೀ ಓಟ, ರಿಲೇ 4*100 ಮೀ, ಮಹಿಳೆಯರು ಮತ್ತು ಪ್ರೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ನಡೆಯಲಿದೆ. 50 ರ‍ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ 100 ಮೀ ಓಟ ಮತ್ತು ಗುಂಡೆಸೆತ ಸ್ಪರ್ಧೆ ನಡೆಯಲಿದೆ ಎಂದು ಮಾಧವ ಗೌಡ ಪೆರಿಯತ್ತೋಡಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕರ‍್ಯರ‍್ಶಿ ಆನಂದ ಗೌಡ ತೆಂಕಿಲ, ಕ್ರೀಡಾ ಕರ‍್ಯರ‍್ಶಿ ಪವನ್ ಗೌಡ ದೊಡ್ಡಮನೆ, ಬನ್ನೂರು ವಲಯದ ಅಧ್ಯಕ್ಷ ಮೋಹನ್ ಕಬಕ, ಸಂಘಟನಾ ಕರ‍್ಯರ‍್ಶಿ ವಸಂತ ನೆಕ್ರಾಜೆ ಉಪಸ್ಥಿತರಿದ್ದರು.


ಪುತ್ತೂರಿನ 6 ವಲಯದಲ್ಲಿ ವಿಜೇತರಿಗೆ ಅವಕಾಶ:
ಪುತ್ತೂರಿನಲ್ಲಿ 6 ವಲಯವಿದ್ದು, ಪುತ್ತೂರು ವಲಯದಲ್ಲಿ ಪುತ್ತೂರು ಕಸಬ, ಕೆಮ್ಮಿಂಜೆ, ಆರ್ಯಾಪು, ಇರ್ದೆ ಬೆಟ್ಟಂಪಾಡಿ, ಕೊಡಿಪ್ಪಾಡಿ, ಬಲ್ನಾಡು, ಈಶ್ವರಮಂಗಲ ವಲಯದಲ್ಲಿ ನೆಟ್ಟಣಿಗೆಮುಡ್ನೂರು, ಪಡುವನ್ನೂರು, ಬಡಗನ್ನೂರು, ಕಾವು ಮಾಡ್ನೂರು, ನೆಟ್ಟಣಿಗೆ ಬೆಳ್ಳೂರು, ನಿಡ್ಪಳ್ಳಿ, ಉಪ್ಪಿನಂಗಡಿ ವಲಯದಲ್ಲಿ ಉಪ್ಪಿನಂಗಡಿ, ಹಿರೇಬಂಡಾಡಿ-ಬಜತ್ತೂರು, ನೆಕ್ಕಿಲಾಡಿ, ಕೋಡಿಂಬಾಡಿ, ಮುಂಡೂರು ವಲಯದಲ್ಲಿ ಮುಂಡೂರು, ಕುರಿಯ, ನರಿಮೊಗರು, ಶಾಂತಿಗೋಡು, ಸರ್ವೆ, ಕುಂಬ್ರ ವಲಯದಲ್ಲಿ ಒಳಮೊಗ್ರು, ಕೆದಂಬಾಡಿ, ಕೆಯ್ಯೂರು, ಕೊಳ್ತಿಗೆ, ಅರಿಯಡ್ಕ, ಬನ್ನೂರು ವಲಯದಲ್ಲಿ ಕಬಕ, ಬೆಳ್ಳಿಪ್ಪಾಡಿ, ಪಡ್ನೂರು, ಬನ್ನೂರು, ಚಿಕ್ಕಮುಡ್ನೂರು ಸೇರಿಕೊಂಡಿದ್ದು, ಈ ಎಲ್ಲಾ ವಲಯಗಳಲ್ಲಿ ಈಗಾಗಲೇ ಕ್ರೀಡಾಕೂಟ ನಡೆದಿದ್ದು, ಅದರಲ್ಲಿ ವಿಜೇತರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕಲಿಗ ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಹೇಳಿದರು.

LEAVE A REPLY

Please enter your comment!
Please enter your name here