ಪುತ್ತೂರು: ಬಾರೆಬೆಟ್ಟು ಮಲರಾಯ ಜಾತ್ರೆ ಪ್ರಯುಕ್ತ ಫೆ.3ರಂದು ಸಾಯಿ ಕಲಾ ಯಕ್ಷ ಬಳಗ ಬಾಲವನ ಪುತ್ತೂರು ಇವರಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ನಡೆಯಿತು.
ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಇವರ ನಿರ್ದೇಶನದಲ್ಲಿ ಪ್ರಸ್ತುತಗೊಂಡ ಯಕ್ಷಗಾನದಲ್ಲಿ ರಚನಾ ಚಿದ್ಗಲ್ ಮತ್ತು ಸಿಂಚನ ಮೂಡುಕೋಡಿ ಭಾಗವತರಾಗಿದ್ದರು. ಚೆಂಡೆ ಮದ್ದಳೆಯಲ್ಲಿ ಬಾಲಸುಬ್ರಮಣ್ಯ ಭಟ್ ಗುತ್ತಿಗಾರು, ಲಕ್ಷ್ಮೀಶ ಶಗ್ರಿತ್ತಾಯ ಪಂಜ, ಗಗನ್ ಮತ್ತು ದರ್ಶನ್ ಇವರು ಸಹಕರಿಸಿದರು. ಹಾಸ್ಯ ವಿದೂಷಕರಾಗಿ ಸಚ್ಚಿದಾನಂದ ಪ್ರಭು ಆಜೇರು ಇವರು ವಿಶೇಷ ಪಾತ್ರ ನಿರ್ವಹಿಸಿದರು.
ಪಾತ್ರವರ್ಗದಲ್ಲಿ ಕಂಸಾಸುರನಾಗಿ ಪ್ರೇಮ ಕಿಶೋರ್ ಪುತ್ತೂರು ಮತ್ತು ಶ್ರುತಿ ವಿಸ್ಮಿತ್ ಬಲ್ನಾಡು, ಶ್ರೀದೇವಿಯಾಗಿ ಶಾಲಿನಿ ಅರುಣ್ ಶೆಟ್ಟಿ, ದೇವೇಂದ್ರನಾಗಿ ಜ್ಯೋತಿ ಅಶೋಕ್, ವ್ಯೇಳಾಸುರನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ, ಮಹಿಷಾಖ್ಯನಾಗಿ ಡಾ. ಅನನ್ಯಲಕ್ಷ್ಮಿ ಸಂದೀಪ್, ಕೋಲಮುನಿಯಾಗಿ ರಾಜೀವಿ ನಾಗೇಶ್, ಶಚಿಯಾಗಿ ಸುರೇಖಾ ಅಶೋಕ್ ರೈ, ಷಣ್ಮುಖನಾಗಿ ರೇಣುಕ ಗೌಡ, ಅಗ್ನಿಯಾಗಿ ಸಂಜನಾ ಮೂಡುಕೋಡಿ, ವರುಣನಾಗಿ ವಿಸ್ಮಿತಾ ರೈ, ಹುಂಡಾಸುರನಾಗಿ ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ಪುಂಡಾಸುರನಾಗಿ ಆತ್ಮಿಕ್ ಇವರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಗುರುಗಳಾದ ಬಾಲಸುಬ್ರಮಣ್ಯ ಭಟ್ ಮತ್ತು ತಂಡದ ನಾಯಕಿ ಪ್ರೇಮ ಕಿಶೋರ್ ಇವರನ್ನು ಸನ್ಮಾನಿಸಲಾಯಿತು. ಉಳಿದ ಎಲ್ಲರನ್ನು ಶಾಲು ಹಾಕಿ ಗೌರವಿಸಲಾಯಿತು.