ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್ -ಪುತ್ತೂರಿನಲ್ಲಿ ಅಭಿಮಾನಿ ಬಳಗದ ಸಭೆ- ಸತ್ಯ ಮಾಡಿದ ತಪ್ಪು ಯಾವುದು ? ಸತ್ಯಜಿತ್ ಸುರತ್ಕಲ್‌ರಿಂದ ಬಿಜೆಪಿಗೆ ಪ್ರಶ್ನೆ

0

ಪುತ್ತೂರು: ಕಳೆದ 37 ವರ್ಷ ಸಂಘ, ಸಂಘಟನೆ, ಪಕ್ಷ ಎಂದು ತನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ಪಕ್ಷದಿಂದ ಕೊಟ್ಟ ಜವಾಬ್ದಾರಿಯನ್ನೂ ಅಚ್ಚಕಟ್ಟಾಗಿ ನಿಭಾಯಿಸಿದ್ದೇನೆ. ಆದರೆ ನನ್ನನ್ನು ಹೊರ ಹಾಕುವ ಪ್ರಯತ್ನ ನಡೆಯಿತು. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಯಿತು. ಆದರೂ ನಾನು ಪಕ್ಷದ ಕುರಿತು ಯಾವುದೇ ಅಪವಾದ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಸತ್ಯ ಮಾಡಿದ ತಪ್ಪಾದರೂ ಏನು ಎಂದು ಬಿಜೆಪಿಯನ್ನು ಪ್ರಶ್ನಿಸಿದ ಸತ್ಯಜಿತ್ ಸುರತ್ಕಲ್ ಅವರು ಕಾರ್ಯಕರ್ತರ ಒತ್ತಡದಂತೆ ಹಿಂದುತ್ವದ ಹೋರಾಟಗಾರರಿಗೆ ನ್ಯಾಯ ಸಿಗಬೇಕು. ನಿಷ್ಠೆಯಲ್ಲಿ ಪ್ರಾಮಾಣಿಕತೆಯಲ್ಲಿ ಕೆಲಸ ಮಾಡಿದವರಿಗೆ ಅವಕಾಶ ಸಿಗಬೇಕು ಎಂಬ ನೆಲೆಯಲ್ಲಿ ಇವತ್ತು ಅಂತಿಮವಾಗಿ ನಿರ್ಣಾಯಕ ಹಂತದಲ್ಲಿ ಕಾರ್ಯಕರ್ತರ ಒತ್ತಡದ ಮೇರೆಗೆ ನಾನೊಬ್ಬ ನಿಮಿತ್ತವಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರಲ್ಲದೆ ಲೋಕಸಭಾ ಸ್ಥಾನಕ್ಕೆ ನನಗೆ ಅವಕಾಶ ನೀಡುವಂತೆ ಕಾರ್ಯಕರ್ತರ ಆಗ್ರಹಕ್ಕೆ ನಾನು ಜೊತೆಗಿದ್ದೇನೆ ಎಂದರು.

‘ಈ ಬಾರಿ ನಮ್ಮೆಲ್ಲರ ಆಯ್ಕೆ ಸತ್ಯಜಿತ್ ಸುರತ್ಕಲ್’ ಎಂಬ ಹೆಸರಿನಲ್ಲಿ ದ.ಕ ಜಿಲ್ಲಾ ಅಭಿಮಾನಿ ಬಳಗದ ಪುತ್ತೂರು ತಾಲೂಕು ಘಟಕದದಿಂದ ಪುತ್ತೂರು ರೋಟರಿ ಮನಿಶಾ ಹಾಲ್‌ನಲ್ಲಿ ಫೆ.8 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದರು. ಸಂಸದ ಸ್ಥಾನ ಎರಡು ಮೂರು ಸಲ ಆದ ಬಳಿಕ ಬದಲಾವಣೆ ಆಗುತ್ತದೆ. ಕಾರ್ಯಕರ್ತರ ಆಧಾರದಲ್ಲಿ ಸಂಘದ ವ್ಯವಸ್ಥೆಯಲ್ಲಿರುವ ಜಿಲ್ಲೆಯಲ್ಲಿ ಈ ಬಾರಿ ಈಗಿರುವ ಸಂಸದರಿಗೆ ಮೂರು ಭಾರಿ ಅವಕಾಶ ಆಗಿದೆ. ಹಾಗಾಗಿ ಈ ಬಾರಿ ಬದಲಾವಣೆ ಆಗಬೇಕು. ಆದರೆ ಪಕ್ಷ ಯಾಕಾಗಿ ಪಕ್ಷ ನನಗೆ ಅವಕಾಶ ನೀಡಿಲ್ಲ ಎಂಬುದೇ ಪ್ರಶ್ನೆ. 2ನೇ ಬಾರಿಗೆ ನಳಿನ್ ಕುಮಾರ್ ಕಟೀಲ್‌ಗೆ ಸಿಗುವ ಅವಕಾಶದಲ್ಲಿ ಗೊಂದಲ ಉಂಟಾದಾಗ ಸಂಘದ ಜವಾಬ್ದಾರಿ ನೆಲೆಯಲ್ಲಿ ಪರಿಹಾರ ಮಾಡಲು ನಾನು ಹೋಗಿದ್ದೆ. ಆದರೆ ಮುಂದಿನ ದನ ಪಕ್ಷಕ್ಕೆ ಬಂದಾಗ ಪಕ್ಷದಿಂದ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೆ. ಅದರೆ ಪಕ್ಷದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿತ್ತು. ಯಾಕೆಂದರೆ ಸತ್ಯನೊಂದಿಗೆ ಕಾರ್ಯಕರ್ತರು ಹೋಗುತ್ತಾರೆ. ಅವರಿಗೆ ಶಕ್ತಿ ಸಾಮಾರ್ಥ್ಯ ಉಂಟು. ನಾಳೆ ಎಲ್ಲಿ ನಾವು ಮೂಲೆಗುಂಪಾಗುವುತ್ತೇವೆ ಎಂಬ ಭಯದಿಂದ ಪಕ್ಷ ಪ್ರಮುಖರು ನನ್ನನ್ನು ದೂರ ಮಾಡಿದ್ದಾರೆ. ಹಿಂದು ಪರ ಸಂಘಟನೆ ಪಕ್ಷದ ನಿಷ್ಟಾವಂತ ಕೆಲಸ ಮಾಡಿರುವುದು ತಪ್ಪಾ ಎಂದು ಪ್ರಶ್ನಿಸಿದ ಸತ್ಯಜಿತ್ ಸುರತ್ಕಲ್ ಅವರು ಹಿಂದು ಪರ ಹೋರಾಟ ಮಾಡುವ ಸಂದರ್ಭದಲ್ಲಿ ನಾಯಕರೆಂದು ಹೇಳಿಕೊಳ್ಳುವವರು ಅನೇಕ ಘಟನೆಗಳಲ್ಲಿ ಕಲ್ಲುತೂರಾಟ ಆಗುತ್ತದೆ ಎಂದು ಹಿಂದೆ ಸರಿಯುವವರಿದ್ದಾರೆ. ಆದರೆ ಇವೆಲ್ಲವನ್ನು ಮೆಟ್ಟಿ ಅಂದು ಹೋರಾಟಕ್ಕೆ ದುಮುಕ್ಕಿದ್ದೇನೆ. ಹಾಗಾಗಿ ನನ್ನ ಜೊತೆ ಹಿಂದೆ ಹೋರಾಟದಲ್ಲಿ ತೊಂದರೆ ಅನುಭವಿಸಿದವರು, ಸಮಸ್ಯೆಯಲ್ಲಿರುವವರು ಇವತ್ತಿಗು ನನ್ನನ್ನು ನೆನಪು ಮಾಡಿ ಕರೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಪಕ್ಷ ಮಾತ್ರ ನನ್ನನ್ನು ನೆನಪು ಮಾಡುತ್ತಿಲ್ಲ. ಯಾಕೆ ನಾನು ಪಕ್ಷಕ್ಕೆ ಬರಬಾರದು ಎಂದು ಇವತ್ತಿಗೂ ಹೇಳಿಲ್ಲ. ನನ್ನಿಂದ ಏನು ತಪ್ಪಾಗಿದೆ. ಒಂದು ವೇಳೆ ನನ್ನಿಂದ ತಪ್ಪಾಗಿದೆ ಎಂದು ಹೇಳಲಿ. ಆಗ ನಾನು ಸಾಮಾನ್ಯ ಕಾರ್ಯಕರ್ತನಾಗಿ ಬಂದು ಕೆಲಸ ಮಾಡುತ್ತೇನೆ ಎಂದಿದ್ದೆ. ಆದರೆ ಅದಕ್ಕೂ ಕಳೆದ 6 ವರ್ಷಗಳಿಂದ ಇವತ್ತಿನ ತನಕ ಉತ್ತರ ಸಿಕ್ಕಿಲ್ಲ ಎಂದು ಹೇಳಿಕೊಂಡರು.

ಹಿಂದು ಸಮಾಜ ಗಟ್ಟಿಯಾಗಬೇಕಾದರೆ ಸತ್ಯಣ್ಣ ಬೇಕು:
ಗಿರೀಶ್ ಪಡ್ಡಾಯೂರು ಸ್ವಾಗತಿಸಿ ಮಾತನಾಡಿ 1998 ರಲ್ಲೇ ನಾನು ಸತ್ಯಣ್ಣನ ಜೊತೆ ಇದ್ದವನು. ಸಂಘಟನೆಯಲ್ಲಿ ಸತ್ಯಣ್ಣ ನೇ ನನಗೆ ಎಲ್ಲಾ ರೀತಿಯಲ್ಲೂ ಸಹಕರಿಸಿದವರು. ಹಾಗಾಗಿ ನಾನು ಅವತ್ತೂ ಇದ್ದೆ. ಇವತ್ತೂ ಇದ್ದೆನೆ. ಅವರಿಗೆ ಅವಕಾಶ ಎಷ್ಟೋ ಹಿಂದೆ ಬಂದಿತ್ತು. ಆದರೆ ಅವರು ತ್ಯಾಗಮಯಿ. ಬೇರೆಯವರಿಗೆ ತನ್ನ ಸ್ಥಾನ ಬಿಟ್ಟುಕೊಟ್ಟವರು. ಹಿಂದುತ್ವಕ್ಕಾಗಿ ಕೆಲಸ ಮಾಡಿವರು.ಇವತ್ತು ಹಿಂದು ಸಮಾಜ ಗಟ್ಟಿಯಾಗಬೇಕಾದರೆ ಸತ್ಯಣ್ಣ ಬೇಕು. ನಾವು ಇವತ್ತು ಪ್ರಮುಖರ ಸಭೆ ಕರೆದಿರುವುದು. ಸಮಾವೇಶವಲ್ಲ ಎಂದರು.

ಸತ್ಯಜಿತ್ ಸುರತ್ಕಲ್ ಅವರಿಗೆ ಲೋಕಸಭಾ ಅಭ್ಯರ್ಥಿ ಸ್ಥಾನಕೊಡಬೇಕು:
ಸಾಮಾಜಿಕ ಹೋರಾಟಗಾರ ಸುದರ್ಶನ್ ಪುತ್ತೂರು ಅವರು ಮಾತನಾಡಿ ನಮ್ಮ ನಾಯಕ ನರೇಂದ್ರ ಮೋದಿಯೇ ಆಗಿದ್ದಾರೆ. ಆದರೆ ಹಿಂದು ಸಂಘಟನೆ ಬೇರೆ ಬೇರೆ ಸಂಘಟನೆಯಾಗಿ ಒಡಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅನ್ಯಾಯ ಆಗಿದೆ ಎಂದು ಅವರನ್ನು ಬೆಂಬಲಿಸಿದ್ದೆ. ಅದೇ ರೀತಿ ವಂಚಿತರಾದವರಲ್ಲಿ ಸತ್ಯಜಿತ್ ಸುರತ್ಕಲ್ ಕೂಡಾ ಒಬ್ಬರು. ಬಿಜೆಪಿಯಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಲಿಲ್ಲ. ಕಳೆದ ವಿಧಾನಸಭೆಯಲ್ಲಿ ಸಂಜೀವ ಮಠಂದೂರು ಅವರಿಗೆ ಅವರ ಜಾತಿಯವರೇ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಕರಾವಳಿ ಭಾಗದಲ್ಲಿ ಬಿಜೆಪಿಯಿಂದ ಮನನೊಂದವರು ಹಲವಾರು ಮಂದಿ ಇದ್ದಾರೆ. ಹಾಗಾಗಿ ಈ ಭಾರಿ ಹೊಸ ವ್ಯಕ್ತಿಗೆ ಅವಕಾಶ ಕೊಡಬೇಕು. ಯಾರನ್ನೋ ತಂದು ಅದು ಹೈಕಮಾಂಡ್ ತೀರ್ಮಾನ ಎಂದು ಒತ್ತಡ ಹಾಕಬಾರದು. ಅವರ ಬದಲು ಸತ್ಯಜಿತ್ ಸುರತ್ಕಲ್ ಅವರಿಗೆ ಲೋಕಸಭಾ ಅಭ್ಯರ್ಥಿ ಸ್ಥಾನ ಕೊಡಬೇಕೆಂದು ಆಗ್ರಹ ಮಾಡಿದರು. ವೇದಿಕೆಯಲ್ಲಿ ಸತ್ಯಜಿತ್ ಸುರತ್ಕಲ್ ಅವರ ಬೆಂಬಲಿಗರಾದ ಜಯಂತ್ ಪೂಜಾರಿ ಆಲಂಕಾರು, ಜನಾರ್ದನ ಪಡುಮಲೆ, ಸಂದೀಪ್ ಪಂಪ್ ವೆಲ್ ಉಪಸ್ಥಿತರಿದ್ದರು. ಧನಂಜಯ ಪಟ್ಲ, ಅವಿನಾಶ್ ಪುಣಚ, ಉದಯ್, ಮಹೇಶ್ ಅತಿಥಿಗಳನ್ನು ಗೌರವಿಸಿದರು. ಗಿರೀಶ್ ಪಡ್ಡಾಯೂರು ಸ್ವಾಗತಿಸಿದರು. ಪ್ರವೀಣ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here