ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಚೇರಿಯಲ್ಲಿ ‘ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ’ದ ಪೂರ್ವಭಾವಿ ಸಭೆ-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪಣತೊಡುವಂತೆ ಒಮ್ಮತದ ನಿರ್ಧಾರ

0

ವಿಟ್ಲ: ಅಖಿಲ ಭಾರತ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಫೆ.17ರಂದು ಮಂಗಳೂರಿನಲ್ಲಿ ನಡೆಯಲಿರುವ ‘ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ’ ದ ಪೂರ್ವಭಾವಿ ಸಭೆಯು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ಯವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿರವರ ಉಪಸ್ಥಿತಿಯಲ್ಲಿ ವಿಟ್ಲದ ಗಜಾನನ ಸಭಾಂಗಣದಲ್ಲಿ ನಡೆಯಿತು.

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಹಾಗೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪಣ ತೊಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂತು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಮ್ಮನ್ನು ಅಗಲಿದ ಪಕ್ಷದ ಹಿರಿಯ ನಾಯಕರಾದ ಪದ್ಮನಾಭ ನರಿಂಗಾನ ಮತ್ತು ಪೆರುವಾಯಿ ವಲಯ ಅಧ್ಯಕ್ಷರಾದ ಪಂಚಪಾಲ ಶೆಟ್ಟಿ ಯವರಿಗೆ ಸಂತಾಪ ಸೂಚಿಸಲಾಯಿತು.


ವಿಟ್ಲ-ಉಪ್ಪಿನಂಗಡಿ ಬ್ಲಾಕ್ ನಿಂದ ಸರ್ಕಾರದ ವಿವಿಧ ಸಮಿತಿ, ಮಂಡಳಿಗೆ ನಾಮ ನಿರ್ದೇಶೀತರಾದ ಪಕ್ಷ ಪ್ರಮುಖರಾದ ಜಗನ್ನಾಥ್ ಶೆಟ್ಟಿ ನಡುಮನೆ, ನಿರಂಜನ್ ರೈ ಮಠಂದಬೆಟ್ಟು, ದಾಮೋದರ್ ಮುರ, ಯುನಿಕ್ ಅಬ್ದುಲ್ ರಹ್ಮಾನ್, ರಾಮಣ್ಣ ಪಿಲಿಂಜ, ಮೊಹಮ್ಮದ್ ಇಕ್ಬಾಲ್, ಕೊಲ್ಯ ಶ್ರೀನಿವಾಸ್ ಶೆಟ್ಟಿ ವಿಟ್ಲ, ಸುನಿತಾ ಕೋಟ್ಯಾನ್, ಅಸ್ಮಾ ಉಮರ್, ಅಬ್ದುಲ್ ರಹಿಮಾನ್ ಕುರುಂಬಳ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ. ಎಸ್ ಮೊಹಮ್ಮದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಅಶ್ರಫ್ ಬಸ್ತಿಕರ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಮಾನಾಥ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರುಗಳಾದ ವಿ ಕೆ ಎಂ ಅಶ್ರಫ್, ವಿ ಅಬ್ದುಲ್ ರಹಿಮಾನ್, ಡಿಕಯ್ಯ ಸುರಲಿಮೂಲೆ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಪೂಜಾರಿ ಬಾಳೆಕಲ್ಲು, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕರೀಂ ಕುದ್ದುಪದವು, ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ, ಪಕ್ಷದ ಪ್ರಮುಖರಾದ ಕೃಷ್ಣರಾವ್ ಅರ್ತಿಳ, ಎಂ. ಕೆ .ಮುಸಾ, ಅಬ್ದುಲ್ ಖಾದರ್ ವಿಟ್ಲ, ಶ್ರೀಧರ್ ಶೆಟ್ಟಿ ಪುಣಚ, ಚಂದಪ್ಪ ಪೂಜಾರಿ ಬುಲೆರಿಕಟ್ಟೆ, ಜಯರಾಮ್ ಬಲ್ಲಾಳ್, ನಾರಾಯಣ ಗೌಡ ಬಲ್ನಾಡು, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಸೀತಾರಾಮ್ ಶೆಟ್ಟಿ ಅಳಿಕೆ, ರವೀಂದ್ರ ಗೌಡ ಪಟಾರ್ತಿ, ಸತೀಶ್ ಶೆಟ್ಟಿ ಹೆನ್ನಾಳ, ರಶೀದ್ ವಿ ಎ, ಅಬ್ದುಲ್ ನಾಸಿರ್ ಕೋಲ್ಪೆ, ಶಿವಚಂದ್ರ ನಿಡ್ಡೆಂಕಿ, ಸುಮಿತ್ ಶೆಟ್ಟಿ, ಅಬ್ದುಲ್ ಖಾದರ್ ನೆಕ್ಕಿಲಾಡಿ, ಚಂದ್ರಹಾಸ ಬುಲೆರಿಕಟ್ಟೆ, ಯುಸುಬ್ ಬುಳೇರಿಕಟ್ಟೆ. ಜಗದೀಶ್ ಶೆಟ್ಟಿ ಅಳಿಕೆ, ಲೋಕೇಶ್ ಗೌಡ ಪೆಲತ್ತಡಿ, ಗೀತಾ ದಾಸರಮೂಲೆ, ಭವಾನಿ ಮುರದಮೇಲು,ನೆಬಿಸ ಕೆದಿಲ, ಸರೋಜಿನಿ, ಪ್ರವೀಣಚಂದ್ರ ಶೆಟ್ಟಿ ಕೆದಿಲ, ಶೇಖ್ ಅಲಿ ಸೆರಾಜೆ, ಪ್ರವೀಣ್ ಶೆಟ್ಟಿ ಅಳಕೆಮಜಲಿ, ರಾಜೇಂದ್ರ ರೈ ಪೆರುವಾಯಿ, ಅಶೋಕ್ ಎನ್ ಎಸ್ ಡಿ, ಶೌಕತ್ ಕೆಮ್ಮಾರ, ಸಿದ್ದಿಕ್ ಕೆಂಪಿ, ಅಬ್ದುಲ್ ರಹ್ಮಾನ್(ಅದ್ರು), ಹಂಝ ವಿ .ಕೆ. ಎಂ, ಅಬ್ದುಲ್ ಲತೀಫ್ ದಲ್ಕಾಜೆ ಕೋಲ್ಪೆ, ಜೋನ್ಸನ್ ಶಿಬಾ,‌ ಸಿರಾಜ್ ಮಾಣಿಲ, ಅಬ್ಬು ನವಗ್ರಾಮ, ಎಸ್. ಕೆ. ಮೊಹಮ್ಮದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here