ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ-ಮಹಿಳೆಯಿಂದ ಕಡಬ ಠಾಣೆಯಲ್ಲಿ ದೂರು ದಾಖಲು

0

ಪುತ್ತೂರು: ಸಂತೋಷ ಎಂಬಾತ ಅಕ್ರಮವಾಗಿ ಮನೆಗೆ ಪ್ರವೇಶಿಸಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವುದಾಗಿ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚಂಡೆಹಿತ್ಲು ಮನೆ ನಿವಾಸಿ ಸ್ವಪ್ನಾ(48) ಎಂಬವರು ಕಡಬ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ವಪ್ನಾ ಅವರ ಜಮೀನಿನ ಪಕ್ಕದಲ್ಲಿ ಆರೋಪಿ ಸಂತೋಷ ಜಮೀನು ಹೊಂದಿದ್ದು, ಕಳೆ ತೆಗೆಯುವ ವಿಚಾರದಲ್ಲಿ ತಕರಾರು ಉಂಟಾಗಿರುತ್ತದೆ.‌ ಈ ಹಿನ್ನೆಲೆಯಲ್ಲಿ‌ ಆರೋಪಿ ಸಂತೋಷ ಮನೆಗೆ ಬಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಅ.ಕ್ರ:22-2024 ಕಲಂ:447,323.504.506 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here